ವಿಜಯಪುರ: ಇಷ್ಟು ವರ್ಷ ನಿಮಗೆ ಆದ ಅನ್ಯಾಯ ಸರಿಪಡಿಸುವ ಅವಕಾಶ ನನಗೆ ಸಿಕ್ಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭಾವುಕರಾದರು. ಜಲಸಂಪನ್ಮೂಲ ಇಲಾಖೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ವತಿಯಿಂದ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿಯ ಕೃಷ್ಣಾನಗರದ ಬಿ.ಟಿ.ಎಸ್ ಇ ಸ್ಕೂಲ್ ಮೈದಾನದಲ್ಲಿ 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿತರಣೆ ಮಾಡಿ ಅವರು ಮಾತನಾಡಿದರು.
ಕೃಷ್ಣಾ ತೀರದ ಜನ್ರು ಬಹಳ ಶ್ರಮ ಜೀವಿಗಳು. ಕಾಯಕನಿಷ್ಠೆ, ಪ್ರಾಮಾಣಿಕತೆ ಇರುವ ಸಮುದಾಯ ಬಹಳ ಕಡಿಮೆ. ಮಾನವೀಯ ಗುಣ ಇರುವ ಸಂಸ್ಕ್ರತಿ ಕೃಷ್ಣಾ ತೀರದಲ್ಲಿದೆ ಎಂದ ಅವರು,ಪರಿಹಾರ ನೀಡುವಂತಹ ಮಹತ್ವದ ಕಾರ್ಯಕ್ರಮವಿದು, ಕೃಷ್ಣಾ ನೀರು, ಕೃಷ್ಣಾ ತೀರದ ಮಣ್ಣು ಇವು ದೇವರು ಕೊಟ್ಟ ವರವಾಗಿದೆ. ಇಲ್ಲಿ ಬೆಳೆದ ಬೆಳೆ ಅತ್ಯಂತ ಗುಣಮಟ್ಟದ್ದು ಆಗಿರುತ್ತದೆ ಎಂಬುದಕ್ಕೆ ಎರಡು ಸಾಕ್ಷಿಗಳಿವೆ. ಹೈನುಗಾರಿಕೆ ಯಿಂದ ಬರುವ ಹಾಲು ಅತ್ಯಂತ ಫ್ಯಾಟ್ ಹೊಂದಿದೆ. ಇನ್ನೊಂದು ಇಲ್ಲಿನ ಕಬ್ಬು, ಅತ್ಯಂತ ಸಿಹಿ ಹೊಂದಿದ್ದು ಹೆಚ್ಚು ಇಳುವರಿ ಬರುತ್ತದೆ ಎಂದು ಪ್ರಶಂಸಿಸಿದರು.
ನೈಸರ್ಗಿಕ ಸಂಪತ್ತು ಕೊಟ್ಟಿರುವ ಭಗವಂತನಿಗೆ ನಾವು ಕೃತಜ್ಞತೆ ಆಗಿರಬೇಕು. ಇಲ್ಲಿನ ನೀರು, ಮಣ್ಣಿಗೆ ನಿಮ್ಮ ಪ್ರಾಮಾಣಿಕ ಬೆವರು ಹರಿಸಿದ್ದರಿಂದ ಭೂಮಿತಾಯಿ ಸಂಪತ್ತನ್ನು ಕೊಡುತ್ತಿದ್ದಾಳೆ. ಈಗ ನೀರಾವರಿ ಒಂದು ಹಂತಕ್ಕೆ ಬರ್ತಿದೆ. ನೀರಾವರಿಯ ಪ್ರಜ್ಞೆ ನಮಗೆ ತಡವಾಗಿ ಬಂದಿದೆ ಎಂದ ಅವರು, ಈಗಲಾದರೂ ಸಮಯ ವ್ಯರ್ಥ ಮಾಡದೇ ನೀರಾವರಿ ಕೊಡುಗೆ ನೀಡುವ ಕೆಲಸ ಆಗಬೇಕಿದೆ.
ನಾನು ನೀರಾವರಿ ಸಚಿವನಾಗಿದ್ದಾಗ ಸ್ಕೀಂ ಬಿ ಮಾಡೋಕಾಗಲ್ಲಾ ಎಂದಿದ್ದ ಅಧಿಕಾರಿಗಳು. ನಾನು ದಿಟ್ಟ ನಿರ್ಣಯ ತೆಗೆದುಕೊಂಡು 9 ಸ್ಕೀಂಗೆ ಚಾಲನೆ ಕೊಟ್ಟೆ. ನೀವು ತಪ್ಪು ಮಾಡ್ತಿದಿರಿ, ಹೆಚ್ಚುಕಮ್ಮಿ ಆದ್ರೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕುತ್ತೆ ಎಂದು ಆಗೀನ ವಿರೋಧ ಪಕ್ಷದ ನಾಯಕರು ಹೇಳಿದ್ದರು ಎಂದರು.
