ವಿಜಯಪುರ : ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ 100 ಜನರ ಗಂಟಲು ದ್ರವ ಸಂಗ್ರಹಿಸಲಾಗಿತ್ತು. ಆ ಪೈಕಿ 56 ಜನರಿಗೆ ಸೋಂಕು ಇರುವುದು ದೃಢ ಪಟ್ಟಿದೆ.
ಈ ಹಿನ್ನೆಲೆಯಲ್ಲಿ ಇಂದು ಚಡಚಣ ತಾಲೂಕು ಆಡಳಿತ ಗೋವಿಂದಪುರ ಗ್ರಾಮಕ್ಕೆ ಭೇಟಿ ನೀಡಿತು. ಕೊರೊನಾ ಸೋಂಕಿತರನ್ನು ಹೋಂ ಕ್ವಾರಂಟೈನ್ ಮಾಡಿ ಅವರಿಗೆ ಮಾತ್ರೆಗಳನ್ನು ನೀಡಿ ಧೈರ್ಯ ತುಂಬಿದರು.
ಅಲ್ಲದೇ ಪ್ರಮುಖ ಬೀದಿಗಳನ್ನು ಬಂದ್ ಮಾಡಿ, ಗ್ರಾಮವನ್ನು ಸೀಲ್ಡೌನ್ ಮಾಡಲು ತಹಶೀಲ್ದಾರ್ ಸುರೇಶ ಚವಲರ್ ಅಧಿಕಾರಿಗೆ ಸೂಚಿಸಿದರು.
ಈ ವೇಳೆಯಲ್ಲಿ ಚಡಚಣ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ಜಾನ್ ಕಟವಟಿ, ನೀವರಗಿ ಗ್ರಾಪಂ ಪಿಡಿಒ ಪ್ರವೀಣ ಪಾಟೀಲ ಇದ್ದರು.