ಮೂಲಸೌಲಭ್ಯಕ್ಕಾಗಿ ಆಗ್ರಹ ... ಕೆಲ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಿದ ಜನ - ಮೂಲಭೂತ ಸೌಕರ್ಯ
14 ಲೋಕಸಭಾ ಕ್ಷೇತ್ರಗಳ ಪೈಕಿ ಇಂದು ಕೂಡ ಕೆಲವೆಡೆ ಮತದಾನ ಬಹಿಷ್ಕಾರ- ಹಕ್ಕು ಚಲಾವಣೆಯಿಂದ ದೂರ ಸರಿದು ಅಸಮಧಾನ ಹೊರಹಾಕಿದ ಮತದಾರ ಪ್ರಭುಗಳು- ಕಲಬುರಗಿ, ರಾಯಚೂರು, ಉತ್ತರ ಕನ್ನಡದ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಿದ ಜನ
ಕಲಬುರಗಿ/ರಾಯಚೂರು/ಉ. ಕನ್ನಡ: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ವೇಳೆ ಕೆಲವು ಗ್ರಾಮಗಳಲ್ಲಿ ಜನ ಮತದಾನ ಬಹಿಷ್ಕರಿಸಿದ್ದರು. ಇದೀಗ 2 ನೇ ಹಂತದಲ್ಲೂ ಜನಪ್ರತಿನಿಧಿಗಳ ಮೇಲಿನ ಅಸಮಾಧಾನ ಬಹಿರಂಗವಾಗಿದೆ. ಕೆಲವೆಡೆ ಜನರು ಮತದಾನಕ್ಕೆ ಹಿಂದೇಟು ಹಾಕಿದ್ದಾರೆ.
ಕಲಬುರಗಿಯಲ್ಲಿ ಮತದಾನ ಬಹಿಷ್ಕಾರ:
ಗ್ರಾಮ ಪಂಚಾಯತ್ ಕೇಂದ್ರ ಕಚೇರಿ ವರ್ಗಾವಣೆ ಹಿನ್ನೆಲೆ ಅಸಮಧಾನಗೊಂಡ ಗ್ರಾಮಸ್ಥರು ಮತದಾನದಿಂದ ದೂರು ಉಳಿದ ಘಟನೆ ಆಳಂದ ತಾಲೂಕಿನ ದೇಗಾಂವ್ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮತದಾನ ಕೇಂದ್ರ 120 ರಲ್ಲಿ ಬೆಳಗ್ಗೆ 7 ಗಂಟೆಯಿಂದ ಈವರೆಗೆ ಮತಗಟ್ಟೆಯತ್ತ ಯಾರೂ ಸುಳಿದಿಲ್ಲ. ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ದೇಗಾಂವ್ ಗ್ರಾಮದಲ್ಲಿ ಈ ಮುಂಚೆ ಇದ್ದ ಗ್ರಾಮ ಪಂಚಾಯತ್ ಕೇಂದ್ರ ಕಚೇರಿಯನ್ನು ಹಾಳತಡಕಲ್ ಗ್ರಾಮಕ್ಕೆ ವರ್ಗಾಯಿಸಿದ ಹಿನ್ನಲೆ ಗ್ರಾಮಸ್ಥರು ಅಸಮದಾನಗೊಂಡಿದ್ದಾರೆ. ನಾಲ್ಕು ದಿನಗಳಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಭರವಸೆ ಸಿಕ್ಕಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ರಾಯಚೂರು ಕ್ಷೇತ್ರದಲ್ಲೂ ಭುಗಿಲೆದ್ದ ಅಸಮಾಧಾನ:
ರಾಯಚೂರು ತಾಲೂಕಿನ ಯದ್ಲಾಪುರ ಗ್ರಾಮದಲ್ಲಿ ಕಳೆದ ಹಲವಾರು ವರ್ಷಗಳಿಂದ ಕುಡಿಯುವ ನೀರು, ಮದ್ಯಪಾನ ನಿಷೇಧಿಸಿಲ್ಲ ಹಾಗೂ ಮೂಲಭೂತ ಸೌಕರ್ಯ ಒದಗಿಸಿಲ್ಲವೆಂದು ಆರೋಪಿಸಿ ಗ್ರಾಮಸ್ಥರು ಮತದಾನ ಮಾಡುತ್ತಿಲ್ಲ. ಕಳೆದ ತಿಂಗಳು ಈ ಬಗ್ಗೆ ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಆದ್ರೆ ಈವರೆಗೆ ಯಾವುದೇ ಕೆಲಸವಾಗಿಲ್ಲವೆಂದು ಮತದಾನ ಬಹಿಷ್ಕರಿಸಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಉತ್ತರ ಕನ್ನಡದಲ್ಲೂ ಮತದಾನ ಬಹಿಷ್ಕಾರ :
ಮುಂಡಗೋಡದ ಕಂಚಿಕೊಪ್ಪ-ಅಟಬೈಲ್ ಮತಗಟ್ಟೆ ನಂ.165 ರಲ್ಲಿ ಇನ್ನೂ ಮತದಾನ ಪ್ರಾರಂಭವಾಗಿಲ್ಲ. ಅರಣ್ಯ ಅತಿಕ್ರಮಣದಾರರಿಗೆ ಹಕ್ಕುಪತ್ರ ನೀಡಿಲ್ಲವೆಂದು ಇಲ್ಲಿನ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದಾರೆ. ಮತಗಟ್ಟೆಯಲ್ಲಿ 417 ಮತದಾರರಿದ್ದು, ಒಬ್ಬರೂ ಸಹ ಮತ ಚಲಾವಣೆಗೆ ಬಂದಿಲ್ಲ. ಸ್ಥಳಕ್ಕೆ ತಹಶಿಲ್ದಾರ್ ಭೇಟಿ ನೀಡಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಜನ ಸ್ಪಂದಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಗ್ರಾಮ ಪಂಚಾಯತ್ ಕೇಂದ್ರ ಕಚೇರಿ ವರ್ಗಾವಣೆ ಹಿನ್ನೆಲೆ ಅಸಮದಾನಗೊಂಡ ಗ್ರಾಮಸ್ಥರು ಮತದಾನದಿಂದ ದೂರು ಉಳಿದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ದೇಗಾಂವ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮತದಾನ ಕೇಂದ್ರ 120 ರಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಕೇಂದ್ರದತ್ತ ಯಾವೋಬ್ಬ ಗ್ರಾಮಸ್ಥರು ಸುಳಿದಿಲ್ಲ. ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ದೇಗಾಂವ ಗ್ರಾಮದಲ್ಲಿ ಈ ಮುಂಚೆ ಇದ್ದ ಗ್ರಾಮ ಪಂಚಾಯತ್ ಕೇಂದ್ರ ಕಚೇರಿಯನ್ನು ಹಾಳತಡಕಲ್ ಗ್ರಾಮಕ್ಕೆ ವರ್ಗಾಯಿಸಿದ ಹಿನ್ನಲೆ ಗ್ರಾಮಸ್ಥರು ಅಸಮದಾನಗೊಂಡಿದ್ದಾರೆ. ಹತ್ತು ಗಂಟೆಯಾದರೂ ಇಲ್ಲಿವರೆಗೆ ಒಂದೇ ಒಂದು ಮತ ಸಹ ಚಲಾಯಿಸದೆ ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ. ನಾಲ್ಕು ದಿನಗಳಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಗ್ರಾಮಸ್ಥರ ಮನವೊಲಿಸುವ ಕೆಲಸ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮತದಾನ ಆರಂಭಗೊಂಡು ಮೂರು ಗಂಟೆಯಾದರೂ ಹಿರಿಯ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಬಂದಿಲ್ಲ ಎನ್ನಲಾಗಿದೆ.Body:ಕಲಬುರಗಿ ಬ್ರೇಕಿಂಗ್
ಗ್ರಾಮ ಪಂಚಾಯತ್ ಕೇಂದ್ರ ಕಚೇರಿ ವರ್ಗಾವಣೆ ಹಿನ್ನೆಲೆ ಅಸಮದಾನಗೊಂಡ ಗ್ರಾಮಸ್ಥರು ಮತದಾನದಿಂದ ದೂರು ಉಳಿದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ದೇಗಾಂವ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮತದಾನ ಕೇಂದ್ರ 120 ರಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ಕೇಂದ್ರದತ್ತ ಯಾವೋಬ್ಬ ಗ್ರಾಮಸ್ಥರು ಸುಳಿದಿಲ್ಲ. ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ದೇಗಾಂವ ಗ್ರಾಮದಲ್ಲಿ ಈ ಮುಂಚೆ ಇದ್ದ ಗ್ರಾಮ ಪಂಚಾಯತ್ ಕೇಂದ್ರ ಕಚೇರಿಯನ್ನು ಹಾಳತಡಕಲ್ ಗ್ರಾಮಕ್ಕೆ ವರ್ಗಾಯಿಸಿದ ಹಿನ್ನಲೆ ಗ್ರಾಮಸ್ಥರು ಅಸಮದಾನಗೊಂಡಿದ್ದಾರೆ. ಹತ್ತು ಗಂಟೆಯಾದರೂ ಇಲ್ಲಿವರೆಗೆ ಒಂದೇ ಒಂದು ಮತ ಸಹ ಚಲಾಯಿಸದೆ ತಮ್ಮ ಹಕ್ಕಿನಿಂದ ವಂಚಿತರಾಗಿದ್ದಾರೆ. ನಾಲ್ಕು ದಿನಗಳಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಗ್ರಾಮಸ್ಥರ ಮನವೊಲಿಸುವ ಕೆಲಸ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮತದಾನ ಆರಂಭಗೊಂಡು ಮೂರು ಗಂಟೆಯಾದರೂ ಹಿರಿಯ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಬಂದಿಲ್ಲ ಎನ್ನಲಾಗಿದೆ.Conclusion: