ETV Bharat / state

ಬಾಲಕನ ಮೇಲೆ ಲೈಂಗಿಕ‌ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ - ETv Bharat kannada news

ಬಾಲಕನ ಮೇಲೆ ಲೈಂಗಿಕ‌ ದೌರ್ಜನ್ಯ ಎಸಗಿದ ವ್ಯಕ್ತಿಗೆ 1 ಲಕ್ಷ ರೂ. ದಂಡ ಮತ್ತು 20 ವರ್ಷ ಕಠಿಣ ಶಿಕ್ಷೆಯನ್ನು ಇಲ್ಲಿನ ನ್ಯಾಯಾಲಯ ವಿಧಿಸಿದೆ.

Accused of sexually assaulting minor boy sentenced to 20 years in prison
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ‌ ದೌರ್ಜನ್ಯ ವೆಸಗಿದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ
author img

By

Published : Nov 30, 2022, 2:25 PM IST

ಕಾರವಾರ: ಬಾಲಕನ ಮೇಲೆ ಲೈಂಗಿಕ‌ ದೌರ್ಜನ್ಯವೆಸಗಿದ ಅಪರಾಧಿಗೆ ಜಿಲ್ಲಾ ಸತ್ರ ನ್ಯಾಯಾಲಯವು 20 ವರ್ಷ ಕಠಿಣ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಪಟ್ಟಣದ ವನ್ನಳ್ಳಿಯ ಅನ್ಸಾರಿ ಖಾಸಿಂ ಜಿಂಗ್ರೊ ಎಂಬಾತ ಶಿಕ್ಷೆಗೆ ಒಳಗಾಗಿದ್ದಾನೆ.

ಈತ 2022 ರ ಮಾ.15 ರಂದು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ 6 ವರ್ಷದ ಬಾಲಕನನ್ನು ಚಾಕೊಲೆಟ್ ನೀಡುವುದಾಗಿ ಪುಸಲಾಯಿಸಿ ನಿರ್ಜನ‌ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ನಡೆಸಿದ್ದನು. ಈ ಸಂಬಂಧ ನೊಂದ‌ ಬಾಲಕನ ಪೋಷಕರು ಮಾ.‌16 ರಂದು ಆರೋಪಿ ವಿರುದ್ದ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪ‌ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಬಾಲಾಪರಾಧಿ ಗೃಹದಲ್ಲಿ ದುಷ್ಕೃತ್ಯ: ಇಬ್ಬರು ಹುಡುಗರ ಮೇಲೆ ಲೈಂಗಿಕ ದೌರ್ಜನ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.