ETV Bharat / state

ರಾಂಪತ್ರೆ ಜಡ್ಡಿ ಸಂರಕ್ಷಣಾ ಕಾರ್ಯಕ್ಕೆ ಜಾಗತಿಕ ಮನ್ನಣೆ : ವಿಶ್ವಸಂಸ್ಥೆಯಿಂದ Equator-21 ಪ್ರಶಸ್ತಿ

ವೃಕ್ಷಗಳು ವಿಶಿಷ್ಟವಾಗಿ ಬೇರುಗಳನ್ನು ಹೊಂದಿರುವ ರಾಂಪತ್ರೆ ಜಡ್ಡಿಯ ಸಂರಕ್ಷಣಾ ಕಾರ್ಯವನ್ನು ಗುರುತಿಸಿ ಉತ್ತರ ಕನ್ನಡ ಜಿಲ್ಲೆಯ ಸಂಸ್ಥೆಗೆ ವಿಶ್ವಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿದೆ.

U N Equator-21 Award for Snehakunja  of Uttara Kannada
ವಿಶ್ವಸಂಸ್ಥೆಯಿಂದ ಈಕ್ವೆಟರ್ -21 ಪ್ರಶಸ್ತಿ
author img

By

Published : Jul 18, 2021, 9:47 AM IST

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ನೇಹಕುಂಜ ಸಂಸ್ಥೆಯ ಮೂಲಕ ನಡೆದ ರಾಂಪತ್ರೆ ಜಡ್ಡಿ ಸಂರಕ್ಷಣಾ ಕಾರ್ಯಕ್ಕೆ ವಿಶ್ವಸಂಸ್ಥೆ ಈ ವರ್ಷದ ‘ಈಕ್ವೆಟರ್ 2021’ ಪ್ರಶಸ್ತಿ ನೀಡಿ ಗೌರವಿಸಿದೆ. 130 ದೇಶಗಳ 600ಕ್ಕೂ ಹೆಚ್ಚು ನಾಮ ನಿರ್ದೇಶಿತಗೊಂಡವುಗಳಲ್ಲಿ ಅಂತಿಮವಾಗಿ ಸ್ನೇಹಕುಂಜ ಸಂಸ್ಥೆ ಆಯ್ಕೆಯಾಗಿದೆ.

ನರಸಿಂಹ ಹೆಗಡೆ ನೇತೃತ್ವದ ತಂಡ ಹಲವು ವರ್ಷಗಳಿಂದ ಸ್ನೇಹಕುಂಜ ಸಂಸ್ಥೆಯ ಮುಖೇನ ರಾಂಪತ್ರೆ ಜಡ್ಡಿ ಪಾರಿಸಾರಿಕ ಪುನಶ್ಚೇತನ ಕೆಲಸವನ್ನು ಮಾಡಿಕೊಂಡು ಬರುತ್ತಿದೆ.

ನಿಸರ್ಗ ಆಧಾರಿತ ಹವಾಮಾನ ವೈಪರೀತ್ಯ ತಡೆಗೆ ಕೈಗೊಂಡ ಕೆಲಸಗಳು, ಜೀವ ವೈವಿಧ್ಯತೆಯ ರಕ್ಷಣೆ, ಸ್ಥಳೀಯ ಜನರ ಸುಸ್ಥಿರ ಜೀವನಾಭಿವೃದ್ಧಿ ಕ್ರಮಕ್ಕೆ ಪ್ರೋತ್ಸಾಹ, ಇವುಗಳನ್ನೆಲ್ಲ ನವೀನ ರೀತಿಯಲ್ಲಿ ಕಾರ್ಯಗತಗೊಳಿಸಿರುವುದು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಧ್ಯೇಯದ ಸ್ಥಳೀಯ ಕೊಡುಗೆ ಪ್ರಶಸ್ತಿಗೆ ಮಾನದಂಡಗಳು.

U N Equator-21 Award for Snehakunja  of Uttara Kannada
ರಾಂಪತ್ರೆ ಜಡ್ಡಿ ವಿಶಿಷ್ಟ ಮರಗಳು

ಅಪರೂಪದ ರಾಂಪತ್ರೆ ಜಡ್ಡಿ ಕಾಡುಗಳನ್ನು ಗುರುತಿಸಿ ನಕಾಶೆ ತಯಾರಿಸಿರುವುದು, ಅವುಗಳು ಎದುರಿಸುತ್ತಿರುವ ಸಮಸ್ಯೆ ಮತ್ತು ಪರಿಹಾರೋಪಾಯಗಳು. ಸ್ಥಳೀಯರೊಡನೆ ಸೇರಿ ಅಲ್ಲಿಯದ್ದೇ ಸಸ್ಯಗಳ ನರ್ಸರಿ ತಯಾರಿಕೆ, ಅವುಗಳನ್ನು ಸೂಕ್ತ ಮತ್ತು ಅವನತಿ ಹೊಂದುತ್ತಿರುವ ಜಡ್ಡಿ ಕಾಡುಗಳಲ್ಲಿ ವೈಜ್ಞಾನಿಕವಾಗಿ ನೆಟ್ಟು ಬೆಳೆಸುವ ಕೆಲಸವನ್ನು ಮಾಡಲಾಗಿತ್ತು.

