ETV Bharat / state

ಘನತ್ಯಾಜ್ಯ ಘಟಕದ ಕಾರ್ಯ ಸ್ಥಗಿತಗೊಳಿಸುವಂತೆ ಕಡಸಲಗದ್ದೆ ಗ್ರಾಮಸ್ಥರಿಂದ‌ ಪ್ರತಿಭಟನೆ - batkala

ಕಲುಷಿತ ತ್ಯಾಜ್ಯದ ನೀರು ಕಸಲಗದ್ದೆ, ಬೆಳಲಖಂಡ, ಗುಳ್ಮೆ ಗ್ರಾಮಗಳ ಮನೆಗಳ ಬಾವಿ, ತೋಟಗಳಿಗೆ ಸೇರಿದ್ದರಿಂದ ಬೇಸತ್ತ ಗ್ರಾಮಸ್ಥರು ಪುರಸಭೆ ತ್ಯಾಜ್ಯ ಘಟಕಕ್ಕೆ ಬೀಗ ಜಡಿದು ಕಸ ಸಾಗಾಟದ ವಾಹನ ತಡೆಹಿಡಿದು ಪ್ರತಿಭಟನೆ ನಡೆಸಿದರು.

batkala
ಕಡಸಲಗದ್ದೆ ಗ್ರಾಮಸ್ಥರಿಂದ‌ ಪ್ರತಿಭಟನೆ
author img

By

Published : Dec 19, 2019, 9:28 AM IST

ಭಟ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯ ಸಾಗರ ರಸ್ತೆಯಲ್ಲಿನ ಪುರಸಭಾ ಘನತ್ಯಾಜ್ಯ ಘಟಕದಲ್ಲಿನ ಕಸ ಸಂಸ್ಕರಣೆ ನೀರನ್ನು ಪಂಪ್​ಸೆಟ್​ ಬಳಸಿ ಹೊರ ಹಾಕಲಾಗಿದ್ದು, ಇದರಿಂದಾಗಿ ದುರ್ವಾಸನೆಯುಕ್ತ ನೀರಿನಿಂದ ವಾತಾವರಣ ಮಲಿನಗೊಂಡಿದೆ. ಕಲುಷಿತ ತ್ಯಾಜ್ಯದ ನೀರು ಕಸಲಗದ್ದೆ, ಬೆಳಲಖಂಡ, ಗುಳ್ಮೆ ಗ್ರಾಮಗಳ ಮನೆಗಳ ಬಾವಿ, ತೋಟಗಳಿಗೆ ಸೇರಿದ್ದರಿಂದ ಬೇಸತ್ತ ಗ್ರಾಮಸ್ಥರು ಪುರಸಭೆ ತ್ಯಾಜ್ಯ ಘಟಕಕ್ಕೆ ಬೀಗ ಜಡಿದು ಕಸ ಸಾಗಾಟದ ವಾಹನ ತಡೆಹಿಡಿದು ಪ್ರತಿಭಟನೆ ನಡೆಸಿದರು.

ಕಡಸಲಗದ್ದೆ ಗ್ರಾಮಸ್ಥರಿಂದ‌ ಪ್ರತಿಭಟನೆ

ಕಳೆದ ಮಂಗಳವಾರ ಪುರಸಭೆ ಘನತ್ಯಾಜ್ಯ ಘಟಕದಿಂದ ಕಲುಷಿತ ನೀರನ್ನು ಹೊರ ಬಿಟ್ಟ ಹಿನ್ನೆಲೆಯಲ್ಲಿ ಸ್ಥಳೀಯರೆಲ್ಲರೂ ತ್ಯಾಜ್ಯ ಘಟಕದ ಎದುರು ಪ್ರತಿಭಟಿಸಿದ್ದರು. ಕಸ ಸಾಗಾಟದ ವಾಹನ ತಡೆಹಿಡಿದ ವಿಚಾರ ತಿಳಿದು ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ದೇವರಾಜ, ಆರೋಗ್ಯಾಧಿಕಾರಿ ಸುಜಿಯಾ ಸೋಮನ, ಎಂಜಿನಿಯರ್ ಮುಟ್ಟಳ್ಳಿ, ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ ಹಾಗೂ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿದ್ದರು.

ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸ್ಥಳೀಯರು ಸಮಸ್ಯೆ ಅನುಭವಿಸುವಂತೆ ಮಾಡಿದ್ದಾರೆಂದು ಪುರಸಭೆ ಅಧಿಕಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಈ ಮಧ್ಯೆ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಸ್ಥಳಕ್ಕೆ ಸಹಾಯಕ ಆಯುಕ್ತರು, ತಹಶೀಲ್ದಾರ್ ಬರಬೇಕೆಂದು ಪಟ್ಟು ಹಿಡಿದ ಗ್ರಾಮಸ್ಥರ ಆಗ್ರಹಕ್ಕೆ ಕೊನೆಗೆ ತಹಶೀಲ್ದಾರ್​ ವಿ.ಪಿ.ಕೊಟ್ರಳ್ಳಿ ಭೇಟಿ ನೀಡಿ ಗ್ರಾಮಸ್ಥರ ಮನವಿ ಆಲಿಸಿದರು.

ನಂತರ ತಹಶೀಲ್ದಾರ್​ ಮಧ್ಯಸ್ಥಿಕೆಯಲ್ಲಿ ತ್ಯಾಜ್ಯ ಘಟಕದ ಗೇಟನ್ನು ತೆಗೆದು ಖುದ್ದು ತಹಶೀಲ್ದಾರ್​ ಕಸ ಸಂಸ್ಕರಣೆ ಘಟಕವನ್ನು ವೀಕ್ಷಿಸಿದ್ದು, ಮುಂದಿನ ದಿನದಲ್ಲಿ ಕಸ ಸಂಸ್ಕರಣೆಯ ನೀರನ್ನು ಹೊರ ಚೆಲ್ಲದಂತೆ ಪುರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿಭಟನೆ ನಡೆಸಲು ಪೊಲೀಸರ ಅನುಮತಿ ಅವಶ್ಯವಿದ್ದು, ಯಾವುದೇ ಅನುಮತಿಯಿಲ್ಲದೇ ಪ್ರತಿಭಟನೆ ನಡೆಸಿರುವ ಹಿನ್ನೆಲೆ ಗ್ರಾಮಸ್ಥರನ್ನು ಬಂಧಿಸಬೇಕಾಗುತ್ತದೆ ಎಂಬ ಪೊಲೀಸರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಪ್ರತಿಭಟನೆ ನಿಲ್ಲಿಸಲಾಯಿತು.

