ETV Bharat / state

ವಿಶ್ವ ವಿಶೇಷ ಚೇತನರ ದಿನಾಚರಣೆ : ವಿವಿಧ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ

ವಿಶ್ವ ವಿಶೇಷ ಚೇತನರ ದಿನಾಚರಣೆ ಹಿನ್ನೆಲೆಯಲ್ಲಿ ಅವರನ್ನ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಕುಂದು ಕೊರತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕುಮಟಾ ತಾಲೂಕು ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

latest news of world disabled day
ಅಂಗವಿಕಲರ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮನವಿ
author img

By

Published : Dec 3, 2019, 9:32 PM IST

ಕಾರವಾರ: ವಿಶ್ವ ವಿಶೇಷ ಚೇತನರ ದಿನಾಚರಣೆ ಹಿನ್ನೆಲೆಯಲ್ಲಿ, ಅವರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರ ಅನುಭವಿಸುತ್ತಿರುವ ಕುಂದು ಕೊರತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕುಮಟಾ ತಾಲೂಕು ವಿಶೇಷ ಚೇತನರ ಸಂಘದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ವಿಶ್ವ ಅಂಗವಿಕಲರ ದಿನಾಚರಣೆ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ

ವಿಶೇಷ ಚೇತನರಿಗೆ ಸರ್ಕಾರದ ಯೋಜನೆಗಳು, ಸವಲತ್ತುಗಳು ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೇ ಸಿಗಬೇಕು. ಅವರ ಮೀಸಲು ಅನುದಾನದ ಸದ್ಭಳಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಾಸಾಶನ ಮಂಜೂರು ಮಾಡುವಾಗ ವಿಶೇಷ ಚೇತನರ ವೈಯಕ್ತಿಕ ಆದಾಯ ಮಾತ್ರ ಪರಿಗಣಿಸುವ ಸರ್ಕಾರದ ಆದೇಶ ಎಲ್ಲೆಡೆ ಪಾಲನೆಯಾಗಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಪಾಸ್ ಪಡೆಯಲು ಶಿರಸಿ ವಿಭಾಗೀಯ ಸಾರಿಗೆ ಕಚೇರಿಗೆ ತೆರಳಬೇಕಾಗಿದ್ದು, ಅದನ್ನು ಸರಳಗೊಳಿಸಿ ಆಯಾ ತಾಲೂಕು ಮಟ್ಟದಲ್ಲೇ ಕೊಡಬೇಕು ಹಾಗೂ ಪ್ರಯಾಣದ ದೂರದ ಮಿತಿಯನ್ನು ತೆಗೆದು ರಾಜ್ಯಾದ್ಯಂತ ಓಡಾಡಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ವಿಶೇಷ ಚೇತನರ ಶೇಕಡಾವಾರು ಮಾನದಂಡ ಬಿಟ್ಟು ಎಲ್ಲರಿಗೂ 5000ರೂ. ಮಾಸಾಶನವನ್ನು ನೀಡಬೇಕು. ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಲಯ ಬಳಕೆಗಾಗಿ ಕಂದಾಯ ನಿವೇಶನ ಒದಗಿಸಬೇಕು. ಜನಗಣತಿಯಲ್ಲಿ ಪ್ರತ್ಯೇಕ ಅವಕಾಶ ಕಲ್ಪಿಸಬೇಕು. ವೈದ್ಯಕೀಯ ಪ್ರಮಾಣಪತ್ರಗಳನ್ನು ತಾಲೂಕು ಆಸ್ಪತ್ರೆಗಳಲ್ಲೇ ಕೊಡಬೇಕು. ಅಂತ್ಯೋದಯ ಪಡಿತರ ಚೀಟಿ ನೀಡಬೇಕು. ವಿಶೇಷ ಚೇತನರು ಹಾಗೂ ಅವರ ಮಕ್ಕಳಿಗೆ ಉಚಿತ ಶಿಕ್ಷಣ ಮುಂತಾದ ಹಲವು ಬೇಡಿಕೆಗಳನ್ನು ಸಲ್ಲಿಸಲಾಗಿದೆ.

Intro:Body:ಕಾರವಾರ: ವಿಶ್ವ ಅಂಗವಿಕಲರ ದಿನಾಚರಣೆ ಹಿನ್ನೆಲೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ಅಂಗವಿಕಲರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಂಗವಿಕಲರ ಕುಂದುಕೊರತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಕುಮಟಾ ತಾಲ್ಲೂಕಾ ಅಂಗವೀಕಲರ ಕ್ಷೇಮಾಭಿವೃದ್ಧಿ ಸಂಘದಿಂದ ಸರ್ಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಅಂಗವಿಕಲರಿಗೆ ಸರ್ಕಾರದ ಯೋಜನೆಗಳು, ಸವಲತ್ತುಗಳು ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲೇ ಸಿಗಬೇಕು. ಅಂಗವಿಕಲರ ಮೀಸಲು ಅನುದಾನದ ಸದ್ಬಳಕೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಂಗವಿಕಲರಿಗೆ ಮಾಸಾಶನ ಮಂಜೂರು ಮಾಡುವಾಗ ಅಂಗವಿಕಲರ ವಯಕ್ತಿಕ ಆದಾಯವನ್ನು ಮಾತ್ರ ಪರಿಗಣಿಸುವ ಸರ್ಕಾರದ ಆದೇಶ ಎಲ್ಲೆಡೆ ಪಾಲನೆಯಾಗಬೇಕು. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗವಿಕಲರು ಪಾಸ್ ಪಡೆಯಲು ಶಿರಸಿ ವಿಭಾಗೀಯ ಸಾರಿಗೆ ಕಚೇರಿಗೆ ತೆರಳಬೇಕಾಗಿದ್ದು ಅದನ್ನು ಸರಳಗೊಳಿಸಿ ಆಯಾ ತಾಲೂಕು ಮಟ್ಟದಲ್ಲೇ ಕೊಡಬೇಕು ಹಾಗೂ ಪ್ರಯಾಣದ ದೂರದ ಮಿತಿಯನ್ನು ತೆಗೆದು ರಾಜ್ಯಾದ್ಯಂತ ಓಡಾಡಲು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ಅಂಗವೀಕಲತೆಯ ಶೇಕಡಾವಾರು ಮಾನದಂಡ ಬಿಟ್ಟು ಎಲ್ಲರಿಗೂ ೫೦೦೦ ರೂ. ಮಾಸಾಶನವನ್ನು ನೀಡಬೇಕು. ನಮ್ಮ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಲಯ ಬಳಕೆಗಾಗಿ ಕಂದಾಯ ನಿವೇಶನ ಒದಗಿಸಬೇಕು. ಜನಗಣತಿಯಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಅವಕಾಶ ಕಲ್ಪಿಸಬೇಕು. ಅಂಗವಿಕಲರ ವೈದ್ಯಕೀಯ ಪ್ರಮಾಣಪತ್ರಗಳನ್ನು ತಾಲೂಕಾ ಆಸ್ಪತ್ರೆಗಳಲ್ಲೇ ಕೊಡಬೇಕು. ಎಲ್ಲ ಅಂಗವಿಕಲರಿಗೆ ಅಂತ್ಯೋದಯ ಪಡಿತರ ಚೀಟಿ ನೀಡಬೇಕು. ಉದ್ಯೋಗದಲ್ಲಿ ಶೇ. ೩ ಮೀಸಲಾತಿ ಕಡ್ಡಾಯ ಜಾರಿ, ಅಂಗವಿಕಲರು ಹಾಗೂ ಅವರ ಮಕ್ಕಳಿಗೆ ಉಚಿತ ಶಿಕ್ಷಣ ಮುಂತಾದ ಹಲವು ಬೇಡಿಕೆಗಳನ್ನು ಮಾಡಲಾಗಿದೆ.
ಮನವಿಯನ್ನು ತಹಸೀಲ್ದಾರ್ ಮೇಘರಾಜ ನಾಯ್ಕ ಸ್ವೀಕರಿಸಿದರು. ಸಂಘದ ಅಧ್ಯಕ್ಷ ಪ್ರಮೋದ ಹೆಗಡೆ, ಮಂಜುನಾಥ ನಾಯ್ಕ, ರವಿಶಂಕರ ಗುನಗಾ, ಹೊನ್ನಪ್ಪ ನಾಯ್ಕ, ತುಳಸು ಗೌಡ, ರಮೇಶ ಗೌಡ, ಪ್ರಶಾಂತ ಕುಮಟಾಕರ, ರಾಮಚಂದ್ರ ಹರಿಕಂತ್ರ, ಪ್ರಕಾಶ ನಾಯ್ಕ ಕತಗಾಲ, ಗಜಾನನ ಪಟಗಾರ ಹೆಗಡೆ, ಅಣ್ಣಪ್ಪ ಟಿ. ಪಟಗಾರ ನಾಗೂರು ಇದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.