ETV Bharat / state

ರಾತ್ರಿಯಿಡೀ ಕರ್ತವ್ಯ ನಿರ್ವಹಣೆ, ಬೆಳಿಗ್ಗೆ ಮ್ಯಾರಥಾನ್‌ ಓಟ: ಕಾನ್​ಸ್ಟೆಬಲ್ ಕ್ರೀಡಾಪ್ರೇಮಕ್ಕೆ ಮೆಚ್ಚುಗೆ

ರಾತ್ರಿ ಪಾಳಿಯ ಕೆಲಸ ಮುಗಿಸಿ ಮುಂಜಾನೆ ಮ್ಯಾರಥಾನ್​ನಲ್ಲಿ ಪಾಲ್ಗೊಂಡ ಪೊಲೀಸ್ ಕಾನ್​ಸ್ಟೆಬಲ್​ ಕ್ರೀಡಾಪ್ರೇಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Constable sportsmanship
Constable sportsmanship
author img

By ETV Bharat Karnataka Team

Published : Dec 26, 2023, 10:44 PM IST

ವಿಜಯಪುರ: ರಾತ್ರಿಯಿಡೀ ಕರ್ತವ್ಯ ನಿರ್ವಹಿಸಿ ನಸುಕಿನ ಜಾವ ನಡೆದ ವೃಕ್ಷೊಥಾನ್ ಹೆರಿಟೇಜ್ ರನ್-2023ರ 21 ಕಿಲೋ ಮೀಟರ್​ ಓಟದಲ್ಲಿ ಪಾಲ್ಗೊಂಡು ಜಿಲ್ಲಾ ಮೀಸಲು ಪೊಲೀಸ್ ಪಡೆಯ ಕಾನ್‌​ಸ್ಟೆಬಲ್​ ಒಬ್ಬರು ಕ್ರೀಡಾಭಿಮಾನ ಮೆರೆದಿದ್ದಾರೆ.

ಹಳಗುಣಕಿ ಗ್ರಾಮದ ಮತ್ತು ವಿಜಯಪುರ ಮೀಸಲು ಪಡೆ ಪೊಲೀಸ್ ಕಾನ್​ಸ್ಟೆಬಲ್​ ಭೀಮಾಶಂಕರ ಮಾಡಗ್ಯಾಳ (38) ಡಿಸೆಂಬರ್ 23ರಂದು ರಾತ್ರಿ ಕರ್ತವ್ಯ ನಿರ್ವಹಿಸಿದ್ದರು. ಮರುದಿನ ಡಿಸೆಂಬರ್ 24ರಂದು ರವಿವಾರ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ 21 ಕಿ.ಮೀ. ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲ, ಈ ಓಟವನ್ನು 2 ಗಂಟೆ 30 ನಿಮಿಷ 39 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದಾರೆ.

ಪೊಲೀಸ್ ಕರ್ತವ್ಯದ ಜೊತೆಗೆ ಓಡುವ ಹವ್ಯಾಸ ಹೊಂದಿರುವ ಭೀಮಾಶಂಕರ ಮಾಡಗ್ಯಾಳ ಅವರನ್ನು ಮಂಗಳವಾರ ನಗರದಲ್ಲಿ ವೃಕ್ಷೊಥಾನ್ ಹೆರಿಟೇಜ್ ರನ್- 2023 ಕೋರ್ ಕಮಿಟಿ ವತಿಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮಹಾಂತೇಶ ಬಿರಾದಾರ, ಭೀಮಾಶಂಕರ ಮಾಡಗ್ಯಾಳ ಅವರ ಕ್ರೀಡಾ ಪ್ರೀತಿ ಇತರರಿಗೆ ಸ್ಪೂರ್ತಿ. ರಾತ್ರಿಯಿಡೀ ಕರ್ತವ್ಯ ನಿರ್ವಹಿಸಿ ಬೆಳಿಗ್ಗೆ ಓಟದಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ ಮಾತಲ್ಲ. ಇವರ ಮುಂದಿನ ಕನಸುಗಳು ನನಸಾಗಲಿ ಎಂದು ಶುಭ ಕೋರಿದರು.

ವೃಕ್ಷೊಥಾನ್ ಹೆರಿಟೇಜ್ ರನ್-2023 ಕೋರ್ ಕಮಿಟಿ ಸದಸ್ಯರಾದ ನಂದೀಶ ಹುಂಡೆಕಾರ, ಆಕಾಶ ಚೌಕಿಮಠ, ಸಚಿನ ಪಾಟೀಲ, ಶಂಭು ಕರ್ಪೂರಮಠ, ಅಮಿತ ಬಿರಾದಾರ, ಅಪ್ಪು ಭೈರಗೊಂಡ, ಸೋಮಶೇಖರ ಸ್ವಾಮಿ, ಮಹೇಶ ವಿ.‌ಶಟಗಾರ, ಡಾ.ರಾಜು ಯಲಗೊಂಡ, ನಾವೇದ ನಾಗಠಾಣ, ಸಂಕೇತ ಬಗಲಿ, ಜಗದೀಶ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ರನ್ ವಿಜಯಪುರ ರನ್: ಡಿಸೆಂಬರ್​ 24ರಂದು ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಮತ್ತು ಶ್ರೀ ಸಿದ್ಧೇಶ್ವರ ಸ್ವಾಮೀಜಿಯ ಗೌರವಾರ್ಥ ವೃಕ್ಷಥಾನ್ ಹೆರಿಟೇಜ್ ರನ್ 'ರನ್ ವಿಜಯಪುರ ರನ್' ನಡೆಸಲಾಯಿತು. ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಿಂದ ಗೋಳಗುಮ್ಮಟ ಮಾರ್ಗವಾಗಿ ಒಟ್ಟು 21 ಕಿಲೋ ಮೀಟರ್, 10 ಕಿ.ಮೀ, 5 ಕಿ.ಮೀ, 3.50 ಕಿ.ಮೀ ಮತ್ತು 800 ಮೀಟರ್ ವಿಭಾಗಗಳಲ್ಲಿ ವೃಕ್ಷೊಥಾನ್ ಹೆರಿಟೇಜ್ ಓಟಗಳು ನಡೆದವು. ವಿಜಯಪುರದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸೇರಿದಂತೆ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಕುಟುಂಬಸಮೇತರಾಗಿ ವೃಕ್ಷೊಥಾನ್​ನಲ್ಲಿ ಪಾಲ್ಗೊಂಡರು.

ಇದನ್ನೂ ಓದಿ: ಗುಮ್ಮಟನಗರಿಯಲ್ಲಿ 'ರನ್ ವಿಜಯಪುರ ರನ್' ವೃಕ್ಷಥಾನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.