ETV Bharat / state

ಸಿದ್ದಾಪುರ ತಾಲೂಕಿನಲ್ಲಿದೆ ಸ್ವಾತಂತ್ರ್ಯ ಹೋರಾಟದ ಕಥೆ ಹೇಳುವ ಮಹಿಳಾ ಸತ್ಯಾಗ್ರಹ ಸ್ಮಾರಕ

author img

By

Published : Aug 12, 2022, 12:45 PM IST

Updated : Aug 13, 2022, 6:46 AM IST

ಸ್ವಾತಂತ್ರ್ಯ ಹೋರಾಟದ ಕಥೆ ಹೇಳುವ ಮಹಿಳಾ ಸತ್ಯಾಗ್ರಹ ಸ್ಮಾರಕ ಸಿದ್ದಾಪುರ ತಾಲೂಕಿನಲ್ಲಿದೆ.

Women Satyagraha Memorial is located in Siddapura taluk
ಮಹಿಳಾ ಸತ್ಯಾಗ್ರಹ ಸ್ಮಾರಕ

ಶಿರಸಿ(ಉತ್ತರಕನ್ನಡ): ಭಾರತ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಸಂಭ್ರಮಕ್ಕೆ ಕಾರಣರಾದವರು ಲೆಕ್ಕವಿಲ್ಲದಷ್ಟು ಸ್ವಾತಂತ್ರ್ಯ ಹೋರಾಟಗಾರರು. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಕರ ನಿರಾಕರಣೆಯ ಸಮರ, ಮಾವಿನಗುಂಡಿಯಲ್ಲಿ ಮಹಿಳೆಯರು ನಡೆಸಿದ್ದ ಸತ್ಯಾಗ್ರಹ ಆ ಕಾಲದ ಸ್ವಾತಂತ್ರ್ಯ ಸಂಗ್ರಾಮದ ರೋಚಕ ಅಧ್ಯಾಯಗಳಲ್ಲೊಂದು. ಇದರ ನೆನಪಿಗಾಗಿ ಸಿದ್ದಾಪುರದಲ್ಲಿ ಸ್ಮಾರಕವನ್ನೂ ನಿರ್ಮಿಸಲಾಗಿದೆ.

ಮಹಿಳಾ ಸತ್ಯಾಗ್ರಹ ಸ್ಮಾರಕ

ಪಶ್ಚಿಮ ಘಟ್ಟ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆ ಸೇರಿ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಪೊಲೀಸ್ ಠಾಣೆಯಾಗಿದ್ದ ಸ್ಥಳದಲ್ಲೇ ಈ ಸ್ಮಾರಕನ್ನು ನಿರ್ಮಿಸಿದೆ. ಈ ಸ್ಥಳದಲ್ಲಿ ರೂಪಿಸಲಾಗಿರೋ ಸ್ಮಾರಕ ಅಂದಿನ ಚಳವಳಿಯನ್ನು ಜೀವಂತವಾಗಿ ಕಣ್ಮುಂದೆ ಬರೋವಂತೆ ಮಾಡಿವೆ. ದೇಶಕ್ಕಾಗಿ ಹೋರಾಡಿದ್ದ ಮಹಿಳೆಯರು ಇಲ್ಲಿ ಮೂರ್ತಿ ರೂಪ ಪಡೆದಿದ್ದಾರೆ. 1931ರಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕರ ನಿರಾಕರಣೆ ಚಳುವಳಿಯಲ್ಲಿ ಮಾವಿನಗುಂಡಿ ಪಾತ್ರವೇನು ಅನ್ನೋದು ಈ ಸ್ಮಾರಕವನ್ನು ನೋಡಿದರೆ ತಿಳಿಯುತ್ತದೆ.

ಆದರೆ, ಸ್ವಾತಂತ್ರ್ಯದ ಕಥೆ ಹೇಳುವ ಸ್ಮಾರಕಗಳು ಇಂದು ಅಧೋಗತಿಗೆ ತಲುಪಿವೆ. ಸೂಕ್ತ ನಿರ್ವಹಣೆಯಿಲ್ಲದೇ ಸುತ್ತ ಹುಲ್ಲು ಬೆಳೆದಿದೆ. ಮಹಿಳೆಯರ ಮೂರ್ತಿಗಳು ರೂಪ ಕಳೆದುಕೊಂಡಿವೆ. ಗಂಗೆಯನ್ನು ಧರೆಗಿಳಿಸಬೇಕಿದ್ದ ಶಿವನ ಮೂರ್ತಿ ಒಡೆದು ಹೋಗಿದೆ. ಸರಿಯಾದ ಸೂಚನಾ ಫಲಕ ಸಹ ಇಲ್ಲ. ಸದ್ಯ ಇರುವ ಸೂಚನಾ ಫಲಕವೂ ತುಕ್ಕು ಹಿಡಿದು ಹೀಗೋ ಆಗೋ ಬೀಳುತ್ತೆ ಎನ್ನುವ ಸ್ಥಿತಿಯಲ್ಲಿದೆ. ಇನ್ನೂ ಸ್ಮಾರಕ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇವೆ. ಅನುದಾನದ ಕೊರತೆ ಕೂಡ ಇದಕ್ಕೆ ಒಂದು ಕಾರಣ ಎಂದು ಆಧಿಕಾರಿಗಳು ತಿಳಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಡಾ.ಶಶಿಭೂಷಣ ಹೆಗಡೆ ಮಾತನಾಡಿ, ಮಹಿಳೆಯರು ನಡೆಸಿದ್ದ ಸತ್ಯಾಗ್ರಹದ ಬಗ್ಗೆ ಈ ಸ್ಮಾರಗಳು ತಿಳಿಸುತ್ತವೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಪಾತ್ರ ದೊಡ್ಡದಿತ್ತು. ಆದರೆ, ಸ್ಮಾರಕಕ್ಕೆ ಸೂಕ್ತ ನಿರ್ವಣೆ ಇಲ್ಲವಾಗಿದೆ. ಈ ಸ್ಮಾರಕ ಅಭಿವೃದ್ಧಿ ಬಗ್ಗೆ ಸರ್ಕಾರ ಏಕೆ ಇಷ್ಟೊಂದು ನಿರ್ಲಕ್ಷ್ಯ ವಹಿಸುತ್ತಿದೆ ಅನ್ನೋದು ಗೊತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಇದನ್ನೂ ಓದಿ: ಕರುನಾಡ ವೀರ ರಾಣಿಯರು ದಾಸ್ಯಮುಕ್ತಿಗಾಗಿ ಹೋರಾಡಿದ ಧೀರೋದಾತ್ತ ಪರಂಪರೆ

ಒಟ್ಟಿನಲ್ಲಿ ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ನೆನೆಪಿಸಿಕೊಳ್ಳಬೇಕಾದ ಸಂಗತಿ ಜಿಲ್ಲೆಯ ನಾರಿಯರ ಕರ ನಿರಾಕರಣೆ ಚಳವಳಿ. ಅಂತಹ ಚಳವಳಿ ಜೀವಂತವಾಗಿ ನಮ್ಮ ಕಣ್ಮುಂದೆ ತೆರೆದಿಡಬೇಕಿದ್ದ ಅಪರೂಪದ ಸ್ಮಾರಕವನ್ನು ಉಳಿಸಿಕೊಳ್ಳಬೇಕಿದೆ.

Last Updated : Aug 13, 2022, 6:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.