ಶಿರಸಿ: ಹೊಟ್ಟೆನೋವು ಮತ್ತು ಮೈ ನೋವು ತಾಳಲಾರದೇ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬನವಾಸಿಯ ಬಿದ್ರಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಬಿದ್ರಳ್ಳಿಯ ನಿವಾಸಿ ಮಾರುತಿ ನಾಗೇಶ ನಾಯ್ಕ (31) ನೇಣಿಗೆ ಶರಣಾದ ವ್ಯಕ್ತಿ ಆಗಿದ್ದು, ತೀವ್ರ ಹೊಟ್ಟೆನೋವಿನಿಂದ ನರಳುತ್ತಿದ್ದ ಎನ್ನಲಾಗಿದೆ.
ಈತ ಮನೆ ಬಳಿಯ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ ಎಂದು ತಂದೆ ನಾಗೇಶ ನಾಯ್ಕ ತಿಳಿಸಿದ್ದಾರೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.