ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಯಲ್ಲಾಪುರ ತಾಲೂಕಿನ ಕಾರಕುಂಡಿ ಗ್ರಾಮ ದ್ವೀಪದಂತಾಗಿದ್ದು, ಗ್ರಾಮದಲ್ಲಿ ಸಿಲುಕಿಕೊಂಡಿರುವ 6 ಮಂದಿ ಅಪಾಯದಲ್ಲಿದ್ದಾರೆ.
ಹಳಿಯಾಳದ ಬೊಮ್ಮನಳ್ಳಿ ಜಲಾಶಯದಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ, ಜಲಾಶಯದಿಂದ ನೀರು ಬಿಟ್ಟ ಪರಿಣಾಮ ಯಲ್ಲಾಪುರದ ಕಾರಗುಂಡಿ ಗ್ರಾಮ ದ್ವೀಪವಾಗಿದೆ. ಗ್ರಾಮದ 80 ಜನರನ್ನು ಕಿರವತ್ತಿ ಪರಿಹಾರ ಕೇಂದ್ರಕ್ಕೆ ಸಾಗಿಸಿದ್ದು, ಕೇಂದ್ರಕ್ಕೆ ಬಾರದೇ ಉಳಿದ 6 ಮಂದಿ ಈಗ ಅಪಾಯದಲ್ಲಿದ್ದಾರೆ.
6 ಮಂದಿಯನ್ನು ರಕ್ಷಿಸಲು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡಿದ್ದು, ಕರಾವಳಿ ಮೀಸಲು ಪಡೆಗೆ ಬುಲಾವ್ ನೀಡಲಾಗಿದೆ. ಇಂದು ಮೀಸಲು ಪಡೆ ಕಾರ್ಯಾಚರಣೆ ನಡೆಸಲಿದ್ದು, 6 ಮಂದಿಯ ಜೀವಕ್ಕೆ ಅಪಾಯವಿರುವ ಕಾರಣ ತಾಲೂಕು ಆಡಳಿತದ ಅಧಿಕಾರಿಗಳು ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದಾರೆ.