ETV Bharat / state

ಪ್ರವಾಸಿಗರ ಸೆಳೆಯಲು ಕಾರವಾರ ಕಡಲ ತೀರಕ್ಕೆ ಬರಲಿದೆ ‘ಟುಪೋಲೆವ್’ ಯುದ್ಧ ವಿಮಾನ - ವಾರ್‌ಶಿಪ್ ಮ್ಯೂಸಿಯಂ

ವೈಝಾಗ್‌ನಲ್ಲಿ ನಿವೃತ್ತಿಯಾಗಿರುವ 4 ಯುದ್ಧ ವಿಮಾನಗಳಲ್ಲಿ ಟುಪೋಲೆವ್ 142M ಯುದ್ಧ ವಿಮಾನವನ್ನು ಕಾರವಾರದ ಕಡಲ ತೀರಲ್ಲಿ ವಸ್ತುಸಂಗ್ರಹಾಲಯ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷವೇ ಬರಬೇಕಿದ್ದ ಯುದ್ಧ ವಿಮಾನ ತಡವಾಗಿ ಆಗಮಿಸುತ್ತಿದ್ದು, ಇದೇ ಮಾರ್ಚ್ ಅಂತ್ಯದ ವೇಳೆಗೆ ಟ್ಯಾಗೋರ್ ಕಡಲ ತೀರದಲ್ಲಿ ಟುಪೋಲೆವ್ ಸ್ಥಾಪನೆಯಾಗಲಿದೆ.

retired-tupolev-war-flight-will-came-tp-karwar-beach-shortly
ಪ್ರವಾಸಿಗರ ಸೆಳೆಯಲು ಕಾರವಾರ ಕಡಲತೀರಕ್ಕೆ ಬರಲಿದೆ ನಿವೃತ್ತ ‘ಟುಪೋಲೆವ್’ ಯುದ್ಧವಿಮಾನ
author img

By

Published : Jan 20, 2021, 8:48 PM IST

ಕಾರವಾರ (ಉತ್ತರ ಕನ್ನಡ): ಕರಾವಳಿ ನಗರಿ ಕಾರವಾರ ವಿಶಾಲವಾದ ಕಡಲ ತೀರದಿಂದಲೇ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅಲ್ಲದೇ ಬೀಚ್‌ಗೆ ಹೊಂದಿಕೊಂಡಿರುವ ವಾರ್‌ಶಿಪ್ ಮ್ಯೂಸಿಯಂ, ರಾಕ್ ‌ಗಾರ್ಡನ್, ಅಕ್ವೇರಿಯಂ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಇದೀಗ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕಡಲ ತೀರಕ್ಕೆ ಹೊಸದೊಂದು ಆಕರ್ಷಣೆ ಸೇರ್ಪಡೆಯಾಗುತ್ತಿದೆ.

ಇನ್ಮುಂದೆ ಕಾರವಾರಕ್ಕೆ ಆಗಮಿಸುವ ಪ್ರವಾಸಿಗರನ್ನು ಇನ್ನಷ್ಟು ಆಕರ್ಷಿಸುವ ಜೊತೆಗೆ ನೌಕಾನೆಲೆಯ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಒದಗಿಸಲು ಯುದ್ಧ ವಿಮಾನ ಸಂಗ್ರಹಾಲಯವೊಂದು ಕಡಲ ತೀರದಲ್ಲಿ ತಲೆ ಎತ್ತಲಿದೆ. 2019ರ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದಿದ ಟುಪೋಲೆವ್ 142M ಯುದ್ಧ ವಿಮಾನವನ್ನು ಟ್ಯಾಗೋರ್ ಕಡಲ ತೀರಕ್ಕೆ ತಂದು ಯುದ್ಧ ವಿಮಾನ ವಸ್ತುಸಂಗ್ರಹಾಲಯವಾಗಿ ಮಾರ್ಪಡಿಸಲು ನೌಕಾನೆಲೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಪ್ರವಾಸಿಗರ ಸೆಳೆಯಲು ಕಾರವಾರ ಕಡಲ ತೀರಕ್ಕೆ ಬರಲಿದೆ ನಿವೃತ್ತ ‘ಟುಪೋಲೆವ್’ ಯುದ್ಧ ವಿಮಾನ

ಈಗಾಗಲೇ ವೈಜಾಗ್‌ನಲ್ಲಿ ನಿವೃತ್ತಿಯಾಗಿರುವ 4 ಯುದ್ಧ ವಿಮಾನಗಳಲ್ಲಿ ಟುಪೋಲೆವ್ 142M ಯುದ್ಧ ವಿಮಾನವನ್ನು ಕಾರವಾರದ ಕಡಲ ತೀರಲ್ಲಿ ವಸ್ತುಸಂಗ್ರಹಾಲಯ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷವೇ ಬರಬೇಕಿದ್ದ ಯುದ್ಧ ವಿಮಾನ ತಡವಾಗಿ ಆಗಮಿಸುತ್ತಿದ್ದು, ಇದೇ ಮಾರ್ಚ್ ಅಂತ್ಯದ ವೇಳೆಗೆ ಟ್ಯಾಗೋರ್ ಕಡಲ ತೀರದಲ್ಲಿ ಟುಪೋಲೆವ್ ಸ್ಥಾಪನೆಯಾಗಲಿದೆ.

ಕಾರವಾರ ಕಡಲ ತೀರದಲ್ಲಿರುವ ವಾರ್‌ಶಿಪ್ ಮ್ಯೂಸಿಯಂ ರಾಜ್ಯದಲ್ಲೇ ಏಕೈಕ ಯುದ್ಧನೌಕೆ ವಸ್ತುಸಂಗ್ರಹಾಲಯವಾಗಿದೆ. ಚಾಪೆಲ್ ಮ್ಯೂಸಿಯಂಗೆ ಭೇಟಿ ನೀಡುವ ಪ್ರವಾಸಿಗರು ಭಾರತೀಯ ನೌಕಾನೆಲೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಳ್ಳುವುದರ ಜೊತೆಗೆ ಯುದ್ಧ ನೌಕೆಯನ್ನು ಹತ್ತಿರದಿಂದಲೇ ವೀಕ್ಷಿಸಲು ಅವಕಾಶ ಸಿಗುತ್ತಿದೆ.

ಪ್ರತಿವರ್ಷ ಕಡಲ ತೀರಕ್ಕೆ ಭೇಟಿ ನೀಡುವ ಪ್ರವಾಸಿಗರ ಪೈಕಿ ಸಾವಿರಾರು ಮಂದಿ ಯುದ್ಧನೌಕೆ ಸಂಗ್ರಹಾಲಯವನ್ನು ವೀಕ್ಷಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಯುದ್ಧ ವಿಮಾನ ಸಂಗ್ರಹಾಲಯವೂ ಕಾರವಾರ ಕಡಲ ತೀರದಲ್ಲಿ ಸ್ಥಾಪನೆಯಾದಲ್ಲಿ ಟ್ಯಾಗೋರ್ ಬೀಚ್‌ಗೆ ಇನ್ನಷ್ಟು ಮೆರುಗು ನೀಡಲಿದೆ.

ಇದನ್ನೂ ಓದಿ: ಕದಂಬ ನೌಕಾನೆಲೆಗೆ ಆಗಮಿಸಿದ ಸಂಸದೀಯ ರಕ್ಷಣಾ ಸ್ಥಾಯಿ ಸಮಿತಿ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.