ETV Bharat / state

ಮುರುಡೇಶ್ವರಕ್ಕೆ ಬಂದಿದ್ದ ಪ್ರವಾಸಿಗರಿಬ್ಬರು ನೀರು ಪಾಲು - ಮುರುಡೇಶ್ವರ ಸಮುದ್ರದಲ್ಲಿ ಮುಳುಗಿ ಪ್ರವಾಸಿಗರು ಸಾವು

ಇವರೆಲ್ಲರೂ ನಾಳೆ ಬೈಂದೂರಿನಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಮುರ್ಡೇಶ್ವರ ದೇವರ ದರ್ಶನ ಮಾಡಲು ಆಗಮಿಸಿದ್ದರು. ಆದರೆ, ದುರ್ದೈವಶಾವತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ..

Two tourist death in Murudeshwar while there are swimming in sea
ಮುರುಡೇಶ್ವರಕ್ಕೆ ಬಂದಿದ್ದ ಪ್ರವಾಸಿಗರಿಬ್ಬರು ನೀರು ಪಾಲು
author img

By

Published : Aug 30, 2020, 8:51 PM IST

ಭಟ್ಕಳ : ಮುರ್ಡೇಶ್ವರಕ್ಕೆ ಬಂದಿದ್ದ ಎರಡು ಪ್ರತ್ಯೇಕ ಪ್ರವಾಸಿಗರ ತಂಡದ ಇಬ್ಬರು ವ್ಯಕ್ತಿಗಳು ಸಮುದ್ರ ಪಾಲಾದ ಘಟನೆ ನಡೆದಿದೆ. ಬೆಂಗಳೂರಿನಿoದ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ 9 ಸ್ನೇಹಿತರ ತಂಡ ಈಜಲು ಸಮುದ್ರಕ್ಕೆ ಇಳಿದಿದ್ದರು. ಅದರಲ್ಲಿ ಅಭಿಜಿತ್ (26) ಎಂಬಾತ ನೀರು ಪಾಲಾಗಿದ್ದಾನೆ.

ಮೃತ ವ್ಯಕ್ತಿ ಪಶ್ಚಿಮ ಬಂಗಾಳದ ಮೂಲದವನಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಮುದ್ರದಲ್ಲಿ ಭಾರಿ ಅಲೆಗಳಿದ್ದರೂ ಈಜಲು ತೆರಳಿದ ಪರಿಣಾಮ ಈ ಅವಘಡ ಸಂಭವಿಸಿದೆ.

ಇವರೆಲ್ಲರೂ ನಾಳೆ ಬೈಂದೂರಿನಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಮುರ್ಡೇಶ್ವರ ದೇವರ ದರ್ಶನ ಮಾಡಲು ಆಗಮಿಸಿದ್ದರು. ಆದರೆ, ದುರ್ದೈವಶಾವತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಶಿವಮೊಗ್ಗದ ಹಳೇ ಸೊರಬದಿಂದ ಬಂದ 6 ಜನರ ತಂಡ ಸಮುದ್ರಕ್ಕೆ ಈಜಲು ಇಳಿದ ಪರಿಣಾಮ ಅಲೆಗಳ ಅಬ್ಬರಕ್ಕೆ (18) ಶರತ್ ಎಂಬ ಯುವಕ ಕೊಚ್ಚಿ ಹೋಗಿದ್ದ. ಯುವಕನ ಮೃತದೇಹ ತೂದಳ್ಳಿ ಬಳಿ ದೊರೆತಿದೆ ಎಂದು ತಿಳಿದು ಬಂದಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.