ETV Bharat / state

ಕೊರೊನಾ ಜಾಗೃತಿಗೆ ‘ಮಾಸ್ಕ್ ಬಳಸಿ ಜೀವ ಉಳಿಸಿ’ ಅಭಿಯಾನ ಆರಂಭಿಸಿದ ಪೊಲೀಸ್ ಇಲಾಖೆ - ‘ಮಾಸ್ಕ್ ಬಳಸಿ ಜೀವ ಉಳಿಸಿ ಅಭಿಯಾನ

ಶಿರಸಿಯ ಭಾಗದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ ಜನರಲ್ಲಿ ಅರಿವು ಮೂಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಇದಕ್ಕಾಗಿ ನಗರದಲ್ಲಿ ಜಾಥಾ ನಡೆಸಿ ಉಚಿತವಾಗಿ ಮಾಸ್ಕ್​ ವಿತರಿಸಲಾಯಿತು.

Sirasi police started new campaign towards corona awareness
ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪೊಲೀಸರು
author img

By

Published : Oct 22, 2020, 7:50 PM IST

ಶಿರಸಿ (ಉ.ಕ): ಕೊರೊನಾ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆ ವತಿಯಿಂದ ಗುರುವಾರ ಸಂಜೆ ನಗರದಲ್ಲಿ ‘ಮಾಸ್ಕ್ ಬಳಸಿ ಜೀವ ಉಳಿಸಿ’ ಎಂಬ ಅಭಿಯಾನದೊಂದಿಗೆ ಮೆರವಣಿಗೆ ನಡೆಸಲಾಯಿತು.

ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಪೊಲೀಸರು

ನಗರದ ಅಶ್ವಿನಿ ವೃತ್ತದಿಂದ ಮೆರವಣಿಗೆ ಆರಂಭವಾಗಿ, ವಾಹನಗಳಿಗೆ ಸ್ಟಿಕರ್ ಅಂಟಿಸಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲಾಯಿತು. ನಗರದ ಹೊಸಪೇಟೆ ರಸ್ತೆ, ದೇವಿಕೆರೆ ಮತ್ತಿತರ ಕಡೆ ಸಂಚರಿಸಿ ಮಾಸ್ಕ್ ಬಳಕೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.

ಡಿಎಸ್​​​​ಪಿ ಗೋಪಾಲಕೃಷ್ಣ ನಾಯಕ, ಸಿಪಿಐ ಪ್ರದೀಪ ಬಿ.ಯು ಮೆರವಣಿಗೆಗೆ ಚಾಲನೆ ನೀಡಿದರು‌. ಈ ವೇಳೆ ಮಾರುಕಟ್ಟೆ ಠಾಣೆ ಪಿಎಸ್ಐ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.