ಕಾರವಾರ: ಅನಗತ್ಯ ಓಡಾಟ ತಡೆಯಲು ಪೊಲೀಸರಿಂದ ಬಿಗಿ ಕ್ರಮ! - Corona 2nd Wave
ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ 19 ಗ್ರಾಮ ಪಂಚಾಯತ್‌ಗಳನ್ನು ವಿಶೇಷ ಕಂಟೋನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ..

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಹೆಚ್ಚಾದ ಬೆನ್ನಲ್ಲೆ ಪೊಲೀಸ್ ಬಂದೋಬಸ್ತ್ ಇನ್ನಷ್ಟು ಬಿಗಿಗೊಳಿಸಲಾಗಿದೆ. ನಗರದ ಎಲ್ಲೆಡೆಯೂ ಪೊಲೀಸರು ನಾಕಾಬಂದಿ ಹಾಕಿ, ಅನಗತ್ಯ ಓಡಾಡುವವರ ಮೇಲೆ ನಿಗಾ ಇಟ್ಟಿದ್ದಾರೆ.

ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾದ ಹಿನ್ನೆಲೆಯಲ್ಲಿ 19 ಗ್ರಾಮ ಪಂಚಾಯತ್‌ಗಳನ್ನು ವಿಶೇಷ ಕಂಟೋನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ.
ಈ ನಡುವೆ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಬಿಗಿಕ್ರಮ ಕೈಗೊಂಡಿದ್ದು, ಕಾರವಾರದಲ್ಲಿ ಎಲ್ಲೆಡೆಯೂ ಪೊಲೀಸ್ ನಾಕಾಬಂದಿ ಹಾಕಿ ಅನಾವಶ್ಯಕವಾಗಿ ರಸ್ತೆಗಿಳಿಯುವವರನ್ನ ತಡೆಯಲಾಗುತ್ತಿದೆ. ಪಾಸ್ ಇದ್ದವರಿಗೆ ಮತ್ತು ಮೆಡಿಕಲ್ ಸಿಬ್ಬಂದಿಗೆ ಮಾತ್ರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆದರೆ, ಕಳೆದ ಎರಡು ದಿನ ತೌಕ್ತೆ ಚಂಡಮಾರುತದಿಂದಾಗಿ ಗಾಳಿ ಸಹಿತ ಮಳೆಗೆ ಎಲ್ಲೆಡೆ ಸಾಕಷ್ಟು ಹಾನಿ ಸಂಭವಿಸಿದ್ದು, ವಿದ್ಯುತ್ ವ್ಯತ್ಯಯಗೊಂಡಿದೆ.
ಇದರಿಂದ ಮನೆಯಲ್ಲಿ ಏನು ಮಾಡಲಾಗದೆ ಕೆಲವರು ಹೋಟೆಲ್‌ಗಳತ್ತ ದಾವಿಸುತ್ತಿದ್ದು, ಪೊಲೀಸರಿಗೆ ತಮ್ಮ ಅಸಹಾಯಕತೆ ಹೇಳಿಕೊಳ್ಳುತ್ತಿದ್ದಾರೆ.
ಓದಿ: ಸಿಎಂಗೂ ತಟ್ಟಿದ ಅರೆಸ್ಟ್ ಟೂ ಮಿ ಅಭಿಯಾನ : ಮುಖ್ಯಮಂತ್ರಿ ನಿವಾಸ ಬಳಿ ರಾತ್ರೋರಾತ್ರಿ ಪೋಸ್ಟರ್ ಅಂಟಿಸಿ ಆಕ್ರೋಶ