ETV Bharat / state

ವಿಜಯಪುರ ಜಿಲ್ಲೆಯ ಹಲವೆಡೆ ಮತ್ತೆ ಭೂಮಿ ಕಂಪಿಸಿದ ಅನುಭವ!: ಮನೆಯೊಳಗೆ ಕಾಲಿಡದ ಗ್ರಾಮಸ್ಥರು - Vijayapura Earthquake Experience

ವಿಜಯಪುರ ಜಿಲ್ಲೆಯ ಹಲವೆಡೆ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ. ಹಾಗಾಗಿ ಸ್ಥಳೀಯರು ಭಯದಲ್ಲೇ ಕಾಲ ಕಳೆಯುತ್ತಿದ್ದು ಸಂಬಂಧಪಟ್ಟ ಅಧಿಕಾರಿಗ ಆಗಮಿಸಿ ಇದು ಭೂಕಂಪನವೋ ಅಥವಾ ಬೇರೆ ಏನಾದರೂ ಸಮಸ್ಯೆ ಇದೆಯೋ ಎನ್ನುವುದನ್ನು ತಿಳಿದುಕೊಂಡು ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದಿದ್ದಾರೆ.

Again Earthquake Experience In Vijayapura
ಭೂಕಂಪದಿಂದ ಬಿರುಕು ಬಿಟ್ಟ ಮನೆ
author img

By

Published : Dec 3, 2020, 8:19 PM IST

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣ ಸೇರಿದಂತೆ ವಿವಿಧೆಡೆ ಇಂದು ಮತ್ತೆ ಭೂಮಿ ಕಂಪಿಸಿದ ಅನುಭವವಾಗಿರುವುದಾಗಿ ತಿಳಿದು ಬಂದಿದೆ. ಇದರಿಂದ ಜನ ಭಯದಲ್ಲಿದ್ದಾರೆ.

ಕೆಲಹೊತ್ತು ಭೂಕಂಪದಿಂದ ನೆಲ ಅಲುಗಾಡಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ತಾಲೂಕಿನ ಮನಗೂಳಿ, ಉಕ್ಕಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭಯದಿಂದ ಜನರು ಮನೆಯಿಂದ ಹೊರಗೆ ಬಂದಿದ್ದಾರೆ.

ಭೂಕಂಪದಿಂದ ಹಲವೆಡೆ ಮನೆಗಳು ಬಿರುಕು ಬಿಟ್ಟಿವೆ. ಮನೆಯ ಛಾವಣಿಯಿಂದ ಮಣ್ಣು ಬೀಳುತ್ತಿದೆ. ಹಾಗಾಗಿ ಜನ ಮನೆಯೊಳಗೆ ಹೋಗಲು ಭಯಪಡುತ್ತಿದ್ದಾರೆ ಎನ್ನಲಾಗುತ್ತಿದೆ.

ಭೂಕಂಪದಿಂದ ಬಿರುಕು ಬಿಟ್ಟ ಮನೆ

ಈ ಮುಂಚೆ ಕೊಲ್ಜಾರ ತಾಲೂಕಿನ ಗ್ರಾಮಗಳಲ್ಲಿ ಇದೇ ಅನುಭವಾಗಿತ್ತು. ಭೂ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ಸಹ ಮಾಡಿದ್ದರು. ಇದು ಭೂಕಂಪನ ಅಲ್ಲ, ಭೂಮಿಯ ಪದರುಗಳ ಚಲನೆಯಿಂದ ಈ ಶಬ್ದ ಬಂದಿದೆ ಎಂದು ಹೇಳಿದ್ದರು. ಆದರೆ, ಈಗ ಮತ್ತೆ ಹಲವಡೆ ಭೂಕಂಪನದ ಅನುಭವವಾಗಿದ್ದು, ಜನ ಆತಂಕಗೊಂಡಿದ್ದಾರೆ.

ಇದನ್ನೂ ಓದಿ : ಭೂಕಂಪನ ಭೀತಿ: ಪರಿಶೀಲನೆಗೆ ತಂಡ ಕಳುಹಿಸಲು ಕೋರಿ ವಿಜಯಪುರ ಡಿಸಿ ಪತ್ರ

ರಾತ್ರಿ ಮಲಗಿದ್ದಾಗ ಭೂಕಂಪ ಸಂಭವಿಸಿದರೆ ನಮ್ಮ ಗತಿ ಏನು? ಎಂದು ಪ್ರಶ್ನಿಸಿರುವ ಸ್ಥಳೀಯರು, ಸಂಬಂಧಪಟ್ಟ ಅಧಿಕಾರಿಗಳು‌ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಇದು ಭೂಕಂಪನವೋ ಅಥವಾ ಬೇರೆ ಏನಾದರೂ ಸಮಸ್ಯೆ ಇದೆಯೋ ಎನ್ನುವದನ್ನು ತಿಳಿದುಕೊಂಡು ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.