ETV Bharat / state

ಕುಮಟಾದಲ್ಲಿ ಟೆಂಪೊ ಪಲ್ಟಿ... 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ, ಮೂವರ ಸ್ಥಿತಿ ಗಂಭೀರ - ಅಪಘಾತದಲ್ಲಿ ಮೂವರು ಗಂಭೀರ, 20 ಪ್ರಯಾಣಿಕರಿಗೆ ಗಾಯ

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊನ್ನಾವರದಿಂದ ಕುಮಟಾ ಕಡೆ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಟೆಂಪೊವೊಂದು ಪಲ್ಟಿಯಾದ ಪರಿಣಾಮ ಅದರಲ್ಲಿದ್ದ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಇವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.

Tempo Over turn in Kumta of Karwar
ಕುಮಟಾದಲ್ಲಿ ಟೆಂಪೊ ಪಲ್ಟಿ
author img

By

Published : Feb 18, 2020, 6:16 PM IST

Updated : Feb 18, 2020, 7:57 PM IST

ಕಾರವಾರ: ಟೆಂಪೋ ಪಲ್ಟಿಯಾಗಿ 15 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಕುಮಟಾ ತಾಲೂಕಿನ ಹಂದಿಗೋಣ ಸರ್ಕಾರಿ ಶಾಲೆ ಸಮೀಪ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊನ್ನಾವರದಿಂದ ಕುಮಟಾ ಕಡೆ ಚಲಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ಟೆಂಪೊ ಪಲ್ಟಿಯಾಗಿದೆ. ಪರಿಣಾಮ ಅದರಲ್ಲಿದ್ದ ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಕುಮಟಾದಲ್ಲಿ ಟೆಂಪೊ ಪಲ್ಟಿಯಾಗಿ 15 ಕ್ಕೂ ಜನರಿಗೆ ಗಾಯ

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪ್ರಶಾಂತ ನಾಯಕ ಕೊಡ್ಕಣಿ ಮಣಿಪಾಲ್ ಹಾಗೂ ಗುಂಡಬಾಳದ ಲೋಕರಾಜ್ ಜೈನ್, ಹೊಳೆಗದ್ದೆಯ ರೇವತಿ ಭಂಡಾರಿ ಎಂಬುವರನ್ನು ಹೊನ್ನಾವರ ಸೈಂಟ್ ಇಗ್ನೇಷಿಯಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಉಳಿದ ಗಾಯಾಳುಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಸ್ಥಳಕ್ಕೆ ಕುಮಟಾ ಸಿಪಿಐ ಪರಮೇಶ್ವರ್​ ಗುನಗ ಹಾಗೂ ಕ್ರೈಂ ಪಿಎಸ್​ಐ ಸುಧಾ ಅಘನಾಶಿನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Last Updated : Feb 18, 2020, 7:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.