ಓದಿ : ಕಲಬುರಗಿ KVKಗೆ ಒಲಿದ ರಾಷ್ಟ್ರೀಯ ಕೃಷಿ ವಿಜ್ಞಾನ ಕೇಂದ್ರ ಪ್ರಶಸ್ತಿ

ನಿರಂತರವಾಗಿ ಅವುಗಳ ಸಂರಕ್ಷಣಾ ಮಹತ್ವವನ್ನು ಕಾರ್ಯಾಗಾರ, ತರಬೇತಿ ಏರ್ಪಡಿಸುವ ಮುಖಾಂತರ ತಿಳಿಸುವ ಪ್ರಯತ್ನ ನಡೆಸಲಾಗಿತ್ತು. ಇದರ ಜೊತೆಯಲ್ಲಿ ಅರಣ್ಯಾವಲಂಬಿ ಜೀವನಾಭಿವೃದ್ಧಿ ಕ್ರಮಗಳನ್ನು ಪ್ರೋತ್ಸಾಹಿಸುವುದು - ಸಾಂಘಿಕ ಜೇನು ಕೃಷಿ, ಉಪವನ ಉತ್ಪನ್ನಗಳ ಮೌಲ್ಯವರ್ಧನೆ, ಶುದ್ಧ ಇಂಧನ ಬಳಸಿ ಕಿರು ಉದ್ದಿಮೆಗಳನ್ನು ಪ್ರೋತ್ಸಾಹಿಸಿರುವ ಕೆಲಸಗಳನ್ನು ಕೈಗೊಳ್ಳಲಾಗಿತ್ತು.

ಐಎಫ್​ಹೆಚ್​ಡಿ ಸಂಸ್ಥೆಯ ಮುಖ್ಯಸ್ಥೆ ಅರುಣಾ ಮತ್ತು ಸಹೋದ್ಯೋಗಿಗಳಾದ ನಿಕು ಹಾಗೂ ಪ್ರತೀಕ್ ರಾಂಪತ್ರೆ ಜಡ್ಡಿ ಸಂರಕ್ಷಣಾ ಕಾರ್ಯದ ಪೂರಕ ಮಾಹಿತಿಯನ್ನು ವಿಶ್ವಸಂಸ್ಥೆಗೆ ಸಲ್ಲಿಸುವಲ್ಲಿ ನೆರವಾಗಿದ್ದರು.

ಅಪರೂಪದ ಜೌಗು ಪ್ರದೇಶದ ಕಾಡಿನ ಸಂರಕ್ಷಣೆ, ಜಾಗತಿಕ ಹವಾಮಾನ ವೈಪರೀತ್ಯ ತಡೆಗೆ ಪ್ರಯತ್ನ, ಆರ್ಥಿಕ ಹಾಗೂ ಅಭಿವೃದ್ಧಿ ಮಾದರಿಯಲ್ಲಿ ಧನಾತ್ಮಕ ಬದಲಾವಣೆಯನ್ನು ತಳಮಟ್ಟದಿಂದ ಹಿಡಿದು ನೀತಿ ನಿರೂಪಕರವರೆಗೆ ಕೊಂಡೊಯ್ದದ್ದು. ಇವು ಭೂಗೃಹ ಎದುರಿಸುತ್ತಿರುವ ಸವಾಲು ಎದುರಿಸಲು ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಪೂರಕ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯಸ್ಥರಾದ ಅಚಿಮ್ ಸ್ಟೆನರ್ ನ್ಯೂಯಾರ್ಕ್​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಸಾಮಾನ್ಯವಾಗಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಇರುವ ನ್ಯೂಯಾರ್ಕ್​ನಲ್ಲಿ ವಾರಗಳ ಕಾಲ ನಡೆಯುವ ವಾರ್ಷಿಕ ಅಧಿವೇಶನದಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಕಾರಣ ಪ್ರಶಸ್ತಿ ಪ್ರಧಾನ ಸಮಾರಂಭ ಆನ್‌ಲೈನ್​ನಲ್ಲಿ ನಡೆಯಲಿದೆ. ಪ್ರಶಸ್ತಿಯ ಮೊತ್ತ ಹತ್ತು ಸಾವಿರ ಅಮೆರಿಕನ್ ಡಾಲರ್​ (ಸುಮಾರು ಏಳೂವರೆ ಲಕ್ಷ ರೂಪಾಯಿಗಳು) ಆಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.