Intro:ಘನತ್ಯಾಜ್ಯ ಘಟಕದ ಕಾರ್ಯ ಸ್ಥಗಿತಗೊಳಿಸುವಂತೆ ಕಡಸಲಗದ್ದೆ ಗ್ರಾಮಸ್ಥರಿಂದ‌ ಪ್ರತಿಭಟನೆ

ತಹಸೀಲ್ದಾರ ಮಧ್ಯಸ್ಥಿಕೆಯಲ್ಲಿ ಸಮಸ್ಯೆಗೆ ತಾತ್ಕಾಲಿಕ ಅಂತ್ಯ

ಭಟ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯ ಸಾಗರ ರಸ್ತೆಯಲ್ಲಿನ ಪುರಸಭಾ ಘನತ್ಯಾಜ್ಯ ಘಟಕದಲ್ಲಿನ ಕಸ ಸಂಸ್ಕರಣೆಯ ನೀರನ್ನು ಹೊರ ಚೆಲ್ಲಿದ್ದು ಇದರಿಂದಾಗಿ ತೀರಾ ಕೆಟ್ಟ ದುರ್ವಾಸನೆಯ ಕಲುಷಿತ ನೀರಿನ ತ್ಯಾಜ್ಯವೂ ಘಟಕದ ಸುತ್ತಮುತ್ತಲಿನ ಕಸಲಗದ್ದೆ, ಬೆಳಲಖಂಡ, ಗುಳ್ಮೆ ಗ್ರಾಮದ ಮನೆಗಳ ಬಾವಿ, ತೋಟಕ್ಕೆ ಸೇರಿದ್ದ ಹಿನ್ನೆಲೆ ಬುಧವಾರದಂದು ಪುರಸಭೆ ತ್ಯಾಜ್ಯ ಘಟಕಕ್ಕೆ ಗ್ರಾಮಸ್ಥರು ಬೀಗ ಜಡಿದು ಕಸ ಸಾಗಾಟದ ವಾಹನವನ್ನು ತಡೆ ಹಿಡಿದು ಪ್ರತಿಭಟನೆ ನಡೆಸಿದರು.Body:ಮಂಗಳವಾರದಂದು ಬೆಳಿಗ್ಗೆ ಪುರಸಭೆ ಘನ ತ್ಯಾಜ್ಯ ಘಟಕದಿಂದ ಕಲುಷಿತ ನೀರನ್ನು ಹೊರ ಬಿಟ್ಟ ಹಿನ್ನೆಲೆ ಸ್ಥಳಿಯರೆಲ್ಲರು ಘಟಕದ ಎದುರು ಜಮಾವಣೆಗೊಂಡು ಪ್ರತಿಭಟಿಸಿದ್ದರು. ಆದರೆ ಪ್ರತಿಭಟನೆ ಫಲಪ್ರದವಾದ ಹಿನ್ನೆಲೆ ಬುಧವಾರದಂದು ಕಸಲಗದ್ದೆ, ಬೆಳಲಖಂಡ ವ್ಯಾಪ್ತಿಯ ಗ್ರಾಮಸ್ಥರು ಘಟಕದ ಗೇಟಗೆ ಬೀಗ ಹಾಕಿ ಮನೆ ಮನೆ ಕಸ ಸಂಗ್ರಹಣೆ ವಾಹನವನ್ನು ಹೊರಗಡೆ ತಡೆ ಹಿಡಿದು ಪ್ರತಿಭಟಿಸಿದರು.ತಡೆ ಹಿಡಿದ ವಿಚಾರ ತಿಳಿದು ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ದೇವರಾಜ, ಆರೋಗ್ಯಾಧಿಕಾರಿ ಸುಜಿಯಾ ಸೋಮನ, ಇಂಜಿನಿಯರ, ಮುಟ್ಟಳ್ಳಿ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷ, ಪಿಡಿಓ ಹಾಗೂ ಗ್ರಾಮೀಣ ಠಾಣಾ ಪೊಲೀಸರುಭೇಟಿ ನೀಡಿದರು.

ಅಧಿಕಾರಿಗಳ ಬೇಬವಾಬ್ದಾರಿಯಿಂದಾಗಿ ಸ್ಥಳಿಯರು ಸಮಸ್ಯೆ ಅನುಭವಿಸುವಂತೆ ಮಾಡಿದ್ದಾರೆಂದು ಪುರಸಭೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಈ ಮಧ್ಯೆ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು ಸ್ಥಳಕ್ಕೆ ಸಹಾಯಕ ಆಯುಕ್ತರು, ತಹಸೀಲ್ದಾರ ಬರಬೇಕೆಂದು ಪಟ್ಟು ಹಿಡಿದ ಗ್ರಾಮಸ್ಥರ ಆಗ್ರಹಕ್ಕೆ ಕೊನೆಯಲ್ಲಿ ತಹಸೀಲ್ದಾರ ವಿ.ಪಿ.ಕೊಟ್ರಳ್ಳಿ ಭೇಟಿ ನೀಡಿ ಗ್ರಾಮಸ್ಥರ ಮನವಿಯನ್ನು ಆಲಿಸಿದರು.

