ETV Bharat / state

ಕಡಲ ತೀರಗಳತ್ತ ಪ್ರವಾಸಿಗರ ದಂಡು: ಪ್ರಾಣಭಯ ಲೆಕ್ಕಿಸದೆ ಪ್ರಕ್ಷುಬ್ಧ ಸಮುದ್ರಕ್ಕಿಳಿದು ಮೋಜು-ಮಸ್ತಿ - ಮುರುಡೇಶ್ವರ, ಗೋಕರ್ಣ

ಉತ್ತರಕನ್ನಡ ಜಿಲ್ಲಾಡಳಿತ ಪ್ರವಾಸಿಗರ ರಕ್ಷಣೆ ಹಾಗೂ ಮಾರ್ಗದರ್ಶನ ನೀಡಲು ಅನುಕೂಲವಾಗುವಂತೆ ಜಿಲ್ಲೆಯ ಪ್ರಮುಖ ಕಡಲತೀರಗಳು ಹಾಗೂ ಜಲಪಾತಗಳಿಗೆ ಲೈಫ್ ಗಾರ್ಡ್​​ಗಳನ್ನು ನೇಮಕ ಮಾಡಿತ್ತು. ಆದರೆ ಲಾಕ್​​ಡೌನ್​​ ವೇಳೆ ಪ್ರವಾಸೋದ್ಯಮ ನೆಲಕಚ್ಚಿದ್ದರಿಂದ ಆರ್ಥಿಕ ಸಂಕಷ್ಟ ಎದುರಾಗಿ ಲೈಫ್ ಗಾರ್ಡ್ ನೇಮಕ ಕೈಬಿಟ್ಟಿದ್ದರು.

tourists-are-gathered-in-large-number-at-sea-sour-without-knowing-danger
ಪ್ರಾಣ ಭಯ ಲೆಕ್ಕಿಸದೆ ಪ್ರಕ್ಷುಬ್ಧ ಸಮುದ್ರಕ್ಕಿಳಿದು ಮೋಜು-ಮಸ್ತಿ
author img

By

Published : Jul 11, 2021, 8:12 PM IST

ಕಾರವಾರ (ಉ.ಕ): ಅನ್​​​ಲಾಕ್ ಬಳಿಕ ಉತ್ತರ ಕನ್ನಡ ಜಿಲ್ಲೆಯತ್ತ ಪ್ರವಾಸಿಗರ ದಂಡೆೇ ಹರಿದುಬರುತ್ತಿದೆ. ಅದರಲ್ಲಿಯೂ ಕಡಲತೀರಗಳು ಪ್ರವಾಸಿಗರಿಂದಲೇ ತುಂಬಿ ತುಳುಕುತ್ತಿದ್ದು, ಮಸ್ತ್ ಎಂಜಾಯ್ ಮಾಡತೊಡಗಿದ್ದಾರೆ‌. ಆದರೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಡಲ ಅಲೆಗಳು ಭೀಕರ ಸ್ವರೂಪ ತಳೆದಿದ್ದು, ಇದೀಗ ಪ್ರವಾಸಿಗರ ಪ್ರಾಣಕ್ಕೆ ಕುತ್ತು ಬರುವ ಆತಂಕ ಎದುರಾಗಿದೆ.

ಪ್ರಾಣ ಭಯ ಲೆಕ್ಕಿಸದೆ ಪ್ರಕ್ಷುಬ್ಧ ಸಮುದ್ರಕ್ಕಿಳಿದು ಮೋಜು-ಮಸ್ತಿ

ಜಿಲ್ಲೆಯ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಮುರುಡೇಶ್ವರ, ಗೋಕರ್ಣ, ಹೊನ್ನಾವರದ ಕಡಲತೀರಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸಿದ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಮಕ್ಕಳು, ಮಹಿಳೆಯರು, ದೊಡ್ಡವರೆನ್ನದೆ ಎಲ್ಲರೂ ನೀರನ್ನು ಕಂಡ ತಕ್ಷಣ ಏನು ಯೋಚಿಸದೇ ನೀರಿನಲ್ಲಿ ಇಳಿದು ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಆದರೆ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಆರ್ಭಟಿಸುತ್ತಿರುವ ಮಳೆಯಿಂದಾಗಿ ಕಡಲು ಪ್ರಕ್ಷುಬ್ಧಗೊಂಡಿದ್ದು ಸಾಕಷ್ಟು ಅಪಾಯಕಾರಿಯಾಗಿದೆ.

