ವಿಜಯಪುರ: ಮಹಾರಾಷ್ಟ್ರ ಚುನಾವಣೆ ರಿಸಲ್ಟ್ ವಿಚಾರದಲ್ಲಿ ಯತ್ನಾಳ್ ಹೇಳಿಕೆಗೆ ಅಪ್ಪು ಪಟ್ಟಣ ಶೆಟ್ಟಿ ಗರಂ ಆಗಿದ್ದು, ಸುಳ್ಳು ಮಾತನಾಡಿ ಬಿಲ್ಡಪ್ ತೆಗೆದುಕೊಳ್ತಾರೆ ಎಂದು ಆರೋಪಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಒಬ್ಬ 'ಬಿಲ್ಡಪ್ ಆಂಡ್ ಬೋಗಸ್' ಶಾಸಕ ಎಂದು ಜರಿದರು. ಸಂದರ್ಭ ಬಂದಂತೆ ಹೊರಳಾಡೋದು ಯತ್ನಾಳ್ ರಾಜಕಾರಣವಾಗಿದೆ. ಪಕ್ಷ ತಾಯಿ ಅಂತಾರೇ, ಪಕ್ಷದ ನಾಯಕರಿಗೆ ಬೈತಾರೆ. ಶೋಕಾಸ್ ನೋಟಿಸ್ ವಿಚಾರದಲ್ಲಿ ಉತ್ತರ ಕೊಡಲ್ಲ ಎಂದು ಆ ಮೇಲೆ ಹಿರಿಯ ನಾಯಕರ ಕೋಪಕ್ಕೆ ಗುರಿಯಾಗಿದ್ದಾರೆ ಎಂದರು.
ಯತ್ನಾಳ್ ಸುಳ್ಳಿನ ಹವಾದಲ್ಲಿ ಹೊರಟಿದ್ದಾರೆ. ವಿಜಯಪುರ ಜನ ಮುಗ್ಧರು, ಒಂದು ದಿನ ಅಸಲಿಯತ್ತು ಹೊರಗೆ ಬರುತ್ತೆ ಎಂದು ಕಿಡಿಕಾರಿದರು. ಯತ್ನಾಳರ ಯಡಿಯೂರಪ್ಪ ನಿಷ್ಠೆ, ಆರ್ ಎಸ್ ಎಸ್ ನಿಷ್ಠೆ, ಹಿಂದುತ್ವದ ನಿಷ್ಠೆಯ ಸತ್ಯ ಬಯಲಾಗಲಿದೆ ಎಂದು ಭವಿಷ್ಯ ನುಡಿದರು.
ಯತ್ನಾಳ್ ಇದನ್ನೆ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಮಾತನಾಡಲು ಇತಿ ಮಿತಿ ಇದೆ. ಮಿತಿ ಬಿಟ್ಟು ಮಾತನಾಡಿದರೇ ಹಿರಿಯರು ಕ್ರಮ ತೆಗೆದುಕೊಳ್ತಾರೆ ಎಂದರು. ನಾನು ಯತ್ನಾಳ್ ಕುರಿತು ಹೈಕಮಾಂಡ್ ಗೆ ಯಾವುದೇ ದೂರು ನೀಡಲು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.