ನಂತರ ತಹಸೀಲ್ದಾರ ಮಧ್ಯಸ್ಥಿಕೆಯಲ್ಲಿ ತ್ಯಾಜ್ಯ ಘಟಕದ ಗೇಟನ್ನು ತೆಗೆದು ಕುದ್ದು ತಹಸೀಲ್ದಾರ ಅವರು ಕಸ ಸಂಸ್ಕರಣೆಯ ಘಟಕವನ್ನು ವೀಕ್ಷಿಸಿದ್ದು ಮುಂದಿನ ದಿನದಲ್ಲಿ ಕಸ ಸಂಸ್ಕರಣೆಯ ನೀರನ್ನು ಹೊರ ಚೆಲ್ಲದಂತೆ ಪುರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿಭಟನೆ ನಡೆಸಲು ಪೊಲೀಸರ ಅನುಮತಿ ಅವಶ್ಯವಿದ್ದು ಯಾವುದೇ ಅನುಮತಿಯಿಲ್ಲದೇ ಪ್ರತಿಭಟನೆ ನಡೆಸಿರುವ ಹಿನ್ನೆಲೆ ಗ್ರಾಮಸ್ಥರನ್ನು ಬಂಧಿಸಬೇಕಾಗಿತು ಎಂಬ ಪೊಲೀಸರ ಎಚ್ಚರಿಕೆಯ ಹಿನ್ನೆಲೆ ಪ್ರತಿಭಟನೆಯನ್ನು ನಿಲ್ಲಿಸಲಾಯಿತು.

ಗ್ರಾಮಸ್ಥರಾದ ಜಟ್ಟಪ್ಪ ನಾಯ್ಕ ಪುರಸಭೆಯ ಘನ ತ್ಯಾಜ್ಯ ಘಟಕದಿಂದ ಇಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಾಕಷ್ಟು ಸಮಸ್ಯೆಯಾಗಿದ್ದು, ಎಲ್ಲಾ ರೀತಿಯ ಕಾನೂನಿನ ಹೋರಾಟವನ್ನು ಸಹ ನಡೆಸಲಾಗಿದೆ. ಸಾಕಷ್ಟು ವರ್ಷದಿಂದ ಅಧಿಕಾರಿಗಳು ಕೇವಲ ಭರವಸೆಯ ಮಾತುಗಳಿಂದಲೇ ನೀರು ಸಂಸ್ಕರಣೆಯನ್ನು ನಿಲ್ಲಿಸುವದಾಗಿ ತಿಳಿಸಿದ್ದರ ಮಧ್ಯೆ ಮುಂದುವರೆಸಿಕೊಂಡು ಹೋಗಿದ್ದಾರೆ. ಎರಡು ದಿನದ ಹಿಂದೆ ಮತ್ತೆ ವಿಷಯುಕ್ತ ನೀರನ್ನು ವಿಸರ್ಜನೆ ಮಾಡಿದ್ದಾರೆ. ಈ ನೀರು ಗ್ರಾಮದ ಮನೆಗಳ‌ ತೋಟ ಗದ್ದೆ ಬಾವಿಗೆ ಸೇರಿದೆ. ಈಗ ಪ್ರತಿಭಟನೆಯ ಬಳಿಕ ಅಧಿಕಾರಿಗಳು ತಾತ್ಕಾಲಿಕ ಸಮಜಾಯಿಸಿ ನೀಡಿ ತೆರಳಿದ್ದಾರೆ.

