ವಿಜಯಪುರ: ಕೊರೊನಾ ಭೀತಿಯ ನಡುವೆಯೂ ಸಾಮಾಜಿಕ ಅಂತರ ಕಾಯ್ದಕೊಂಡು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮುಸಲ್ಮಾನರ ಪವಿತ್ರ ಹಬ್ಬವಾದ ಬಕ್ರೀದ್ಅನ್ನು ನಗರದಲ್ಲಿ ಆಚರಣೆ ಮಾಡಲಾಯಿತು.
ನಗರದ ಜಮೀಯಾ ಮಸೀದಿ ಸೇರಿದಂತೆ ಗುಮ್ಮಟ ನಗರಿಯ ಬಹುತೇಕ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು. ಕೊರೊನಾ ಭೀತಿ ಹಿನ್ನೆಲೆ ಬಕ್ರೀದ್ ಹಬ್ಬಕ್ಕೆ ಸಂಬಂಧಿಕರನ್ನ ಕರೆಯದೆ ಕುಟುಂಬಸ್ಥರು ಮಾತ್ರ ಸೇರಿಕೊಂಡು ಹಬ್ಬ ಆಚರಣೆ ಮಾಡಲು ಮುಂದಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ವಿಧಿಸಿದ ನಿಯಮಾನುಸಾರವಾಗಿ ಹಬ್ಬ ಆಚರಣೆ ಮಾಡತ್ತಿದ್ದಾರೆ.
ಬೆಳಿಗ್ಗೆ 7 ಗಂಟೆಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಮಸೀದಿಗಳ ಮುಖ್ಯಸ್ಥರು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದ್ದರು. ಇತ್ತ ಪ್ರಾರ್ಥನಾ ಮಂದಿರ ಮುಂಭಾಗದಲ್ಲಿ ಜನದಟ್ಟಣೆಯಾಗದಂತೆ ನೋಡಿಕೊಳ್ಳಲಾಗಿದೆ. ಕೊರೊನಾ ಭೀತಿಯಿಂದ ಹಿರಿಯರು ಮನೆಯಲ್ಲಿ ಪ್ರಾರ್ಥನೆ ಮಾಡಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.