ಕಾರವಾರ : ಇರಾಕ್ನಿಂದ ಕಾರವಾರ ವಾಣಿಜ್ಯ ಬಂದರಿಗೆ ಆಗಮಿಸಿದ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸಲಾಯಿತು.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈಗಾಗಲೇ ವಿದೇಶದಿಂದ ಆಗಮಿಸುವ ಎಲ್ಲ ಹಡಗುಗಳಲ್ಲಿನ ಸಿಬ್ಬಂದಿಯನ್ನು ತಪಾಸಣೆ ನಡೆಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಆರೋಗ್ಯಾಧಿಕಾಗಳು ಬಂದರಿಗೆ ಆಗಮಿಸಿದ ಹಡಗಿನ ಸಿಬ್ಬಂದಿಗೆ ಕೊರೊನಾ ತಪಾಸಣೆ ನಡೆಸಿದರು.
ಎಮ್ಟಿಬಿಟುಮಿನ್ ಪ್ರಿನ್ಸೆಸ್ ಹೆಸರಿನ ಹಡಗು ಇರಾಕ್ನಿಂದ ಆಗಮಿಸಿದ್ದು, ಹಡಗಿನಲ್ಲಿದ್ದ 16 ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಿದ್ದಾರೆ. ಆದರೆ, ಯಾವುದೇ ಸೊಂಕು ಕಂಡು ಬಂದಿಲ್ಲ ಎನ್ನಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಸಿಬ್ಬಂದಿಗೆ ಹಡಗಿನಿಂದ ಕೆಳಗಿಳಿಯದಂತೆ ಸೂಚನೆ ಕೂಡ ನೀಡಲಾಗಿದೆ.