ETV Bharat / state

ಮಾಹಿತಿ ಇಲ್ಲದೆ ಸಭೆಗೆ ಬಂದ ಅಧಿಕಾರಿಗಳು...ಗ್ರಹಣ ಬಿಡಿಸಿದ ಸಚಿವ ಮಾಧುಸ್ವಾಮಿ - Ministers taken to the class

ಸೂಕ್ತ ಮಾಹಿತಿ ಇಲ್ಲದೆ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕಾನೂನು ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

progress-review-meeting
progress-review-meeting
author img

By

Published : Dec 26, 2019, 2:05 PM IST

ಕಾರವಾರ: ಸೂಕ್ತ ಮಾಹಿತಿ ಇಲ್ಲದೆ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಕಾನೂನು ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಣ್ಣ ನೀರಾವರಿ ಇಲಾಖೆ ಪ್ರಗತಿ ಪರಿಶೀಲನೆ ಆಗಮಿಸಿದ ಅಧಿಕಾರಿಗಳು ಮಾಹಿತಿ ನೀಡಲು ಪರದಾಡಿದರು. ಯಾವ ಕಾಮಗಾರಿ ಬಗ್ಗೆ ಕೇಳಿದರೂ ಸ್ಪಷ್ಟ ಮಾಹಿತಿ ನೀಡಲಿಲ್ಲ. ಅಷ್ಟೇ ಅಲ್ಲ, ಟೆಂಡರ್ ಪ್ರಕಟಣೆ ಬಗ್ಗೆಯೂ ವಿವರ ನೀಡದ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.

ಗ್ರಹಣ ಬಿಡಿಸಿದ ಸಚಿವ ಮಾಧುಸ್ವಾಮಿ

ಯಾವ ಕಾಮಗಾರಿ ಎಷ್ಟು ವೆಚ್ಚವಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯ ವರದಿ ಪತ್ರದಲ್ಲಿ ಒಂದು ಮಾಹಿತಿ ಇರುವುದೇ ಬೇರೇ. ನೀವೇ ಒಂದು ಮಾಹಿತಿ ನೀಡುತ್ತಿದ್ದೀರಾ. ಬರೆಯುವಾಗ ಕುಡಿದು ಸಿದ್ದಪಡಿಸಿದ್ಧೀರಾ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳನ್ನು ಈಗಾಗಲೇ ಮನೆಗೆ ಕಳುಹಿಸಿದ್ದೇನೆ. ನೀವು ಮನೆಗೆ ಹೋಗುವ ಆಸೆಯಿದೆಯೇ ಎಂದು ಎಚ್ಚರಿಕೆ ನೀಡಿದ ಅವರು, ಸರ್ಕಾರದಿಂದ ಸಂಬಳ ತೆಗೆದುಕೊಳ್ಳುತ್ತೀರಾ, ಕೆಲಸ ಮಾಡದೇ ಇರಲು ನಾಚಿಕೆಯಾಗುವುದಿಲ್ಲವೇ? ಎಂದು ಕಿಡಿಕಾರಿದರು.

ಸೂಕ್ತ ಮಾಹಿತಿ ನೀಡದ ಮತ್ತು ಸಮರ್ಪಕ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಮುಂಡಗೋಡ ಎಂಜಿನಿಯರ್ ಮುರುಳೀಧರ್ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವರ ಸೂಚಿಸಿದರು.

Intro:Body:ಮಾಹಿತಿ ಇಲ್ಲದೆ ಸಭೆಗೆ ಬಂದ ಅಧಿಕಾರಿಗಳು... ಗ್ರಹಣ ಬಿಡಿಸಿದ ಸಚಿವ ಮಾಧುಸ್ವಾಮಿ

ಕಾರವಾರ: ಸೂಕ್ತ ಮಾಹಿತಿ ಇಲ್ಲದೆ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡ ಘಟನೆ ಕಾರವಾರದಲ್ಲಿ ನಡೆದಿದೆ.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸಣ್ಣ ನೀರಾವರಿ ಇಲಾಖೆ ಪ್ರಗತಿ ಪರಿಶೀಲನೆ ಆಗಮಿಸಿದ ಅಧಿಕಾರಿಗಳು ಮಾಹಿತಿ ನೀಡಲು ಪರದಾಡುತ್ತಿದ್ದರು. ಯಾವ ಕಾಮಗಾರಿ ಬಗ್ಗೆ ಕೇಳಿದರು ಸ್ಪಷ್ಟ ಮಾಹಿತಿ ನೀಡದೆ, ಟೆಂಡರ್ ಪ್ರಕಟಣೆ ಬಗ್ಗೆ ತಿಳಿದುಕೊಳ್ಳದ ಅಧಿಕಾರಿಗಳಿಗೆ ಸಚಿವ ಮಾಧುಸ್ವಾಮಿ ತರಾಟೆಗೆ ತೆಗೆದುಕೊಂಡರು.
ಯಾವ ಕಾಮಗಾರಿ ಎಷ್ಟು ವೆಚ್ಚವಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯ ವರದಿ ಪತ್ರದಲ್ಲಿ ಒಂದು ಮಾಹಿತಿ ಇದ್ದು, ನೀವೇ ಒಂದು ಮಾಹಿತಿ ನೀಡುತ್ತಿದ್ದೀರಾ. ಬರೆಯುವಾಗ ಕುಡಿದು ಸಿದ್ದ ಪಡಿಸಿದ್ದಿರಾ ಎಂದು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಇಬ್ಬರು ಅಧಿಕಾರಿಗಳನ್ನು ಈಗಾಗಲೇ ಮನೆಗೆ ಕಳುಹಿಸಿದ್ದು ಮನೆಗೆ ಹೋಗುವ ಆಸೆಯಿದೆಯೇ ಎಂದು ಎಚ್ಚರಿಕೆಯನ್ನು ನೀಡಿದ ಅವರು, ಸರ್ಕಾರದಿಂದ ಸಂಬಳ ತೆಗೆದುಕೊಳ್ಳುತ್ತೀರಾ, ಕೆಲಸ ಮಾಡದೇ ಇರಲು ನಾಚಿಕೆಯಾಗುವುದಿಲ್ಲವೇ ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ ಸೂಕ್ತ ಮಾಹಿತಿ ನೀಡದ ಮತ್ತು ಸಮರ್ಪಕ ಕೆಲಸ ನಿರ್ವಹಿಸದ ಹಿನ್ನೆಲೆಯಲ್ಲಿ ಮುಂಡಗೋಡ ಎಂಜಿನಿಯರ್ ಮುರುಳಿಧರ್ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಸಚಿವರ ಸೂಚಿಸಿದರು.
ಪ್ರಗತಿ ಪರಿಶೀಲನೆ ವೇಳೆ ಶಾಸಕರಾದ ರೂಪಾಲಿ ಎಸ್. ನಾಯ್ಕ, ದಿನಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ, ಮುಖ್ಯ ಎಂಜಿನಿಯರ್ ಜಿ.ಟಿ.ಸುರೇಶ್ ಉಪಸ್ಥಿತರಿದ್ದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.