ಭಟ್ಕಳ : ತಾಲೂಕಿನ ಪುರವರ್ಗದ ಸ್ಮಶಾನಕ್ಕೆ ಮೂಲಸೌಕರ್ಯ ಕಲ್ಪಿಸಿಕೊಡುವಂತೆ ಗ್ರಾಮದ ಸಾರ್ವಜನಿಕರು ಶಾಸಕ ಸುನೀಲ್ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ತಮ್ಮ ಗ್ರಾಮದ ಸ್ಮಶಾನದಲ್ಲಿ ಯಾವುದೇ ಮೂಲಸೌಕರ್ಯವಿಲ್ಲದೇ ತುಂಬಾ ತೊಂದರೆಯಾಗುತ್ತಿದೆ. ನೀರು, ವಿದ್ಯುತ್ ಹಾಗೂ ಮಳೆಗಾಲದ ತೊಂದರೆ ತಪ್ಪಿಸಲು ತಗಡಿನ ಮೇಲ್ಛಾವಣಿ ನಿರ್ಮಾಣ ಹಾಗೂ ಸುತ್ತಲೂ ಸ್ಟ್ರೆಚರ್ ಶವದಡಿಯ ಕಬ್ಬಿಣದ ಪಟ್ಟಿಯಂತೆ ವ್ಯವಸ್ಥೆಗಳು ತುರ್ತು ಅಗತ್ಯವಿದೆ. ಅಗತ್ಯ ಮೂಲಸೌಕರ್ಯವನ್ನು ಊರಿನ ಸ್ಮಶಾನಕ್ಕೆ ಕಲ್ಪಿಸಿ ಕೊಡಬೇಕೆಂದು ಪುರವರ್ಗ ಸಾರ್ವಜನಿಕರು ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಾದೇವ ನಾಯ್ಕ, ರಮೇಶ ನಾಯ್ಕ, ಮಂಜುನಾಥ ನಾಯ್ಕ,ದೇವಯ್ಯ ನಾಯ್ಕ, ದುರ್ಗಪ್ಪ ನಾಯ್ಕ, ಪ್ರಕಾಶ್ ನಾಯ್ಕ, ಉದಯ ನಾಯ್ಕ, ದುರ್ಗಪ್ಪ ನಾಯ್ಕ, ಮಂಜುನಾಥ ನಾಯ್ಕ, ರಾಮ ನಾಯ್ಕ, ಚಂದ್ರಕಾಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.