ETV Bharat / state

ಉತ್ತರಕನ್ನಡ: ಕೆಸರು ಗದ್ದೆಯಂತಾದ ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳ ಪರದಾಟ! - ಪ್ರಾಥಮಿಕ ಶಾಲಾ ಕ್ರೀಡಾಕೂಟ

ಉತ್ತರಕನ್ನಡ ಜಿಲ್ಲೆಯ ಕಾರವಾರದ ಮಾಲಾದೇವಿ ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯಗಳಿಲ್ಲದೇ ಪರದಾಡಿದರು ಎಂದು ಪಾಲಕರು ಆರೋಪಿಸಿದ್ದಾರೆ.

stadium
ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳ ಪರದಾಟ
author img

By ETV Bharat Karnataka Team

Published : Oct 2, 2023, 2:21 PM IST

ಕೆಸರು ಗದ್ದೆಯಂತಾದ ಕ್ರೀಡಾಂಗಣ

ಕಾರವಾರ : ಒಂದೆಡೆ ಕೆಸರು ಗದ್ದೆಯಂತಾಗಿರುವ ಕ್ರೀಡಾಂಗಣ, ಇನ್ನೊಂದೆಡೆ ಅದೇ ಕ್ರೀಡಾಂಗಣದಲ್ಲಿ ಸೇರಿರುವ ನೂರಾರು ವಿದ್ಯಾರ್ಥಿಗಳು, ಮತ್ತೊಂದೆಡೆ ಅಲ್ಲಲ್ಲಿ ಜಾರಿ ಬೀಳುತ್ತಿರುವ ಸ್ಪರ್ಧಾಳುಗಳು. ಈ ಎಲ್ಲ ದೃಶ್ಯ ಕಂಡು ಬಂದಿದ್ದು, ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರದ ಮಾಲಾದೇವಿ ಮೈದಾನದಲ್ಲಿ.

ಹೌದು, ಕಾರವಾರದಲ್ಲಿ ಈವರೆಗೆ ಸುಸಜ್ಜಿತ ಕ್ರೀಡಾಂಗಣ ಇಲ್ಲದೇ ಇರುವುದರಿಂದ ಇರುವ ಸಣ್ಣ ಮೈದಾನದಲ್ಲಿಯೇ ಪ್ರತಿ ಬಾರಿ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಮಳೆಗಾಲದಲ್ಲಂತೂ ಕೆಸರುಗದ್ದೆಯಂತಾಗುವ ಈ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳು, ವಿದ್ಯಾರ್ಥಿಗಳು ಕಷ್ಟಪಟ್ಟು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರಕನ್ನಡ ಶೈಕ್ಷಣಿಕ ಜಿಲ್ಲಾ ಮಟ್ಟದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿನ ಅವ್ಯವಸ್ಥೆ ಕ್ರೀಡಾಪಟುಗಳಲ್ಲಿ ಆತಂಕ ಹೆಚ್ಚಿಸಿತು. ಜೊತೆಗೆ, ಮೈದಾನದಲ್ಲಿ ನೀರು ನಿಂತು ಕೆಸರುಗದ್ದೆಯಂತಾದ ಕಾರಣ ಪಾಲಕರು ಕೂಡ ಸರ್ಕಾರದ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದರು.

"ಮೈದಾನದಲ್ಲಿ ಆಡಲು ಬರುವ ಸ್ಪರ್ಧಾಳುಗಳಿಗೆ ಶೌಚಾಲಯದ ವ್ಯವಸ್ಥೆ ಇಲ್ಲ. ಅಲ್ಲದೇ, ವಿಶ್ರಾಂತಿ ಪಡೆಯುವ ಯಾವ ಸ್ಥಳವನ್ನೂ ನಿರ್ಮಿಸಿಲ್ಲ. ಅಕ್ಕಪಕ್ಕದ ಶಾಲೆಗಳಿಗೆ ಶೌಚಾಲಯಕ್ಕೆ ಹೋಗುವ ಪರಿಸ್ಥಿತಿ ಇದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಏನಾದರೂ ಹೆಚ್ಚು ಕಡಿಮೆ ಆದರೆ ಅವರ ಹೊಣೆ ಹೊತ್ತುಕೊಳ್ಳುವವರು ಯಾರು?, ಹವಾಮಾನ ಇಲಾಖೆ ಒಂದು ವಾರದ ಮುಂಚೆಯೇ ಆರೆಂಜ್​ ಅಲರ್ಟ್​ ನೀಡಿದ್ದರೂ ಸಹ ಇಲ್ಲಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ, ಮಕ್ಕಳಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಿಕೊಡಬೇಕೆಂದು ಸ್ಥಳೀಯರಾದ" ಅಕ್ಷಯ ನಾಯ್ಕ ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ದಾವಣಗೆರೆಯ ಜೆಜೆಎಂ ಕಾಲೇಜಿನಲ್ಲಿ ಮಾನ್ಸೂನ್ ಫಿಯೆಸ್ಟಾ : ಕೆಸರು ಗದ್ದೆಯಲ್ಲಿ ಆಟವಾಡಿ ಸಂತಸಪಟ್ಟ ಭಾವಿ ವೈದ್ಯರು

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಹಾಸ ರಾಯ್ಕರ್, " ಉತ್ತರಕನ್ನಡ ಜಿಲ್ಲೆಯ 5 ತಾಲೂಕುಗಳ 14 ವಯೋಮಿತಿಯೊಳಗಿನ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಇಲ್ಲೇ ಪಕ್ಕದಲ್ಲಿರುವ ಶಾಲೆಯಲ್ಲಿ ನೀರು ಮತ್ತು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ರಾತ್ರಿ ಸ್ವಲ್ಪ ಮಳೆಯಾದ ಕಾರಣ ಮೈದಾನದಲ್ಲಿ ನೀರು ನಿಂತಿದೆ, ಆದರೂ ಯಾವುದೆ ತೊಂದರೆಯಾಗಿಲ್ಲ" ಎಂದು ಹೇಳಿದರು.

ಇದನ್ನೂ ಓದಿ : ದುಬೈ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಧಾರವಾಡದ ಹಿರಿಯ : ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ

ಇನ್ನು ಕಳೆದ ಆಗಸ್ಟ್​ ತಿಂಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ವೈಲವಾಡ ಗ್ರಾಮ ಪಂಚಾಯತ್​ ವ್ಯಾಪ್ತಿಯ ಖಾರ್ಗಾ ಗ್ರಾಮದಲ್ಲಿ ಕೆಸರುಗದ್ದೆ ಕ್ರೀಡಾಕೂಟ ಆಯೋಜಿಸಲಾಗಿತ್ತು. ಇದರಲ್ಲಿ ಮಹಿಳೆಯರು, ಮಕ್ಕಳೆನ್ನದೇ ಎಲ್ಲರೂ ದಿನವಿಡೀ ಕೆಸರಿನಲ್ಲಿ ಸಾಮರ್ಥ್ಯ ಪ್ರದರ್ಶಿಸಿದ್ದರು. ಈ ಕ್ರೀಡೆಯನ್ನು ಖಾರ್ಗಾ ಗ್ರಾಮಸ್ಥರು ಮತ್ತು ಪತ್ರಿಕಾ ನಿರ್ವಹಣಾ ಸಮಿತಿ ಆಯೋಜಿಸಿತ್ತು.

ಇದನ್ನೂ ಓದಿ : ಕಾರವಾರ: ಕೆಸರಲ್ಲಿ ಓಟ, ಹಗ್ಗಜಗ್ಗಾಟ ; ಗ್ರಾಮೀಣ ಕ್ರೀಡಾ ಸೊಗಡಿನಲ್ಲಿ ಮಿಂದೆದ್ದ ಯುವಜನತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.