ಶಿರಸಿ: ಮೊನ್ನೆ ನಡೆದ ಘಟನೆಗೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿಯೇ ನೇರ ಕಾರಣ. ಅವರು ನನಗೆ ಮೆಜಾರಿಟಿ ಇಲ್ಲ ಅಂತ ಮೊದ್ಲೇ ರಾಜೀನಾಮೆ ನೀಡಿದ್ರೆ ಇಂತಹ ಘಟನೆ ನಡೆಯೋಕೆ ಸಾಧ್ಯವಿರಲಿಲ್ಲ ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ನೇರವಾಗಿ ಆರೋಪಿಸಿದ್ದಾರೆ.
ಸಭಾಪತಿಯವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಇದ್ದಾಗ ಉಪಸಭಾಪತಿ ಸದನ ನಡೆಸೋದು ಸಂಪ್ರದಾಯ. ಆದ್ರೆ ಸಭಾಪತಿಯವರ ಅತಿಯಾದ ಅಧಿಕಾರದ ಲಾಲಸೆಯಿಂದ ಈ ಪರಿಸ್ಥಿತಿ ಬಂದೊದಗಿದೆ. ಇದು ಯಾವ ರಾಜಕೀಯ ಪಕ್ಷಕ್ಕೂ ಶೋಭೆ ತರುವಂತದ್ದಲ್ಲ. ಇದಕ್ಕೆಲ್ಲ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದರು.