ಕಾರವಾರ: ರಸ್ತೆಯಲ್ಲಿ ಹೋಗುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಡಿವೈಎಸ್ಪಿ ವಾಹನ ಓಮಿನಿ ಕಾರಿಗೆ ಗುದ್ದಿದ ಪರಿಣಾಮ ಡಿವೈಎಸ್ಪಿ ಸೇರಿ ಆರು ಜನರು ಗಾಯಗೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.
ಕಾರವಾರದಿಂದ ಮುಂಡಗೋಡಿಗೆ ತೆರಳುತ್ತಿದ್ದ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಇದ್ದ ವಾಹನಕ್ಕೆ ಮಗುವೊಂದು ಅಡ್ಡ ಬಂದಿದೆ. ಈ ವೇಳೆ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಪಕ್ಕದಲ್ಲಿ ತೆರಳುತ್ತಿದ್ದ ಓಮಿನಿಗೆ ಡಿವೈಎಸ್ಪಿ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಓಮಿನಿ ಪಲ್ಟಿಯಾಗಿದೆ.
ಓದಿ: ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ, ಬಜೆಟ್ ಮಂಡನೆಗೆ ವಿಪಕ್ಷಗಳ ಅಡ್ಡಿ, ಸಭಾತ್ಯಾಗ!
ಘಟನೆಯಲ್ಲಿ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಸೇರಿ ಓಮಿನಿಯಲ್ಲಿದ್ದ 5 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.