ETV Bharat / state

ಪ್ರಸವ ಪೂರ್ವ ಲಿಂಗ ಪತ್ತೆ - ಭ್ರೂಣ ಹತ್ಯೆ ತಡೆಗೆ ಕ್ರಮ: ಜಾಗೃತಿಗೆ ಮುಂದಾದ ವಿಜಯಪುರ ಜಿಲ್ಲಾಡಳಿತ - Action to Prevent Female feticide

ಮನುಷ್ಯ ಅದೆಷ್ಟೇ ಮುಂದುವರೆದರೂ ಪ್ರಸವ ಪೂರ್ವದಲ್ಲಿ ಲಿಂಗ ಪತ್ತೆ ಮಾಡಿಸಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಹೇಯ ಕೃತ್ಯ ಇನ್ನೂ ಹಲವೆಡೆ ಮುಂದುವರೆದಿರುವುದು ದುರಂತ. ಇಂತಹ ಕೃತ್ಯ ಕಣ್ಣಿಗೆ ಕಾಣದೇ ನಡೆಯುತ್ತಿರುವುದು ವಿಪರ್ಯಾಸ.

Action to Prevent Female feticide at vijayapura
ಪ್ರಸವ ಪೂರ್ವ ಲಿಂಗ ಪತ್ತೆ - ಭ್ರೂಣ ಹತ್ಯೆ ತಡೆಗೆ ಕ್ರಮ: ಜಾಗೃತಿಗೆ ಮುಂದಾದ ವಿಜಯಪುರ ಜಿಲ್ಲಾಡಳಿತ
author img

By

Published : Mar 17, 2021, 6:47 PM IST

ವಿಜಯಪುರ: ಪ್ರಸವ ಪೂರ್ವ ಲಿಂಗ ಪತ್ತೆ ಮಾಡಿಸಿ ಹೆಣ್ಣು ಭ್ರೂಣ ಹತ್ಯೆ ಮಾಡುವ ಹೇಯ ಕೃತ್ಯ ಇನ್ನೂ ಹಲವೆಡೆ ಮುಂದುವರೆದಿದೆ. ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದನ್ನು ತಡೆಯಲು ಸರ್ಕಾರ ಕಾನೂನುಗಳನ್ನು ರೂಪಿಸಿದೆ. ಸ್ಥಳೀಯ ಆಡಳಿತಗಳು ಇದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡಿವೆ.

ಸಮಾಜದಲ್ಲಿನ ಮೂಢನಂಬಿಕೆ, ವರದಕ್ಷಿಣೆಗಳಂತಹ ಸಾಮಾಜಿಕ ಪಿಡುಗುಗಳಿಗೆ ಹೆದರಿ ಅದೆಷ್ಟೋ ಪೋಷಕರು ಹೆಣ್ಣು ಮಕ್ಕಳಿಗೆ ಜನ್ಮ ನೀಡಲು ಹಿಂಜರಿಯುತ್ತಿದ್ದಾರೆ. ಇದರ ಪರಿಣಾಮವೆಂಬಂತೆ ಇಂದು ಜಿಲ್ಲೆಯಲ್ಲಿ 1,000 ಪುರುಷರಿಗೆ 950 ಮಹಿಳೆಯರು ಇದ್ದಾರೆ. ‌ಆದರೂ ಕೂಡ ಪ್ರಸವ ಪೂರ್ವ ಲಿಂಗ ಪತ್ತೆಯಂತಹ ಹೀನ ಕೃತ್ಯ ಸರ್ಕಾರದ ಕಣ್ಣು ತಪ್ಪಿಸಿ ನಡೆಯುತ್ತಲೇ ಇವೆ. ವಿಜಯಪುರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳ ತಡೆಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಪ್ರಸವ ಪೂರ್ವ ಲಿಂಗ ಪತ್ತೆ - ಭ್ರೂಣ ಹತ್ಯೆ ತಡೆಗೆ ಕ್ರಮ

ಬರದ ನಾಡು ವಿಜಯಪುರ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಅನಕ್ಷರತೆ, ಮೂಢನಂಬಿಕೆಗಳು ತಾಂಡವವಾಡುತ್ತಿದೆ. ಇದರ ಪರಿಣಾಮ ಭ್ರೂಣ ಲಿಂಗ ಪತ್ತೆ ಪ್ರಕರಣಗಳು ನಡೆಯುತ್ತಲೇ ಇದ್ದು, ಯಾರಿಗೂ ತಿಳಿಯುವುದಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಜಿಲ್ಲೆಯಲ್ಲಿ 127 ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೆಂಟರ್​​ಗಳು ಕಾರ್ಯನಿರ್ವಹಿಸುತ್ತಿವೆ. ಇವು ಆರೋಗ್ಯ ಇಲಾಖೆಯ ಸುಪರ್ದಿಯಲ್ಲಿವೆ. ಇವನ್ನು ಹೊರತುಪಡಿಸಿ ಅನಧಿಕೃತ ಸೆಂಟರ್​ಗಳು ಸಣ್ಣ ಆರೋಗ್ಯ ಕೇಂದ್ರದಲ್ಲಿ ಇವೆ. ಅಂತಹ ಸೆಂಟರ್​ಗಳಿಗೆ ಆರೋಗ್ಯ ಇಲಾಖೆ ಖಡಕ್​​​ ಎಚ್ವರಿಕೆ ನೀಡಿದೆ.

