ಮುದ್ದೇಬಿಹಾಳ : ತಾಲೂಕಿನ ಗೆದ್ದಲಮರಿ ಬಳಿ ಮತಪೆಟ್ಟಿಗೆ ವಾಪಸ್ ತರುತ್ತಿದ್ದ ಸಾರಿಗೆ ಬಸ್ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಹದಿನೈದಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮತಪೆಟ್ಟಿಗೆಗಳನ್ನು 24ಕ್ಕೂ ಹೆಚ್ಚು ಬಸ್ಗಳಲ್ಲಿ ಕೊಂಡೊಯ್ಯಲಾಗುತ್ತಿದ್ದು, ಈ ವೇಳೆ ಘಟನೆ ನಡೆದಿದೆ.
ಬಸ್ನಲ್ಲಿ ಹುಲ್ಲೂರು-2 ಮತಗಟ್ಟೆ, ಕೊಪ್ಪ, ಸಿದ್ದಾಪುರ, ಎಲ್.ಟಿ, ಕೊಪ್ಪ ತಾಂಡಾದ ಚುನಾವಣಾ ಸಿಬ್ಬಂದಿ ಇದ್ದರು. ಇನ್ನು ಘಟನೆ ಬಳಿಕ ಸೀಲ್ ಮಾಡಿದ ಮತಪೆಟ್ಟಿಗೆಗಳನ್ನು ಪೊಲೀಸ್ ಭದ್ರತೆಯಲ್ಲಿ ಡಿಮಸ್ಟರಿಂಗ್ ಕೇಂದ್ರಕ್ಕೆ ಸುರಕ್ಷಿತವಾಗಿ ತರಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಎಂ.ಎಸ್.ಅರಕೇರಿ, ಉಪ ವಿಭಾಗಾಧಿಕಾರಿ ರಾಮಚಂದ್ರ ಗಡಾದೆ, ಹೆಚ್ಚುವರಿ ಎಸ್ಪಿ, ಸಿಪಿಐ, ಪಿಎಸೈ ಭೇಟಿ ನೀಡಿ ಪರಿಶೀಲಿಸಿದ್ದು, ಮುದ್ದೇಬಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.