ಭಟ್ಕಳ: ತಾಲೂಕಿನ ಸರ್ಪನಕಟ್ಟೆ ಕ್ರಾಸ್ನಿಂದ ಬೆಳಕೆ ಕ್ರಾಸ್ ತನಕ ಸರ್ವಿಸ್ ರೋಡ್ ಮಾಡಬೇಕು ಹಾಗೂ ಹಲವು ಬೇಡಿಕೆಗಳನ್ನು ಮುಂದಿಟ್ಟು ಸ್ಥಳೀಯ ಸಾರ್ವಜನಿಕರು ಮಂಗಳವಾರದಂದು ಸೋಡಿಗದ್ದೆ ಕ್ರಾಸ್ನಲ್ಲಿ ನಡೆಯುತ್ತಿದ್ದ ಕಾಮಗಾರಿಯನ್ನು ತಡೆದು ಸ್ಥಳಕ್ಕೆ ಐ.ಆರ್.ಬಿ ಕಂಪನಿಯ ಅಧಿಕಾರಿಗಳು ಬರುವಂತೆ ಪಟ್ಟು ಹಿಡಿದ ಘಟನೆ ನಡೆಯಿತು.
ಸರ್ಪನಕಟ್ಟೆ ಕ್ರಾಸ್ನಿಂದ ಬೆಳಕೆ ಕ್ರಾಸಿನ ತನಕ ಹೆದ್ದಾರಿಯಿಂದ ಕೆಲವು ಗ್ರಾಮಗಳಿಗೆ ಹೋಗಲು ರಸ್ತೆಗಳಿದ್ದು, ಆ ರಸ್ತೆ ಸಂಪರ್ಕ ಮಾಡಲು ನಮಗೆ ಸರ್ವಿಸ್ ರಸ್ತೆ ಅಗತ್ಯವಾಗಿದೆ. ಜಿಲ್ಲೆಯ ಪ್ರಸಿದ್ಧ ಸೋಡಿಗದ್ದೆ ದೇವಸ್ಥಾನಕ್ಕೆ ಹೋಗವ ರಸ್ತೆಯಲ್ಲಿ ಯೂಟರ್ನ್ ಸಂಪರ್ಕ ಹಾಗೂ ಸೋಡಿಗದ್ದೆ ಕ್ರಾಸ್ನಲ್ಲಿ ಹೆದ್ದಾರಿಯ ಇರಡು ಭಾಗದಲ್ಲಿ ಬಸ್ ನಿಲ್ದಾಣ ಬೇಕು. ಈ ಎಲ್ಲಾ ಕೆಲಸ ಮುಗಿಯುವ ತನಕ ಈ ಭಾಗದಲ್ಲಿ ಕಾಮಗಾರಿ ನಡೆಸಬಾರದೆಂದು ಆಗ್ರಹಿಸಿ, ಸ್ಥಳಕ್ಕೆ ಐ.ಆರ್.ಬಿ. ಕಂಪನಿಯ ಮೇಲಾಧಿಕಾರಿ ಕರೆಸುವಂತೆ ಐ.ಆರ್.ಬಿ ಇಂಜಿನಿಯರ್ ಮಲ್ಲಿಕಾರ್ಜುನ ಪಟ್ಟು ಹಿಡಿದರು.
ನಂತರ ಸ್ಥಳಕ್ಕೆ ಬಂದ ಐ.ಆರ್.ಬಿ ಕಂಪನಿಯ ಪ್ರತಿನಿಧಿ ಸಾರ್ವಜಕನಿಕರೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಗಳಾದ ರಸ್ತೆಗೆ ಸರಿಯಾದ ಬೀದಿ ದೀಪಗಳನ್ನು ಅಳವಡಿಸಬೇಕು ಮತ್ತು ಒಂದು ರಸ್ತೆಯನ್ನು ಮೇಲ್ಭಾಗವಾಗಿ ಇನ್ನೊಂದು ರಸ್ತೆಯನ್ನು ಕೆಳಭಾಗದಲ್ಲಿ ಮಾಡದೆ ಒಂದೇ ರೀತಿಯಲ್ಲಿ ಸಮತಟ್ಟಾಗಿ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಗದೀಶ ನಾಯ್ಕ, ರಘು ಶೆಟ್ಟಿ, ನಾಗೇಂದ್ರ ನಾಯ್ಕ,ಗಣಪತಿ ಜೋಗಿ,ಮಣಿಕಂಟ ಜೋಗಿ ಮುಂತಾದವರು ಉಪಸ್ಥಿತರಿದ್ದರು.