ಇತ್ತೀಚೆಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ನೇತೃತ್ವದಲ್ಲಿ ಆರೋಗ್ಯ ಇಲಾಖೆ ನಗರದ ಎಲ್ಲಾ ಸ್ಕ್ಯಾನಿಂಗ್ ಸೆಂಟರ್​ಗಳ ಮೇಲೆ ದಾಳಿ ನಡೆಸಿತ್ತು. ಸ್ಕ್ಯಾನಿಂಗ್ ಸೆಂಟರ್ ಮಾಲೀಕರಿಗೆ ಇಂತಹ ಕೃತ್ಯ ನಡೆಸಬಾರದೆಂದು ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನೂ ಓದಿ: ಪ್ರಸವ ಪೂರ್ವ ಲಿಂಗ ಪತ್ತೆ- ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ರಾಜ್ಯದಲ್ಲಿ ಹೇಗಿದೆ ಪರಿಸ್ಥಿತಿ?

ಭ್ರೂಣ ಲಿಂಗ ಪತ್ತೆ ತಡೆಯಲು ಸಮಿತಿಯೊಂದನ್ನು ಡಿಸಿ ರಚನೆ ಮಾಡಿದ್ದಾರೆ. ಪಿಸಿಪಿಎನ್ ಕಾಯ್ದೆ 1994ರ ಅಡಿ ಸ್ಕ್ಯಾನಿಂಗ್ ಸೆಂಟರ್​ಗಳ ತಜ್ಞ ವೈದ್ಯರಿಗೆ ಸರ್ಕಾರದ ನಿರ್ದೇಶನದಂತೆ‌ ಪಿ.ಸಿ.ಪಿ.ಎನ್​.ಡಿ.ಟಿ ಪರಿಶೀಲನಾ ತಂಡ ರಚನೆ ಮಾಡಿದೆ. ಸಮಿತಿಯಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಎನ್​ಜಿಒ ಮುಖ್ಯಸ್ಥರನ್ನು ನೇಮಕ ಮಾಡಿದೆ. ಜಿಲ್ಲಾಸ್ಪತ್ರೆಯಲ್ಲಿ ಒಂದು ಸ್ಕ್ಯಾನಿಂಗ್ ಸೆಂಟರ್ ಇದ್ದು, ಗರ್ಭಿಣಿಯರ ಆರೋಗ್ಯ ಆಗು-ಹೋಗುಗಳ ಮೇಲೆ ಪರೀಕ್ಷೆ ನಡೆಸಲು ಸೂಚಿಸಿದೆ. ಇದಕ್ಕಾಗಿ ತಾಯಿ-ಮಗು ಆಸ್ಪತ್ರೆಯನ್ನು ನಿರ್ಮಿಸಲಾಗಿದೆ.

ಜಿಲ್ಲೆಯಲ್ಲಿರುವ 127 ಸ್ಕ್ಯಾನಿಂಗ್ ಸೆಂಟರ್​ಗಳಲ್ಲಿ ಹಲವು ನ್ಯೂನತೆ ಕಂಡು ಹಿಡಿದಿರುವ ಜಿಲ್ಲಾ ಮಟ್ಟದ ಪರಿಶೀಲನಾ ತಂಡ ಅವರಿಗೆ ಕೆಲವು ಸೂಚನೆ ನೀಡಿದೆ. ಭ್ರೂಣ ಲಿಂಗ ಪತ್ತೆ ಎಂದು ಬರುವ ಗರ್ಭಿಣಿ ಹಾಗೂ ಅವರ ಕುಟುಂಬದವರ ಪೂರ್ಣ ಮಾಹಿತಿ ಪಡೆದು ತಕ್ಷಣ ಪರಿಶೀಲನಾ ತಂಡಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.

ಇದರ ಜತೆ ಜಿಲ್ಲಾಡಳಿತ ಭ್ರೂಣ ಹತ್ಯೆ ತಡೆಗೆ ಜಾಗೃತಿ ಕಾರ್ಯಕ್ರಮ ಹಾಕಿಕೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.