ETV Bharat / state

ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು; ಕೊಚ್ಚಿ ಹೋದ ಬೈಕ್​ ಸವಾರ - biker rider flown in water

ಅಂಕೋಲಾ ಹಾಗೂ ಯಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಭಾರಿ ಮಳೆ ಸುರಿದ ಹಿನ್ನೆಲೆ ನೆರೆ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ನೀರಿನಲ್ಲಿ ಬೈಕ್ ಸವಾರನೋರ್ವ ಕೊಚ್ಚಿ ಹೋಗಿದ್ದಾನೆ.

ನೆರೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ
ನೆರೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ
author img

By

Published : Aug 5, 2020, 10:44 PM IST

ಕಾರವಾರ: ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಬಿದ್ದ ನೆರೆ ನೀರಿನಲ್ಲಿ ಬೈಕ್ ಸವಾರನೋರ್ವ ಕೊಚ್ಚಿ ಹೋಗಿರುವ ಘಟನೆ ಅಂಕೋಲಾ ತಾಲೂಕಿನ ಸುಂಕಸಾಳ ಬಳಿ ನಡೆದಿದೆ.

ನೆರೆ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ
ನೆರೆ ನೀರಿನಲ್ಲಿ ಕೊಚ್ಚಿ ಹೋದ ಬೈಕ್​ ಸವಾರ

ಹೊನ್ನಾವರ ಮೂಲದ ಸಂತೋಷ್ ನಾಯ್ಕ್ (30) ನೀರಿನಲ್ಲಿ ಕೊಚ್ಚಿ ಹೋದ ದುರ್ದೈವಿ. ಅಂಕೋಲಾ ಹಾಗೂ ಯಲ್ಲಾಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಇಂದು ಭಾರಿ ಮಳೆ ಸುರಿದ ಹಿನ್ನೆಲೆಯಲ್ಲಿ ನೆರೆ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ನಡುವೆ ಸಂತೋಷ್ ತನ್ನ ಮಾವನೊಂದಿಗೆ ಬೈಕ್‌ನಲ್ಲಿ ದಾಟುವಾಗ ಆಯತಪ್ಪಿ ಬಿದ್ದು ಕೊಚ್ಚಿ ಹೋಗಿದ್ದು, ಮಾವ ಅದೃಷ್ಟವಶಾತ್ ಪಾರಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು
ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು

ಕಳೆದ 6 ತಿಂಗಳಿಂದ ಹೆಗ್ಗಾರದ ಕೇಶವ ನಾಯ್ಕ್ ಎಂಬುವರ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಇಂದು ತನ್ನ ಮಾವನ ಜತೆ ಸಾಮಾನು ತರಲು ಗುಳ್ಳಾಪುರಕ್ಕೆ ಹೋಗಿ ಬರುವಾಗ ಈ ದುರ್ಘಟನೆ ಸಂಭವಿಸಿದೆ. ರಸ್ತೆಯಲ್ಲಿ ನೀರಿನ ಪ್ರಮಾಣ ಎಷ್ಟಿದೆ ಎಂದು ಅರ್ಥೈಸಿಕೊಳ್ಳದೆ ದಾಟಲು ಯತ್ನಿಸಿದಾಗ ಘಟನೆ ಸಂಭವಿಸಿದೆ. ಬೈಕ್‌ನ ಹಿಂಬದಿಯಲ್ಲಿದ್ದ ಸಂತೋಷ್ ಅವರ ಮಾವನನ್ನು ಪಿಎಸ್‌ಐ ಸಂಪತ್, ಪಿಡಿಒ ಗಿರೀಶ್ ನಾಯಕ ಗುಡ್ಡ ರಸ್ತೆಯಿಂದ ರಕ್ಷಿಸಿ ಕರೆ ತಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.