ನಂತರ ಸೆಂಟರ ಫಾರ್ ಪಾಲಿಸಿ ರಿಸರ್ಚ್ ಸಂಸ್ಥೆ - ಹಿರಿಯ ಪರಿಸರ ಕಾನೂನು ಸಂಯೋಜಕರು ವಿನೋದ ಪಟಗಾರ ಮಾತನಾಡಿ ನಮ್ಮ ಸಂಸ್ಥೆಯನ್ನು ಬೆಳಲಖಂಡ ಗ್ರಾಮಸ್ಥರು ಪುರಸಭೆಯೂ ಮಾಡುತ್ತಿರುವ ನೆಲಭರ್ತಿ ಜಾಗದಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ವಿಚಾರಣೆ ನಡೆಸುವಂತೆ ಪತ್ರ ಬರೆದಿದ್ದು ಈ ಬಗ್ಗೆ ತನಿಖೆ ನಡೆಸಿದ ನಮ್ಮ ಸಂಸ್ಥೆಯೂ ಈ ವ್ಯಾಪ್ತಿಯ ಘನತ್ಯಾಜ್ಯ ಘಟಕಕ್ಕೆ ಯಾವುದೇ ಪರವಾನಿಗೆ ಇಲ್ಲ. ನೆಲಭರ್ತಿ ಜಾಗದ ಕಾರ್ಯನಿರ್ವಹಣೆಗೆ ಪಾಲಿಸಬೇಕಾದ ಯಾವುದನ್ನು ಅನುಸರಿಸದಿರುವುದು ತಿಳಿದು ಬಂದಿದೆ. ಈ ಬಗ್ಗೆ ಪುರಸಭೆಗೆ ಘಟಕದ ಕಾರ್ಯ ನಿಲ್ಲಿಸುವಂತೆ ಮನವರಿಕೆ ಮಾಡಿದರು ಯಾವುದೇ ಹಿಂಬರಹ ಬಂದಿಲ್ಲವಾಗಿದೆ.

ಕಸ ಸಂಸ್ಕರಣೆಗಿಲ್ಲ ಪುರಸಭೆಗೆ ಯಾವುದೇ ಪರವಾನಿಗೆ:ಈ ಹಿಂದಿನಿಂದಲೂ ಪುರಸಭೆಯೂ ತ್ಯಾಜ್ಯ ಕಸ ಸಂಸ್ಕರಣೆಯನ್ನು ನಡೆಸುತ್ತಾ ಬಂದಿದ್ದು, ಈ ಬಗ್ಗೆ ಗ್ರಾಮಸ್ಥರು ಸಂಸ್ಕರಣೆ ಮಾಡಲು ಪುರಸಭೆ ಪರವಾನಿಗೆ ಇದೆಯಾ ಇಲ್ಲವಾ ಎಂಬ ಬಗ್ಗೆ ದೆಹಲಿ ಮೂಲದ ಸೆಂಟರ ಫಾರ್ ಪಾಲಿಸಿ ರಿಸರ್ಚ್ ಸಂಸ್ಥೆಯಿಂದ ಪೂರಕ ದಾಖಲೆಯನ್ನು ಸಂಗ್ರಹಿಸಿದ್ದಾರೆ. ಈ ಪ್ರಕ್ರಿಯೆಯ ವೇಳೆ ಕಸ ಸಂಸ್ಕರಣೆಗೆ ಯಾವುದೇ ಪರವಾನಿಗೆ ಇಲ್ಲದಿದ್ದರು ಪುರಸಭೆ ಸಂಸ್ಕರಣೆಗೆ ಮುಂದಾಗಿರುವ ಕಾನೂನು ಬಾಹಿರ ಎಂಬ ಆಘಾತಕಾರಿ ವಿಚಾರ ತಿಳಿದು ಬಂದಿದೆ.

ಬೈಟ್1: ವಿನೋದ ಪಟಗಾರ (ಸ್ಕೈ ಬ್ಲೂ ಶರ್ಟ್)

ಬೈಟ್:2:ಜಟ್ಟಪ್ಪ ನಾಯ್ಕ ಗ್ರಾಮಸ್ಥ(ವೈಟ್ ಶರ್ಟ್)
Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.