ETV Bharat / state

ದೂದ್ ಸಾಗರ್​ನಲ್ಲಿ ಅಡ್ಡಾದಿಡ್ಡಿ ಓಡಾಡಿದ್ರೆ ಉಠಾ ಬಸ್ಕಿ: ರೈಲ್ವೆ ಇಲಾಖೆಯಿಂದ ಎಚ್ಚರಿಕೆ - ಪ್ರವಾಸಿಗರಿಗೆ ಉಠಾ ಬಸ್ಕಿ ಹೊಡಸಿ ಶಿಕ್ಷೆ

ರೈಲಿನ ಬೋಗಿಯೊಳಗಿನಿಂದಲೇ ಪ್ರವಾಸಿಗರು ದೂದ್​ ಸಾಗರ್ ಸೌಂದರ್ಯವನ್ನು ವೀಕ್ಷಿಸುವಂತೆ ನೈಋತ್ಯ ರೈಲ್ವೆಯು ಮನವಿ ಮಾಡಿದೆ.

ಕಾರವಾರ
ಕಾರವಾರ
author img

By

Published : Jul 16, 2023, 8:29 PM IST

Updated : Jul 16, 2023, 8:48 PM IST

ಉಠಾ ಬಸ್ಕಿ ಹೊಡೆಸಿ ಶಿಕ್ಷೆ

ಕಾರವಾರ: ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಪ್ರಸಿದ್ಧ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅದರಲ್ಲಿಯೂ ಈಗ ಮಳೆ ಬರುತ್ತಿರುವುದರಿಂದ ಅದರ ಸೊಬಗು ಮತ್ತಷ್ಟು ಹೆಚ್ಚಾಗಿದೆ. ಆದರೆ ಪ್ರವಾಸಕ್ಕೆಂದು ಬರುವ ಜನರು ಅಲ್ಲಿ ಮೋಜು ಮಸ್ತಿ ಮಾಡಿ ಪ್ರಕೃತಿಯನ್ನು ಹಾಳು ಮಾಡುವುದರಲ್ಲಿ ಹಿಂಜರಿಯುವುದಿಲ್ಲ. ಹೀಗಾಗಿ ಈ ಸಂಭ್ರಮಕ್ಕೆ ಕಡಿವಾಣ ಬೀಳಲಿದೆ. ಇನ್ಮುಂದೆ ಪ್ರವಾಸಿಗರು ದೂದ್ ಸಾಗರ್​ನಲ್ಲಿ ಅಡ್ಡಾದಿಡ್ಡಿ ಓಡಾಡುವಂತಿಲ್ಲ. ಈ ಬಗ್ಗೆ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.

ನೈಋತ್ಯ ರೈಲ್ವೆಯು, ದೂದ್ ಸಾಗರ್‌ನ ಸೌಂದರ್ಯವನ್ನು ರೈಲಿನ ಬೋಗಿ ಒಳಗಿನಿಂದ ಮಾತ್ರವೇ ವೀಕ್ಷಿಸುವಂತೆ ಪ್ರಯಾಣಿಕರಿಗೆ ಸೂಚಿಸಿದೆ. ಗೋವಾ ಕರ್ನಾಟಕ ಗಡಿ ಭಾಗದಲ್ಲಿರುವ ದೂದ್ ಸಾಗರ್ ವೀಕ್ಷಿಸಲು ಪ್ರವಾಸಿಗರು ಬರುವುದು ಸಾಮಾನ್ಯ. ಇಲ್ಲಿ ರೈಲು ನಿಲುಗಡೆ ಇಲ್ಲದ ಕಾರಣ ಸಾಕಷ್ಟು ಪ್ರವಾಸಿಗರು ಹಳಿಗಳ ಮೇಲೆಯೇ ನಡೆದು ಬರುತ್ತಾರೆ. ಈ ಭಾಗದಲ್ಲಿ ಸಂಚರಿಸುವ ಗೂಡ್ಸ್ ರೈಲುಗಳನ್ನು ಹತ್ತಿ, ದೂಧ್‌ಸಾಗರ್ ಬಳಿ ಇಳಿಯವವರಿದ್ದಾರೆ. ಈ ರೀತಿಯ ದುಸ್ಸಾಹಸವನ್ನು ಮಾಡದಂತೆ ರೈಲ್ವೆ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ: ದೂಧ್​ ಸಾಗರ್​ ನೀರಿನ ಮಟ್ಟ ಹೆಚ್ಚಳ: ಕುಸಿದ ಕೇಬಲ್ ಸೇತುವೆ - 40ಕ್ಕೂ ಹೆಚ್ಚು ಪ್ರವಾಸಿಗರ ರಕ್ಷಣೆ

