ETV Bharat / state

ಐತಿಹಾಸಿಕ ಹಿನ್ನೆಲೆಯ ಸಹಸ್ರಲಿಂಗ ಕ್ಷೇತ್ರ: ಲಕ್ಷಾಂತರ ಭಕ್ತರಿಂದ ದರ್ಶನ - Field of Historical Background

ಶಾಲ್ಮಲಾ ನದಿಯ ಬಂಡೆಗಳ ಮೇಲೆ ಲಿಂಗಗಳು ನೆಲೆಗೊಂಡಿರುವುದರಿಂದ ಈ ಸ್ಥಳವು ವಿಶಿಷ್ಟವಾಗಿದೆ. ಸಹಸ್ರ ಎಂದರೆ 'ಸಾವಿರ' ಎಂದರ್ಥ. ಅಂದರೆ ಸಾವಿರ ಲಿಂಗಗಳನ್ನು ಇಲ್ಲಿನ ಬಂಡೆಗಳ ಮೇಲೆ ಕೆತ್ತಲಾಗಿದೆ. ಇತಿಹಾಸದ ಪ್ರಕಾರ 1,678 ಮತ್ತು 1,718ರ ನಡುವೆ ವಿಜಯನಗರ ಸಾಮ್ರಾಜ್ಯದ ಆಡಳಿತಗಾರ ಸದಾಶಿವರಾಯರು 1,000 ಲಿಂಗಗಳನ್ನು ಸ್ಥಾಪಿಸಿದ್ದರು ಎನ್ನಲಾಗಿದೆ.

ಶಿವಲಿಂಗ ದರ್ಶನ
ಶಿವಲಿಂಗ ದರ್ಶನ
author img

By

Published : Mar 11, 2021, 5:02 PM IST

ಶಿರಸಿ: ಶಾಂತ ಚಿತ್ತವಾಗಿ ಹರಿಯುವ ಶಾಲ್ಮಲಾ ನದಿ ಮಧ್ಯದಲ್ಲಿರುವ ಶಿರಸಿ ತಾಲೂಕಿನ ಸಹಸ್ರಲಿಂಗ ಪುಣ್ಯ ಕ್ಷೇತ್ರವು 1000 ಶಿವಲಿಂಗಗಳಿಗೆ ಹೆಸರುವಾಸಿಯಾಗಿದ್ದು, ಇಲ್ಲಿನ ಲಿಂಗಗಳನ್ನು ಆರಾಧಿಸಲು ಪ್ರತಿ ವರ್ಷ ಶಿವರಾತ್ರಿಯ ದಿನದಂದು ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.

ಸಹಸ್ರಲಿಂಗ ಕ್ಷೇತ್ರವು ಉತ್ತರ ಕನ್ನಡದ ಶಿರಸಿ ನಗರದಿಂದ 18 ಕಿ.ಮೀ. ದೂರದಲ್ಲಿದೆ. ಶಾಲ್ಮಲಾ ನದಿಯ ಬಂಡೆಗಳ ಮೇಲೆ ಲಿಂಗಗಳು ನೆಲೆಗೊಂಡಿರುವುದರಿಂದ ಈ ಸ್ಥಳವು ವಿಶಿಷ್ಟವಾಗಿದೆ. ಸಹಸ್ರ ಎಂದರೆ 'ಸಾವಿರ' ಎಂದರ್ಥ. ಅಂದರೆ ಸಾವಿರ ಲಿಂಗಗಳನ್ನು ಇಲ್ಲಿನ ಬಂಡೆಗಳ ಮೇಲೆ ಕೆತ್ತಲಾಗಿದೆ. ಇತಿಹಾಸದ ಪ್ರಕಾರ 1,678 ಮತ್ತು 1,718ರ ನಡುವೆ ವಿಜಯನಗರ ಸಾಮ್ರಾಜ್ಯದ ಆಡಳಿತಗಾರ ಸದಾಶಿವರಾಯರು 1,000 ಲಿಂಗಗಳನ್ನು ಸ್ಥಾಪಿಸಿದ್ದರು ಎನ್ನಲಾಗಿದೆ.

ಲಕ್ಷಾಂತರ ಭಕ್ತರಿಂದ ಸಹಸ್ರಲಿಂಗ ಕ್ಷೇತ್ರ ದರ್ಶನ

ಇಲ್ಲಿನ ಲಿಂಗಗಳು ಆಕಾರ ಮತ್ತು ಗಾತ್ರದಲ್ಲಿ ಭಿನ್ನವಾಗಿದ್ದು, ನದಿ ನೀರಿನ ಹರಿವಿನಿಂದ ಸ್ಥಳಾಂತರಿಸಲ್ಪಟ್ಟಿದ್ದರೆ, ಇನ್ನು ಕೆಲವು ಸಂಪೂರ್ಣವಾಗಿ ವಿರೂಪಗೊಂಡಿವೆ. ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ಈ ಸ್ಥಳಕ್ಕೆ ಭೇಟಿ ನೀಡಿದರೆ ಲಿಂಗದ ಕೆತ್ತನೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ.

ಈ ಬಾರಿ ಲಕ್ಷಕ್ಕೂ ಅಧಿಕ ಭಕ್ತರು ಭೇಟಿ ನೀಡಿ ದೇವರ ದರ್ಶನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ವಿಶೇಷ ಚೇತನರಿಗೆ ಅನುಕೂಲ ಆಗಲು ಆಸನಗಳ ವ್ಯವಸ್ಥೆ, ಕುಡಿಯಲು ನೀರು, ಮಜ್ಜಿಗೆ ಹೀಗೆ ಹಲವು ವ್ಯವಸ್ಥೆಯನ್ನು ಸ್ಥಳೀಯ ಗ್ರಾಮ ಪಂಚಾಯಿತಿ ಭೈರುಂಭೆಯಿಂದ ಮಾಡಲಾಗಿದೆ.
ಇದನ್ನೂ ಓದಿ.. ಮಾನಸಿಕ ಅಸ್ವಸ್ಥ ವೃದ್ಧೆಯ ಮೇಲೆ ಅತ್ಯಾಚಾರ ಎಸಗಿದ ಕಾಮುಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.