ETV Bharat / state

ವೀಸಾ ಉಲ್ಲಂಘನೆ: ಪಾಕಿಸ್ತಾನ ಮಹಿಳೆ ಮತ್ತು ಭಟ್ಕಳದ ಆಕೆಯ ಪತಿಗೆ ಜೈಲು ಶಿಕ್ಷೆ - ಉತ್ತರ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯ

ವೀಸಾ ನಿಯಮ ಉಲ್ಲಂಘನೆ - ಭಟ್ಕಳದ ಮಹ್ಮದ್ ಇಲಿಯಾಸ್ ಮತ್ತು ಆತನ ಪಾಕಿಸ್ತಾನಿ ಪತ್ನಿ ನಾಸಿರಾ ಪರವೀನ್​ಗೆ ಶಿಕ್ಷೆ ಜೈಲು - ಉತ್ತರ ಕನ್ನಡ ಜಿಲ್ಲಾ ಸತ್ರ ನ್ಯಾಯಾಲಯದ ಆದೇಶ

visa-violation-pakistani-woman-and-her-husband-from-bhatkal-sentenced-to-prison
ವೀಸಾ ಉಲ್ಲಂಘನೆ: ಪಾಕಿಸ್ತಾನ ಮಹಿಳೆ ಮತ್ತು ಭಟ್ಕಳದ ಆಕೆಯ ಪತಿಗೆ ಜೈಲು ಶಿಕ್ಷೆ
author img

By

Published : Jan 5, 2023, 10:57 PM IST

ಕಾರವಾರ: ಪಾಕಿಸ್ತಾನಿ ಮಹಿಳೆಯ ವಿವಾಹವಾಗಿ ಭಾರತಕ್ಕೆ ಕರೆ ತಂದು ವೀಸಾ ನಿಯಮ ಉಲ್ಲಂಘನೆ ಮಾಡಿದ ಭಟ್ಕಳದ ಪತಿ ಹಾಗೂ ಪಾಕಿಸ್ತಾನ ಮೂಲದ ಆತನ ಪತ್ನಿಗೆ ನಗರದ ಜಿಲ್ಲಾ ಸತ್ರ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡವನ್ನು ವಿಧಿಸಿ ತೀರ್ಪು ನೀಡಿದೆ. ಭಟ್ಕಳದ ಮೌಲಾನಾ ಆಜಾದ್ ರೋಡ್‌ನ ನಿವಾಸಿಯಾದ ಮಹ್ಮದ್ ಇಲಿಯಾಸ್ ಹಾಗೂ ಆತನ ಪಾಕಿಸ್ತಾನಿ ಪತ್ನಿ ನಾಸಿರಾ ಪರವೀನ್ ಶಿಕ್ಷೆಗೊಳಗಾದ ಆರೋಪಿಗಳಾಗಿದ್ದಾರೆ.

ಮಹ್ಮದ್ ಇಲಿಯಾಸ್ 2014ರ ಜೂನ್ 17ರಂದು ಸ್ಥಳೀಯ ಭಟ್ಕಳ ಪೊಲೀಸ್ ಠಾಣೆಗೆ ಹಾಗೂ ಕಾರವಾರದ ಎಫ್​ಆರ್​ಓ ಅವರಿಗೆ ಮಾಹಿತಿ ನೀಡದೇ ಪಾಕಿಸ್ತಾನಿ ಪ್ರಜೆಯಾದ ತನ್ನ ಪತ್ನಿಯನ್ನು ವೀಸಾ ವಿಸ್ತರಣೆಯ ಕುರಿತು ಭಟ್ಕಳದಿಂದ ದೆಹಲಿಗೆ ಕರೆದುಕೊಂಡು ಹೋಗಿ, ವಿದೇಶಿ ಕಾಯ್ದೆಯಂತೆ ವಿಸಾ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಭಟ್ಕಳ ನಗರ ಠಾಣೆಯ ಪಿಐ ಪ್ರಶಾಂತ ನಾಯಕ ಅವರು ಈ ಕುರಿತು ತನಿಖೆ ನಡೆಸಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಎರಡು ತಿಂಗಳ ಹಿಂದೆ ಕಾಣೆಯಾದ ಮಹಿಳೆ ಪಾಕ್​ ಜೈಲಿನಲ್ಲಿ ಪತ್ತೆ: ತಾಯಿಗೆ ಬಂತು ವಾಟ್ಸಾಪ್​ ಕಾಲ್​

ಈ ಪ್ರಕರಣದ ವಿಚಾರಣೆ ನಡೆಸಿದ ಕಾರವಾರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿಎಸ್ ವಿಜಯಕುಮಾರ ಅವರು ಆರೋಪಿ ಮಹ್ಮದ್ ಇಲಿಯಾಸ್​ಗೆ 1 ತಿಂಗಳ ಸಾದಾ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಅದೇ ರೀತಿಯಾಗಿ ಆರೋಪಿ ನಾಸಿರಾಳಿಗೆ 6 ತಿಂಗಳ ಸಾದಾ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕಿ ತನುಜಾ ವಿ. ಹೊಸಪಟ್ಟಣ ವಾದವನ್ನು ಮಂಡಿಸಿದ್ದರು.

ಇದನ್ನೂ ಓದಿ: ಭಟ್ಕಳದಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕಿಸ್ತಾನ ಮೂಲದ ಮಹಿಳೆ ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.