ಶಿರಸಿ: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದ ತನಿಖೆ ಇದೀಗ ಉತ್ತರ ಕನ್ನಡ ಜಿಲ್ಲೆಯವರೆಗೆ ಬಂದಿದೆ. ಜಿಲ್ಲೆಯ ಸಿದ್ದಾಪುರ ತಾಲೂಕಿನ ಹೇರೂರು ನಿವಾಸಿ ಗಣಪತಿ ಬಿ. ಭಟ್ ಅವರನ್ನು ಬಂಧಿಸಲಾಗಿದೆ. ನೇಮಕಾತಿಗಳಲ್ಲಿ ಇವರು ಕೋಟಿ ಕೋಟಿ ಲೂಟಿ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆ ಅವರನ್ನು ಸೋಮವಾರ ರಾತ್ರಿ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಪೊಲೀಸ್ ಇಲಾಖೆಯ ಹಲವು ಅಧಿಕಾರಿಗಳ ಟ್ರಾನ್ಸ್‌ಫರ್ ಹಾಗೂ ಇತರ ಡೀಲಿಂಗ್‌ಗಳಲ್ಲಿ ಆರೋಪಿ ಸಕ್ರಿಯವಾಗಿದ್ದರು ಎನ್ನಲಾಗ್ತಿದೆ. ಸಿಐಡಿ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಅಲ್ಲದೇ ಆರೋಪಿ ಗಣಪತಿ ಭಟ್ ಶಾಸಕರೊಬ್ಬರಿಗೆ ಬಹಳಷ್ಟು ಆತ್ಮೀಯರಾಗಿದ್ದರು. ಅಕ್ರಮ ಚಟುವಟಿಕೆಯಿಂದಲೇ ಬಹಳಷ್ಟು ಆಸ್ತಿ ಸಂಪಾದಿಸಿದ್ದ ಎನ್ನಲಾಗಿದೆ.
ನಿನ್ನೆ ಬೆಂಗಳೂರಿನಿಂದ ಸಿದ್ದಾಪುರದ ಹೇರೂರಿಗೆ ಬಂದ ಸಿಐಡಿ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳೀಯ ಠಾಣಾ ಪೊಲೀಸರಿಗೂ ಮಾಹಿತಿಯಿಲ್ಲದಂತೆ ಅಧಿಕಾರಿಗಳು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ. ಸ್ಥಳೀಯ ಠಾಣೆಗಳಿಗೆ ಪೊಲೀಸ್ ಸಿಬ್ಬಂದಿಯ ವರ್ಗಾವಣೆಯನ್ನೂ ಹಣಕ್ಕಾಗಿ ಆರೋಪಿ ಭಟ್ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ಹೊರಬರಬೇಕಿದೆ.
ಇದನ್ನೂ ಓದಿ: ಹೆಂಡತಿ ಜೊತೆ ಸೇರಿ ಜನರಿಗೆ ಟೋಪಿ: ಅಮಾನತುಗೊಂಡಿದ್ದ ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್