ನಾನು ಗಲ್ಲಿಗೇರಿಸಿದರೂ ನಿರ್ಣಯ ಹಿಂತೆಗೆದುಕೊಳ್ಳಲು ಆಗಲ್ಲ ಎಂದಿದ್ದೆ ಹಳೆಯ ನೆನಪು ಮೆಲಕು ಹಾಕಿದ ಅವರು, ಹಾಗಾಗಿ ಎಲ್ಲ ಯೋಜನೆಗಳು ಮುಗಿಯುವ ಹಂತಕ್ಕೆ ಬಂದಿವೆ. ಯಾವುದೇ ಒಂದು ಯೋಜನೆ ನೀರು ಸಂಗ್ರಹ ಮಾಡಿದ್ರೆ ಆಗಲ್ಲ. ಆ ನೀರು ರೈತನ ಜಮೀನಿಗೆ ಬಂದಾಗ ಮಾತ್ರ ಅದು ಪೂರ್ತಿ ಆದಂಗೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಷ್ಟ್ರಕ್ಕಾಗಿ ನಮ್ಮ ಜನರ ಭೂಮಿ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆ ಆಗಿದೆ.
ಮೊದಲ ಬಾರಿಗೆ ಮುಳುಗಡೆ ಆದ ಹಳ್ಳಿಗಳು ಮುಳುಗಡೆ ಆದಾಗ ಸಿಕ್ಕಿರುವ ಪರಿಹಾರ 2 ರಿಂದ 4 ಸಾವಿರ ಮಾತ್ರ ಇಂಥ ಘೋರ ಅನ್ಯಾಯ ಪ್ರಪಂಚದಲ್ಲಿ ಯಾವುದೇ ಸಂತ್ರಸ್ತರಿಗೆ ಆಗಿಲ್ಲ. ಎರಡೂವರೆ ಸಾವಿರ ಜನ ಬೆಂಗಳೂರಿಗೆ ಬಂದು ಹೋರಾಟ ಮಾಡಿದರೂ ಭೂಮಿ ಬೆಲೆ 1ಲಕ್ಷ 14 ಸಾವಿರ ನಿಗದಿ ಮಾಡಿದ್ವಿ. ಆಗ ಸ್ವಲ್ಪ ನಮ್ಮ ಜನರಿಗೆ ನೆಮ್ಮದಿಯ ಉಸಿರು ಬಿಟ್ಟರು ಎಂದರು.
ಸ್ಥಳೀಯ ಶಾಸಕ ಎಂ.ಬಿ.ಪಾಟೀಲ್ ಮಾತನಾಡಿ, 1.33 ಸಾವಿರ ಎಕರೆ ಭೂ ಸ್ವಾಧೀನ ಆಗಬೇಕಿದೆ. ನಾನು ಜಲಸಂಪನ್ಮೂಲ ಸಚಿವನಿದ್ದಾಗ ಗೈಡನ್ಸ್ ವ್ಯಾಲೂ ಕಡಿಮೆ ಇತ್ತು. ನಾನು ಮಂತ್ರಿ ಇದ್ದಾಗ ಬೀಳಗಿಯ ಗೈಡನ್ಸ್ ವ್ಯಾಲು ಫಿಕ್ಸ್ ಮಾಡಿದ್ವಿ ಎಂದರು. ವಿಜಯಪುರ ತಾಲೂಕಿನಲ್ಲಿ ಸೇಲ್ಸ್ ಸ್ಟ್ಯಾಟಿಕ್ಸ್ ಇರದಿದ್ದಕ್ಕೆ ಬೆಲೆ ಸಿಗಲಿಲ್ಲ. ನಾವು ಮುಂದೆ ಗೈಡನ್ಸ್ ವ್ಯಾಲು ಫಿಕ್ಸ್ ಮಾಡಿದಿವಿ. ನಮ್ಮ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅನುಮೋದನೆ ಕೊಟ್ಟಿಧ್ದರು. ಆಗಿನ ಸಿಎಂ ಸಿದ್ರಾಮಯ್ಯ ಅವರೂ ಅನುಮೋದನೆ ಕೊಟ್ಟಿದ್ದರು. ನಾನು ರಾಜಕೀಯ ಮಾಡೋದಿಲ್ಲಾ. ಆಗ ಅನುಮೋದನೆ ಸಿಕ್ಕ ಗೈಡನ್ಸ್ ವ್ಯಾಲು ಫೈಲ್ ಮುಂದುವರೆಸಿ ಎಂದು ಬೊಮ್ಮಾಯಿಗೆ ಮನವಿ ಮಾಡುತ್ತೇನೆ ಎಂದರು.
ಇದನ್ನೂ ಓದಿ:ಪ್ರಧಾನಿ ಮೋದಿಯಿಂದ 12ಕ್ಕೆ ವಿಶ್ವದ ಅತಿದೊಡ್ಡ ಹುಬ್ಬಳ್ಳಿ ರೈಲ್ವೆ ಪ್ಲಾಟ್ಫಾರ್ಮ್ ಲೋಕಾರ್ಪಣೆ