ಭಟ್ಕಳ: ಮಡಗಾಂವ್ ಟೂ ಮಂಗಳೂರು ತೆರಳುತ್ತಿದ್ದ ಡೆಮೋ ರೈಲಿನಲ್ಲಿ ಪತ್ತೆಯಾದ ಮದ್ಯದ ಚೀಲವನ್ನು ರೈಲ್ವೆ ಪೊಲೀಸರು ವಶಕ್ಕೆ ಪಡೆದು ಅಬಕಾರಿ ಇಲಾಖೆಗೆ ಒಪ್ಪಿಸಿದ್ದಾರೆ.
ರೈಲು ಮುರುಡೇಶ್ವರಕ್ಕೆ ಆಗಮಿಸುತ್ತಿದ್ದಂತೆ ಆರ್‍ಪಿಎಫ್‍ನ ಎಸ್‍ಐ ಶಿಶ್ಪಾಲ ಸಿಂಗ್ ಮತ್ತು ಕಾನಸ್ಟೆಬಲ್ ಹೆರಂಬ ನಾಯ್ಕ ಅವರಿಗೆ ಮದ್ಯದ ಚೀಲ ದೊರೆತಿದೆ.
ಅದರಲ್ಲಿ ಗೋವಾದ ₹ 7776 ಮೌಲ್ಯದ ಮದ್ಯವನ್ನ ಅಬಕಾರಿ ಇಲಾಖೆಗೆ ಒಪ್ಪಿಸಲಾಗಿದೆ.