ಕಾರವಾರ: ತಲೆ ಸಹಿತ ಇರುವ ಹುಲಿಯ ಚರ್ಮವನ್ನು ಮಾರಾಟ ಮಾಡಲು ವ್ಯಕ್ತಿಯೋರ್ವನು ಯತ್ನಿಸುತ್ತಿದ್ದನು. ಈ ಕುರಿತಂತೆ ಮಾಹಿತಿ ಪಡೆದ ಚಿಕ್ಕಮಗಳೂರಿನ ಪೊಲೀಸ್ ಅರಣ್ಯ ಸಂಚಾರಿದಳದ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಹಳಿಯಾಳದ ಮಹಾದೇವ ನಾರಾಯಣ ತೇರಗಾಂವಕರ (55) ಬಂಧಿತ ಆರೋಪಿ. ಈತ ಹುಲಿ ಚರ್ಮವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದನು. ಈ ಕುರಿತಂತೆ ಖಚಿತ ಮಾಹಿತಿ ಪಡೆದ ಚಿಕ್ಕಮಗಳೂರು ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತನಿಂದ ಹುಲಿಯ ಚರ್ಮ ಮತ್ತು ಬೈಕ್ ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಮಾ. 23ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಓದಿ: ಹಂಪಿಯಲ್ಲಿ ಐತಿಹಾಸಿಕ ಕೋಟೆ ಗೋಡೆ ಕುಸಿತ : ತಪ್ಪಿದ ಭಾರೀ ಅನಾಹುತ
ಚಿಕ್ಕಮಗಳೂರು ಪೊಲೀಸ್ ಅರಣ್ಯ ಸಂಚಾರಿ ದಳದ ಪಿಎಎಸ್ಐ ಆರ್.ಶೋಭಾ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಹೇಮಾವತಿ, ಅರಸ್, ಎಚ್. ದೇವರಾಜ್, ಸಿ.ಡಿ.ಎಚ್. ದಿನೇಶ್, ತಿಮ್ಮಶೆಟ್ಟಿ ಇನ್ನಿತರ ಸಿಬ್ಬಂದಿ ಭಾಗಿಯಾಗಿದ್ದರು.