ವಿಜಯಪುರ : ಕೊರೊನಾದಿಂದ ಮೃತಪಟ್ಟಿದ್ದ 50ಕ್ಕೂ ಅಧಿಕ ಮಂದಿಯ ಚಿತಾಭಸ್ಮವನ್ನು ವಿಪ್ರ ಕ್ರಿಯಾ ಕರ್ಮ ಟ್ರಸ್ಟ್ನ ಸದಸ್ಯರು ಕೃಷ್ಣಾ ನದಿಯಲ್ಲಿ ಸಮರ್ಪಿಸಿದ್ದಾರೆ. ಶವಸಂಸ್ಕಾರದ ಬಳಿಕ ಚಿತಾಭಸ್ಮವನ್ನು ಕುಟುಂಬಸ್ಥರು ತೆಗೆದುಕೊಂಡು ಹೋಗದೆ ಹಾಗೆಯೇ ಬಿಟ್ಟಿದ್ದರು. ಇದನ್ನು ಗಮನಿಸಿದ ಟ್ರಸ್ಟ್ ಧಾರ್ಮಿಕ ವಿಧಿವಿಧಾನದ ಅನ್ವಯ ಪೂಜೆ ಸಲ್ಲಿಸಿ ನದಿಯಲ್ಲಿ ಸಮರ್ಪಿಸಿದ್ದಾರೆ.
ವಿಜಯಪುರ ನಗರದ ದೇವಗಿರಿ ಸ್ಮಶಾನದಲ್ಲಿ ಸುಮಾರು 50ಕ್ಕೂ ಅಧಿಕ ಜನರ ಚಿತಾ ಭಸ್ಮವನ್ನು ಕಟ್ಟಿಡಲಾಗಿತ್ತು. ಇಂದು ವಿಪ್ರ ಕ್ರಿಯಾ ಕರ್ಮ ಟ್ರಸ್ಟ್ನ ಸದಸ್ಯರು ವಿಶೇಷ ಪೂಜೆ ಸಲ್ಲಿಸಿ ಆ ಚಿತಾಭಸ್ಮಗಳನ್ನು ಕೃಷ್ಣಾ ನದಿಯಲ್ಲಿ ಬಿಟ್ಟಿದ್ದಾರೆ.
ಲಾಕ್ಡೌನ್ ಹಾಗೂ ವಿವಿಧ ಕಾರಣಗಳಿಂದ ಕುಟುಂಬಸ್ಥರು ಈ ಚಿತಾಭಸ್ಮವನ್ನು ತೆಗೆದುಕೊಂಡು ಹೋಗದೇ ಅಲ್ಲಿಯೇ ಬಿಟ್ಟಿದ್ದರು. ಹಲವು ದಿನಗಳಿಂದ ಚಿತಾಭಸ್ಮ ಸ್ಮಶಾನದಲ್ಲಿ ಇಡಲಾಗಿತ್ತು. ಇದರಿಂದ ವಿಪ್ರ ಕ್ರಿಯಾ ಕರ್ಮ ಟ್ರಸ್ಟ್ ಇಲ್ಲಿನ ಆಲಮಟ್ಟಿ ಬಳಿಯ ಕೃಷ್ಣಾ ನದಿಯಲ್ಲಿ ದೋಣಿ ಮೂಲಕ ತೆರಳಿ ಅಸ್ಥಿಯನ್ನು ನದಿಗೆ ಅರ್ಪಿಸಿದ್ದಾರೆ.
ಓದಿ: ಪತಿ ಮೃತಪಟ್ಟ ಕೆಲವೇ ಗಂಟೆಯಲ್ಲಿ ಪ್ರಾಣ ಬಿಟ್ಟ ಪತ್ನಿ.. ಸಾವಿನಲ್ಲೂ ಒಂದಾದ ವೃದ್ಧ ದಂಪತಿ