ETV Bharat / state

ಪದ್ಮಶ್ರೀ ತುಳಸಜ್ಜಿ ಸರಳತೆ ; ಚಪ್ಪಲಿ ಧರಿಸದ ಬಗ್ಗೆ ಮಾಹಿತಿ ಬಿಚ್ಚಿಟ್ಟ ವೃಕ್ಷಮಾತೆ! - ಬರಿಗಾಲಿನಲ್ಲೇ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ತುಳಸಿಗೌಡ

ಮುಂಚೆ ಪ್ಲಾಸ್ಟಿಕ್ ಕವರ್‌ಗಳಿರಲಿಲ್ಲ,ವಾಹನಗಳಿರಲಿಲ್ಲ. ನಾನೇ ಬೀಜ ತಂದು, ನರ್ಸರಿಯಲ್ಲಿ ಗಿಡ ಮಾಡಿ ಕಾಡಿಗೆ ತಲೆ ಮೇಲೆ ಹೊತ್ತುಕೊಂಡು ನಡೆದೇ ಹೋಗಿ ನೆಡುತ್ತಿದ್ದೆ ಎಂದು ಕೂಡ ಇದೇ ವೇಳೆ ಸ್ಮರಿಸಿದರು..

tulasi gowda received padma shri award in a barefoot
ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ
author img

By

Published : Nov 16, 2021, 4:31 PM IST

ಕಾರವಾರ/ಉತ್ತರ ಕನ್ನಡ : ವೃಕ್ಷಮಾತೆ ಅಂಕೋಲಾದ ತುಳಸಿ ಗೌಡ ಅವರು ದೇಹಲಿಯ ರಾಷ್ಟ್ರಪತಿ ಭವನದಲ್ಲಿ ಬರಿಗಾಲಲ್ಲಿಯೇ ತೆರಳಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಸ್ವೀಕರಿಸಿದಾಗ ಅವರ ಸರಳತೆಯನ್ನು ದೇಶವೇ ಕೊಂಡಾಂಡಿತ್ತು.

ಮೊದಲಿನಿಂದಲೂ ಪಾದರಕ್ಷೆ ಧರಿಸದ ಅವರು ಅಷ್ಟೊಂದು ದೊಡ್ಡ ಸಮಾರಂಭಕ್ಕೆ ತೆರಳುವಾಗಲೂ ಹಾಕುವಂತೆ ಕೇಳಿಕೊಂಡರು ಧರಿಸಿರಲಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ತುಳಸಜ್ಜಿ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಪದ್ಮಶ್ರೀ ಪುರಸ್ಕೃತರಾದ ತುಳಸಿ ಗೌಡ

ಕಾರವಾರದಲ್ಲಿ ತುಳಸಜ್ಜಿಯನ್ನು ಯಾಕೆ ಚಪ್ಪಲಿ ಧರಿಸಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತನಗೆ ಚಪ್ಪಲಿ ಧರಿಸಿ ರೂಢಿನೇ ಇಲ್ಲ. ನಾನು ಧರಿಸುವುದೂ ಇಲ್ಲ. ನನ್ನಷ್ಟಕ್ಕೆ ನಾನು ಕಾಡಿಗೆ ಹೋಗಿ ಬರುತ್ತೇನೆ. ಮುಳ್ಳು ಚುಚ್ಚುವುದಿಲ್ಲ ಎಂದರು. ಬರಿಗಾಲಲ್ಲೇ ಕಾಡಿಗೆ ಹೋಗುತ್ತಿದ್ದೆ.

ಮುಂಚೆ ಪ್ಲಾಸ್ಟಿಕ್ ಕವರ್‌ಗಳಿರಲಿಲ್ಲ,ವಾಹನಗಳಿರಲಿಲ್ಲ. ನಾನೇ ಬೀಜ ತಂದು, ನರ್ಸರಿಯಲ್ಲಿ ಗಿಡ ಮಾಡಿ ಕಾಡಿಗೆ ತಲೆ ಮೇಲೆ ಹೊತ್ತುಕೊಂಡು ನಡೆದೇ ಹೋಗಿ ನೆಡುತ್ತಿದ್ದೆ ಎಂದು ಕೂಡ ಇದೇ ವೇಳೆ ಸ್ಮರಿಸಿದರು.

ಇದನ್ನೂ ಓದಿ:ಪದ್ಮಶ್ರೀಗೆ ಆಯ್ಕೆಯಾದ ವೃಕ್ಷಮಾತೆ ತುಳಸಿ ಗೌಡ ಪ್ರಶಸ್ತಿ ಬಗ್ಗೆ ಹೇಳಿದ್ದು ಹೀಗೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.