ಸ್ವಂತ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ: ಸೌತ್ ವೆಸ್ಟರ್ನ್ ರೈಲ್ವೆ ಖಾತೆಯಿಂದ ಟ್ವಿಟ್ ಮಾಡಿ, ದೂದ್​ಸಾಗರ ಸೌಂದರ್ಯವನ್ನು ರೈಲ್ವೆ ಬೋಗಿಯಿಂದಲೇ ನೋಡಿ ಆನಂದಿಸಿ. ಹಳಿಗಳ ಮೇಲೆ, ಹಾದಿಯಲ್ಲಿ ನಡೆಯುವುದು ನಿಮ್ಮ ಸ್ವಂತ ಸುರಕ್ಷತೆಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಅಲ್ಲದೆ ಇದು ರೈಲ್ವೆ ಕಾಯಿದೆಯ ಸೆಕ್ಷನ್ 147, 159 ರ ಅಡಿಯಲ್ಲಿ ಅಪರಾಧವಾಗಿದೆ. ಇದು ರೈಲುಗಳ ಸುರಕ್ಷತೆಗೂ ಅಪಾಯ ತಂದೊಡ್ಡುವ ಸಾಧ್ಯತೆಗಳಿರುವುದರಿಂದ ರೈಲಿನಿಂದಲೇ ಸೌಂದರ್ಯ ಸವಿಯುವಂತೆ ತಿಳಿಸಿದೆ.

  • De-boarding at Dudhsagar or any other station along the Braganza Ghat is prohibited. All passengers are requested to co-operate & follow rules laid down for your own safety. (2/2)

    — South Western Railway (@SWRRLY) July 16, 2023 " class="align-text-top noRightClick twitterSection" data=" ">

ನಿಲ್ದಾಣದಲ್ಲಿ ರೈಲಿನಿಂದ ಇಳಿಯುವುದು ನಿಷೇಧ: ದೂದ್ ಸಾಗರ್ ಬಳಿ ಅಥವಾ ಬ್ರಗಾಂಜಾ ಗೇಟ್‌ನಿಂದ ಯಾವುದೇ ನಿಲ್ದಾಣದಲ್ಲಿ ರೈಲಿನಿಂದ ಇಳಿಯುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಪ್ರಯಾಣಿಕರು ಸಹಕರಿಸಬೇಕು ಮತ್ತು ನಿಮ್ಮ ಸುರಕ್ಷತೆಗಾಗಿ ರೂಪಿಸಿರುವ ನಿಯಮಗಳನ್ನು ಪಾಲಿಸಬೇಕು ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: ಹಳಿ ತಪ್ಪಿದ ರೈಲು... ಪ್ರಯಾಣಿಕರಿಗೆ ಸಿಕ್ತು 'ದೂಧ್​ ಸಾಗರ್' ಕಣ್ತುಂಬಿಕೊಳ್ಳುವ ಭಾಗ್ಯ!

ಪ್ರವಾಸಿಗರಿಗೆ ಉಠಾ ಬಸ್ಕಿ ಹೊಡೆಸಿ ಶಿಕ್ಷೆ: ನಿಷೇಧದ ನಡುವೆಯೂ ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಪ್ರಸಿದ್ಧ ದೂದ್ ಸಾಗರ್ ಜಲಪಾತ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಟ್ರೆಕ್ಕಿಂಗ್​ಗೆ ತೆರಳಿದ್ದ ಯುವಕರನ್ನು ತಡೆದ ರೈಲ್ವೇ ಹಾಗೂ ಗೋವಾದ 50ಕ್ಕೂ ಹೆಚ್ಚು ಪೊಲೀಸರು ಉಠಾ ಬಸ್ಕಿ ಹೊಡೆಸಿ ಶಿಕ್ಷೆ ನೀಡಿದ ಘಟನೆ ಭಾನುವಾರ ನಡೆದಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದೆ. ಬಳಿಕ ಜಲಪಾತ ವೀಕ್ಷಣೆಗೆ ಅವಕಾಶ ನೀಡದೆ ಎಲ್ಲರನ್ನು ಟ್ರೇನ್ ಒಂದಕ್ಕೆ ಹತ್ತಿಸಿ ಕಳುಹಿಸಿದ್ದಾರೆ.

ಇದನ್ನೂ ಓದಿ: ದೂದ್‌ಸಾಗರ್ ವೀಕ್ಷಿಸಲು ತೆರಳಿದ ಯುವಕರ ಸಮಯಪ್ರಜ್ಞೆಯಿಂದ ತಪ್ಪಿತು ರೈಲು ಅಪಘಾತ

Last Updated : Jul 16, 2023, 8:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.