ಕಾರವಾರ : ಕುಮಟಾ ತಾಲೂಕಿನ ದಯಾ ನಿಲಯ ಬುದ್ಧಿಮಾಂದ್ಯ ಮಕ್ಕಳ ಶಾಲೆ(Dayanilaya specially abled children school)ಯ ಐವರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಕ್ರೀಡಾಕೂಟ (National level sports)ಕ್ಕೆ ಆಯ್ಕೆಯಾಗಿದ್ದಾರೆ.
ಮಂಗಳೂರಿನ ಮಂಗಳಾದೇವಿ ಕ್ರೀಡಾಂಗಣ (Mangaladevi stadium)ದಲ್ಲಿ ನ.14ರಂದು ರಾಜ್ಯಮಟ್ಟದ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಇದರಲ್ಲಿ ದಯಾನಿಲಯ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಟೇಬಲ್ ಟೆನ್ನಿಸ್ ವಿಭಾಗದಲ್ಲಿ ವಿಘ್ನೇಶ್ ನಾಯ್ಕ್, ಶಶಾಂಕ್ ಅಂಬಿಗ ಆಯ್ಕೆಯಾಗಿದ್ದಾರೆ. ಬಾಲಕೃಷ್ಣ ಕೋರ್ಗಾಂಕರ್ ಇವರಿಗೆ ತರಬೇತಿ ನೀಡಿದ್ದರು.
ಪವರ್ ಲಿಫ್ಟಿಂಗ್ ವಿಭಾಗದಲ್ಲಿ ನಂದನ್ ದೈವಜ್ಞ, ನೆಸ್ಟರ್ ರೋಡ್ರಿಗಿಸ್ ಆಯ್ಕೆಯಾಗಿದ್ದಾರೆ. ಇವರಿಗೆ ಅನಿಲ್ ನಾಯ್ಕ್ ತರಬೇತಿ ನೀಡಿದ್ದರು. ಸೈಕ್ಲಿಂಗ್ ವಿಭಾಗದಲ್ಲಿ ಆಯ್ಕೆಯಾದ ಶ್ರೀವತ್ಸ ಭಟ್ಗೆ ಪುರುಷೋತ್ತಮ್ ಗೋವಾಂಕರ್ ತರಬೇತಿ ನೀಡಿದ್ದರು.
ಓದಿ: ನೈಸರ್ಗಿಕ ಮಾದರಿಯಲ್ಲಿ ಕೆರೆ ನೀರು ಶುದ್ಧೀಕರಣ : ದೇಶದಲ್ಲೇ ಮೊದಲ ಪ್ರಯತ್ನ!