ಕಾರವಾರ : ಉತ್ತರಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಖೋಟಾ ನೋಟು ಚಲಾವಣೆಯ ಬಗ್ಗೆ ವರದಿಗಳು ಬರುತ್ತಿರುವುದನ್ನು ಗಮನಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ್ ಈ ಜಾಲವನ್ನು ಬೇಧಿಸಲು ತಂಡವನ್ನು ರಚಿಸಿದರು.
ಖಚಿತ ಮಾಹಿತಿ ಮೇರೆಗೆ ಕಾರವಾರದ ರಾಷ್ಟ್ರೀಯ ಹೆದ್ದಾರಿ ಬಳಿ ಹೋಟೆಲೊಂದರ ಬಳಿ ಗೋವಾದಿಂದ ಬಂದಿದ್ದ ಮೂವರಿಗೆ ಇಬ್ಬರು ಖೋಟಾ ನೋಟುಗಳ ಕಟ್ಟನ್ನು ನೀಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಕಾರವಾರ ಮೂಲದ ಪ್ರವೀಣ, ಗೋವಾ ಮೂಲದ ಲೋಯ್ಡ್, ಲಾರ್ಸನ್ ಹಾಗೂ ಪ್ರನೋಯ್ ಫರ್ನಾಂಡೀಸ್ ಎಂದು ಗುರುತಿಸಲಾಗಿದಂ. ಕಾರವಾರ ಮೂಲದ ಇನ್ನೋರ್ವ ಆರೋಪಿ ಮುಸ್ತಾಕ್ ಬೇಗ್ ತಲೆಮರೆಸಿಕೊಂಡಿದ್ದಾನೆ.
ಬಂಧಿತರಿಂದ 500 ರೂಪಾಯಿ ಮುಖಬೆಲೆಯ 26 ಖೋಟಾ ನೋಟುಗಳನ್ನ ಹಾಗೂ ಸುಮಾರು 20 ಸಾವಿರ ರೂಪಾಯಿ ಮೌಲ್ಯದ ಅಸಲಿ ನೋಟುಗಳನ್ನ ಜಪ್ತಿಪಡಿಸಿಕೊಳ್ಳಲಾಗಿದೆ.
ಈ ಖೋಟಾ ನೋಟುಗಳನ್ನು ಸಣ್ಣಪುಟ್ಟ ವ್ಯಾಪಾರಸ್ಥರಿಗೆ ನೀಡಿ ಚಲಾವಣೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ನಕಲಿ ನೋಟಿನ ಜಾಲವನ್ನು ಬೇರು ಮಟ್ಟದಿಂದ ಕತ್ತರಿಸಿ ಹಾಕಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ಸ್ಟಾಕ್ ಮಾರ್ಕೆಟ್ ಪ್ರಾಫಿಟ್ ಹೆಸರಲ್ಲಿ ವಂಚನೆ: ಬಳ್ಳಾರಿ ಮೂಲದ ಮೂವರ ಬಂಧನ