ಕಾರವಾರ : ಹೋಳಿ ವೇಳೆ ಕರಾವಳಿ ಭಾಗಗಳಲ್ಲಿ ಬಗೆ ಬಗೆಯ ವೇಷ ತೋಡುವ ವೇಷದಾರಿಗಳು ಮನೆ ಮನೆಗೆ ತೆರಳಿ ಹಣ ಪಡೆದು ರಂಜಿಸುತ್ತಾರೆ. ಆದರೆ, ಇಲ್ಲೊಬ್ಬ ವೇಷದಾರಿ ರಸ್ತೆ, ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದವರಿಗೆ ಕೊರೊನಾ ಜಾಗೃತಿ ಮೂಡಿಸುವ ಮೂಲಕ ಮಾದರಿ ಕಾರ್ಯ ಮಾಡುತ್ತಿದ್ದಾರೆ.
ಓದಿ: ರಮೇಶ್ ಜಾರಕಿಹೊಳಿ ಮನೆಗೆ ನುಗ್ಗಲು ಕಾಂಗ್ರೆಸ್ ಮಹಿಳಾ ಘಟಕ ಯತ್ನ: ಪೊಲೀಸರೊಂದಿಗೆ ಮಾತಿನ ಚಕಮಕಿ
ಕರಾವಳಿಯಲ್ಲಿ ಹೋಳಿ ಹುಣ್ಣಿಮೆ ಸಮೀಪಿಸುತ್ತಿದ್ದಂತೆ ಸುಗ್ಗಿ ಸಂಭ್ರಮ ಮನೆ ಮಾಡುತ್ತದೆ. ಈ ಭಾಗದಲ್ಲಿ ಸುಗ್ಗಿ ಕಟ್ಟುವ ಹಾಲಕ್ಕಿ, ಕೋಮಾರಪಂತ ಸೇರಿ ವಿವಿಧ ಸಮುದಾಯದವರು ವಾರಗಳ ಕಾಲ ಮನೆ ಬಿಟ್ಟು ಹಾರ ತುರಾಯಿಯೊಂದಿಗೆ ಬಗೆಬಗೆಯ ವೇಷ ತೊಟ್ಟು ಮನೆ ಮನೆ ಸುತ್ತಿ ಸುಗ್ಗಿ ಆಡುತ್ತಾರೆ.
ಅದರಲ್ಲಿಯೂ ಕರಡಿ ವೇಷ ಈ ಭಾಗದಲ್ಲಿ ಸಾಕಷ್ಟು ಜನಪ್ರಿಯಗೊಂಡಿದೆ. ಮನೆ ಮನೆಗೆ ತೆರಳಿ ಹಣ ಕೂಡ ಸಂಗ್ರಹಿಸುತ್ತಾರೆ. ಆದರೆ, ಕೊರೊನಾ 2ನೇ ಅಲೆ ಹೆಚ್ಚಾದ ಹಿನ್ನೆಲೆ ಕೊರೊನಾ ಜಾಗೃತಿಗೆ ಮುಂದಾದ ವ್ಯಕ್ತಿಯೋರ್ವ, ಮಾರುಕಟ್ಟೆ-ರಸ್ತೆಗಳಲ್ಲಿ ಮಾಸ್ಕ್ ಧರಿಸದವರನ್ನು ತಡೆದು ಕೊರೊನಾ ಬಗ್ಗೆ ಎಚ್ಚರಿಸಿದ್ದಾರೆ.
ಕೇರಳ, ಮಹಾರಾಷ್ಟ್ರದ ಪರಿಸ್ಥಿತಿ ತಿಳಿಸಿ ಮತ್ತೆ ಲಾಕ್‌ಡೌನ್‌ನಂತಹ ಕಠಿಣ ಪರಿಸ್ಥಿತಿಗೆ ಎಲ್ಲರನ್ನು ನೂಕದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಇದೀಗ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.