ಅಲೆಗಳ ಆರ್ಭಟ ಕೂಡ ಜೋರಾಗಿದ್ದು, ಪ್ರವಾಸಿಗರ ಪ್ರಾಣಕ್ಕೆ ಕುತ್ತು ಬರುವ ಆತಂಕ ಇದೆ. ಈ ಹಿಂದೆ ಪ್ರತಿ ಕಡಲತೀರಗಳಲ್ಲಿ ಲೈಫ್ ಗಾರ್ಡ್ ಇರುತ್ತಿದ್ದರು. ಆದರೆ ಈ ಬಾರಿ ಕಡಲತೀರಗಳಲ್ಲಿ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ. ಕೆಲ ವೇಳೆ ಪೊಲೀಸರು ಬಂದು ಪ್ರವಾಸಿಗರಿಗೆ ಎಚ್ಚರಿಸಿ ನೀರಿಗಳಿಯದಂತೆ ಸೂಚಿಸಿದರೂ ಮತ್ತೆದೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಲೈಫ್​ಗಾರ್ಡ್​​ಗಳೇ ಇಲ್ಲ

ಉತ್ತರಕನ್ನಡ ಜಿಲ್ಲಾಡಳಿತ ಪ್ರವಾಸಿಗರ ರಕ್ಷಣೆ ಹಾಗೂ ಮಾರ್ಗದರ್ಶನ ನೀಡಲು ಅನುಕೂಲವಾಗುವಂತೆ ಜಿಲ್ಲೆಯ ಪ್ರಮುಖ ಕಡಲತೀರಗಳು ಹಾಗೂ ಜಲಪಾತಗಳಿಗೆ ಲೈಫ್ ಗಾರ್ಡ್​​ಗಳನ್ನ ನೇಮಕ ಮಾಡಿತ್ತು. ಆದರೆ ಲಾಕ್​​ಡೌನ್​​ ವೇಳೆ ಪ್ರವಾಸೋದ್ಯಮ ನೆಲಕಚ್ಚಿದ್ದರಿಂದ ಆರ್ಥಿಕ ಸಂಕಷ್ಟ ಎದುರಾಗಿ ಲೈಫ್ ಗಾರ್ಡ್ ನೇಮಕ ಕೈಬಿಟ್ಟಿದ್ದರು. ಆದರೆ ಪ್ರಮುಖ ಕಡಲತೀರಗಳಿಗೆ ಜಿಲ್ಲಾಡಳಿತ ನೇಮಕ ಮಾಡಿತ್ತಾದರೂ ಲೈಫ್ ಗಾರ್ಡ್​ಗಳು ಮಾತ್ರ ಕಾಣಿಸುತ್ತಿಲ್ಲ.

ಪ್ರತಿನಿತ್ಯ ಸಾವಿರಾರು ಮಂದಿ ಬಂದು ಹೋಗುವ ಕಡಲತೀರಗಳಲ್ಲಿ ಅದೆಷ್ಟೋ ಮಂದಿ ಕಡಲತೀರದ ಆಳ ಅಗಲ ತಿಳಿಯದೇ ನಿರಿಗಿಳಿದು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅಲ್ಲದೆ ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಲೈಫ್ ಗಾರ್ಡ್​​ಗಳ ನೇಮಕಕ್ಕೆ ಕ್ರಮಕೈಗೊಳ್ಳಬೇಕಿದ್ದು, ಮುಂದಾಗುವ ಅನಾಹುತ ತಪ್ಪಿಸಬೇಕಿದೆ ಎಂಬುದು ಸ್ಥಳೀಯರು ಒತ್ತಾಯವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.