ಕಾರವಾರ: ಗಂಧದಗುಡಿ ಚಿತ್ರ ಪ್ರದರ್ಶನ ಮಾಡದಿರುವುದಕ್ಕೆ ಥಿಯೇಟರ್ ವಿರುದ್ಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಗರದ ಅರ್ಜುನ ಚಿತ್ರಮಂದಿರದ ಎದುರು ನಡೆಯಿತು.
ಥಿಯೇಟರ್ ಬಳಿ ಗಂಧದಗುಡಿ ಚಿತ್ರದ ಒಂದೇ ಒಂದು ಪೋಸ್ಟರ್ ಸಹ ಅಂಟಿಸದ್ದಕ್ಕೆ ಚಿತ್ರಮಂದಿರದ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಕಾರ್ಯಕರ್ತರು, ಥಿಯೇಟರ್ ಎದುರು ಇಡಲಾಗಿದ್ದ ಹಿಂದಿ ಪೋಸ್ಟರ್ ತೆರವುಗೊಳಿಸಲು ಒತ್ತಾಯಿಸಿದರು. ಕೊನೆಗೆ ಹಿಂದಿ ಸಿನಿಮಾದ ಪೋಸ್ಟರ್ ಅನ್ನು ಥಿಯೇಟರ್ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಬಳಿಕ ಥಿಯೇಟರ್ ಸಿಬ್ಬಂದಿ ವ್ಯವಸ್ಥಾಪಕ ನಾಳೆಯಿಂದ ಗಂಧದಗುಡಿ ಸಿನಿಮಾ ಪ್ರದರ್ಶಿಸುವುದಾಗಿ ಭರವಸೆ ನೀಡಿದ್ದಾರೆ. ಅಭಿಮಾನಿಗಳ ಆಗ್ರಹದ ಮೇರೆಗೆ ಎರಡು ಶೋ ಪ್ರದರ್ಶಿಸಲು ಒಪ್ಪಿದ್ದಾರೆ.
ಇದನ್ನೂ ಓದಿ: ನಾಳೆ ಪುನೀತ್ ಪುಣ್ಯ ಸ್ಮರಣೆಗೆ ಸಿದ್ಧತೆ: ಕಂಠೀರವ ಸ್ಟುಡಿಯೋದಲ್ಲಿ 24 ಗಂಟೆ ಗೀತ ನಮನ