ETV Bharat / state

ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಪಾರ್ಕಿಂಗ್, ಸ್ವಚ್ಛತೆ ಇಲ್ಲದೆ ಪ್ರವಾಸಿಗರ ಪರದಾಟ - ETV Bharath Kannada news

ಮುರುಡೇಶ್ವರಕ್ಕೆ ಹರಿದು ಬರುತ್ತಿರುವ ಪ್ರವಾಸಿಗರ ದಂಡು- ವಾಹನ ನಿಲುಗಡೆ ಮತ್ತು ಕಸದ ರಾಶಿಯಿಂದ ಮಲಿನ ಆಗುತ್ತಿರುವ ಕಡಲ ಕಿನಾರೆ- ಬೇಕಿದೆ ಮೂಲಸೌಲಭ್ಯ

vehicle-parking-problem-in-murudeshwara-temple
ವಿಶ್ವ ಪ್ರಸಿದ್ಧ ಮುರುಡೇಶ್ವರ
author img

By

Published : Dec 26, 2022, 10:31 AM IST

ವಿಶ್ವ ಪ್ರಸಿದ್ಧ ಮುರುಡೇಶ್ವರಕ್ಕೆ ಬರುವ ಪ್ರವಾಸಿಗರಿಗೆ ಪಾರ್ಕಿಂಗ್ ವ್ಯವಸ್ಥೆಯದೇ ಕೊರತೆ

ಕಾರವಾರ(ಉತ್ತರ ಕನ್ನಡ): ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರುಡೇಶ್ವರಕ್ಕೆ ಪ್ರವಾಸಿಗರ ದಂಡೆ ಹರಿದುಬರುತ್ತಿದೆ. ವೀಕೆಂಡ್, ಶಾಲಾ ಪ್ರವಾಸ, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಿತ್ಯವೂ ಸಾವಿರಾರು ಮಂದಿ ಆಗಮಿಸಿ ಎಂಜಾಯ್ ಮಾಡಿ ತೆರಳುತ್ತಿದ್ದಾರೆ. ಆದರೆ ಇಂತಹ ಜಗತ್ಪ್ರಸಿದ್ಧ ಪ್ರವಾಸಿ ತಾಣಕ್ಕೆ ಬಂದ ಪ್ರವಾಸಿಗರಿಗೆ ಇಲ್ಲಿನ ಪಾರ್ಕಿಂಗ್ ಅವ್ಯವಸ್ಥೆ ಹಾಗೂ ತ್ಯಾಜ್ಯ ರಾಶಿಯು ಇರಿಸು ಮುರಿಸಾಗುವಂತೆ ಮಾಡುತ್ತಿದೆ.

ಏಷ್ಯಾದಲ್ಲಿಯೇ ಎರಡನೇ ಅತೀ ದೊಡ್ಡ ಶಿವನ ಮೂರ್ತಿಯನ್ನು ಒಳಗೊಂಡಿರುವ ಮತ್ತು ಇಲ್ಲಿನ ಕಡಲತೀರ, ವಾಟರ್ ಸ್ಪೋರ್ಟ್ಸ್ ಆಕರ್ಷಣೆಯಿಂದಾಗಿ ಮುರುಡೇಶ್ವರ ಪ್ರವಾಸಿ ತಾಣಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲಿಯೂ ಇದೀಗ ಶಾಲಾ ಕಾಲೇಜುಗಳ ಶೈಕ್ಷಣಿಕ ಪ್ರವಾಸ, ವೀಕೆಂಡ್, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಿತ್ಯವೂ ಸಾವಿರಾರು ಪ್ರವಾಸಿಗರು ಬಂದು ದಿನವಿಡಿ ಎಂಜಾಯ್ ಮಾಡಿ ತೆರಳುತ್ತಿದ್ದಾರೆ.

ಮುರುಡೇಶ್ವರದಲ್ಲಿ ಜನವೋ ಜನ: ಇದರಿಂದ ಮುರುಡೇಶ್ವರದಲ್ಲಿ ಜನ ಜಾತ್ರೆಯೇ ನಡೆಯುತ್ತದೆ. ಹೋಟೆಲ್ ಲಾಡ್ಜ್​ಗಳು ಬಹುತೇಕ ತುಂಬಿರುತ್ತವೆ. ಆದರೆ ಇಷ್ಟೊಂದು ಆಕರ್ಷಣೆಗೊಳಗಾಗಿರುವ ಪ್ರವಾಸಿ ತಾಣದಲ್ಲಿ ಈವರೆಗೂ ಸರಿಯಾದ ಒಂದು ಪಾರ್ಕಿಂಗ್ ವ್ಯವಸ್ಥೆ ಇಲ್ಲದಂತಾಗಿದೆ. ಇಲ್ಲಿಗೆ ಆಗಮಿಸುವ ಹೊರ ಜಿಲ್ಲೆ, ರಾಜ್ಯದ ಪ್ರವಾಸಿಗರು ನೇರವಾಗಿ ಕಡಲತೀರಗಳಿಗೆ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಕಡಲತೀರದಲ್ಲಿ ಓಡಾಡುವ ಮಕ್ಕಳು, ಸಾರ್ವಜನಿಕರಿಗೆ ಅಪಾಯ ಎದುರಾಗುವ ಆತಂಕ ಹೆಚ್ಚಾಗಿದೆ.

ಅಲ್ಲದೆ ಹೀಗೆ ಅರಿವಿಲ್ಲದೆ ಬರುವ ವಾಹನಗಳು ಮರಳಿನಲ್ಲಿ ಸಿಲುಕಿಕೊಳ್ಳುತ್ತಿವೆ. ಜೊತೆಗೆ ಕಡಲತೀರದಲ್ಲಿ ಶೌಚಾಲಯ, ಸ್ನಾನಗೃಹಗಳು ಇಲ್ಲದೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಮಹಿಳೆಯರು ಮಕ್ಕಳು ವಾಹನ, ಗಿಡದ ಮರೆಯಲ್ಲಿ ಬಟ್ಟೆ ಬದಲಿಸಬೇಕಾಗಿದೆ. ಕೂಡಲೇ ಸರ್ಕಾರ ಮೂಲಭೂತ ಸೌಕರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಪ್ರವಾಸಿಗರು.

ಸ್ಥಳೀಯರು ಮತ್ತು ಪ್ರವಾಸಿಗರಿಂದ ಕಡಲು ಮಲಿನ: ಇಷ್ಟೊಂದು ಪ್ರಸಿದ್ಧಿ ಹೊಂದಿರುವ ಮುರ್ಡೇಶ್ವರದ ಕಡಲು ತನ್ನೊಡಲಲ್ಲಿ ರಾಶಿ ರಾಶಿ ತ್ಯಾಜ್ಯ ಇಟ್ಟುಕೊಂಡಿದೆ. ಇಲ್ಲಿಗೆ ಬರುವ ಸಾವಿರಾರು ಪ್ರವಾಸಿಗರಲ್ಲಿ ಈ ಚಿತ್ರಣ ಅಸಹ್ಯ ಹುಟ್ಟಿಸುತ್ತಿದೆ. ಕಡಲ ತೀರದಲ್ಲಿರುವ ಗೂಡಂಗಡಿ ಹಾಗೂ ಸುತ್ತಮುತ್ತಲಿನ ಕೆಲ ಅಂಗಡಿ ಮಾಲೀಕರು ಸಂಜೆ ವೇಳೆಗೆ ಪ್ಲಾಸ್ಟಿಕ್, ಕಾಗದ, ಚೀಲ, ಆಹಾರ ಪದಾರ್ಥ ಹೀಗೆ ಎಲ್ಲ ತ್ಯಾಜ್ಯವನ್ನು ಕಡಲತೀರದಲ್ಲಿ ಸುರಿಯುತ್ತಿದ್ದಾರೆ. ಸುಂದರ ತಾಣ ಸ್ವಚ್ಚವಾಗಿಟ್ಟುಕೊಳ್ಳಬೇಕಿದ್ದ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳು ಕುರುಡುತನ ಪ್ರದರ್ಶಿಸುತ್ತಿರುವ ಕಾರಣ ಜಿಲ್ಲೆಗೆ ಕೆಟ್ಟ ಹೆಸರು ಬರುವಂತಾಗಿದೆ. ಕೂಡಲೇ ಆಡಳಿತ ವರ್ಗ ಪಾರ್ಕಿಂಗ್ ಹಾಗೂ ಸ್ವಚ್ಛತೆಗೆ ಹೆಚ್ಚು ಗಮನ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಪಾಯವಾಗುತ್ತಿರುವ ಕಡಲು: ಪ್ರವಾಸಕ್ಕೆ ಬಂದು ನೀರಿನಲ್ಲಿ ಈಜಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಅಲೆಗೆ ಕೊಚ್ಚಿಹೋಗಿ ಸಾವನ್ನಪ್ಪಿರುವ ಘಟನೆ ಮುರುಡೇಶ್ವರ ಕಡಲಿನಲ್ಲಿ ಇತ್ತೀಚೆಗೆ ನಡೆದಿತ್ತು. ಇದಕ್ಕೆ ಜನರ ರಕ್ಷಣೆ ನೇಮಕವಾದ ಲೈಫ್ ಗಾರ್ಡ್​ಗಳು ಬೋಟಿಂಗ್​ನಲ್ಲಿ ತೊಡಗಿಕೊಂಡಿದ್ದರಿಂದ ಸರಿಯಾದ ಸಮಯಕ್ಕೆ ರಕ್ಷಣೆಗೆ ದಾವಿಸಿಲ್ಲ ಎಂದು ದೂರು ಕೇಳಿಬಂದಿತ್ತು.

ಅಲ್ಲದೇ ಮಕ್ಕಳು ನೀರಿನ ಆಳಕ್ಕೆ ತೆರಳುತ್ತಿದ್ದರು ಯಾರೊಬ್ಬರು ಎಚ್ಚರಿಕೆ ನೀಡುತ್ತಿಲ್ಲ. ಪ್ರವಾಸಿಗರು ಕೂಡ ನಿರ್ಲಕ್ಷ್ಯ ತಾಳುವ ಕಾರಣ ಇಂತಹ ದುರ್ಘಟನೆಗಳು ನಡೆಯುತ್ತಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹ ಕೇಳಿಬಂದಿತ್ತು.

ವಿನಂತಿ: ಒಟ್ಟಾರೆ ಜಗತ್ಪ್ರಸಿದ್ಧ ಮುರುಡೇಶ್ವರಕ್ಕೆ ಪ್ರವಾಸಿಗರೇ ದಂಡೆ ಹರಿದುಬರುತ್ತಿದೆ. ಆದರೆ ಪ್ರವಾಸಿ ತಾಣದಲ್ಲಿನ ಮೂಲಭೂತ ಸೌಕರ್ಯದ ಕೊರತೆ ಹಾಗೂ ಸ್ವಚ್ಛತೆ ಇಲ್ಲದಿರುವುದು ಪ್ರವಾಸಿ ತಾಣಕ್ಕೆ ಕೆಟ್ಟ ಹೆಸರು ಬರುವಂತಾಗಿದ್ದು, ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

ಇದನ್ನೂ ಓದಿ: ಸಮುದ್ರದ ಅಲೆಗೆ ಕೊಚ್ಚಿ ಹೋದ ವಿದ್ಯಾರ್ಥಿ ಸಾವು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.