ಯುಕೆಯಿಂದ ವಿಜಯಪುರಕ್ಕೆ ಬಂದ 12 ಮಂದಿ: ಆತಂಕದಲ್ಲಿ ಜಿಲ್ಲಾಡಳಿತ - vijayapura corona news
ವಿಜಯಪುರ ಜಿಲ್ಲೆಗೆ 12 ಜನ ಯುಕೆಯಿಂದ ಬಂದಿದ್ದು, ಅವರ ಕೋವಿಡ್-19 ಪರೀಕ್ಷಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ವಿಜಯಪುರ: ಜಿಲ್ಲೆಗೆ 12 ಜನ ಯುಕೆಯಿಂದ ವಾಪಸಾಗಿದ್ದಾರೆ. ಅವರಲ್ಲಿ 6 ಜನ ಬೆಂಗಳೂರಿನಲ್ಲಿದ್ದು, ಇನ್ನುಳಿದ 6 ಜನರಲ್ಲಿ ಇಬ್ಬರು ವಿಜಯಪುರ ಮತ್ತು ನಾಲ್ವರು ಹಲಗಣಿಯಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ತಿಳಿಸಿದ್ದಾರೆ.
ಹಲಗಣಿಗೆ ಮದುವೆ ಸಮಾರಂಭಕ್ಕೆ 4 ಜನ ಬಂದಿದ್ದಾರೆ. ಅವರನ್ನು ಈಗಾಗಲೇ ಭೇಟಿ ಮಾಡಿದ್ದು, ಯಾವುದೇ ಕೋವಿಡ್ ಲಕ್ಷಣಗಳು ಕಂಡುಬಂದಿಲ್ಲ. ಅವರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡುತ್ತೇವೆ. ಪರೀಕ್ಷಾ ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತೇವೆ. ಕೊರೊನಾ ಎರಡನೇ ಅಲೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸದ್ಯಕ್ಕೆ ಪ್ರತಿದಿನ 2000 ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಶೇ. 1ಕ್ಕಿಂತಲೂ ಕಡಿಮೆ ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕೊರೊನಾ ಎರಡನೇ ಅಲೆ ಎದುರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ವ್ಯಾಕ್ಸಿನ್ ಸಂಗ್ರಹಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಮಟ್ಟದ ಸಭೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.