ETV Bharat / state

ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಸೋರಿಕೆ : 12 ಕೋವಿಡ್ ರೋಗಿಗಳ ಸ್ಥಳಾಂತರ

author img

By

Published : May 22, 2021, 3:10 PM IST

ಪ್ರಸ್ತುತ ಆಸ್ಪತ್ರೆಯಲ್ಲಿ 20 ಜಂಬೋ ಸಿಲಿಂಡರ್ ಮಾತ್ರ ಬಾಕಿಯಿದ್ದು, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಜಾನನ ಭಟ್ ನಿರ್ಲಕ್ಷ್ಯದಿಂದಲೇ ಸೋರಿಕೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ..

Shirazi Pandita Public Hospital
ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆ

ಶಿರಸಿ : ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ಯುನಿಟ್‌ನಲ್ಲಿ ಸೋರಿಕೆ ಉಂಟಾಗಿದೆ. 30ಕ್ಕೂ ಅಧಿಕ ಜಂಬೂ ಸಿಲಿಂಡರ್ ಖಾಲಿಯಾದ ಘಟನೆ ಶನಿವಾರ ನಡೆದಿದೆ.

ಓದಿ: ಎಲ್ಲದಕ್ಕೂ ಕೇಂದ್ರದ ಕಡೆ ನೋಡದೆ ರಾಜ್ಯ ಸರ್ಕಾರ ಸ್ವತಂತ್ರ ನಿರ್ಧಾರ ಕೈಗೊಳ್ಳಲಿ: ಹೆಚ್​ಡಿಕೆ

ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿರುವ ಯುನಿಟ್‌ನಲ್ಲಿ ಸುಮಾರು 30 ಜಂಬೋ ಸಿಲಿಂಡರ್ ಸೋರಿಕೆಯಿಂದ ಖಾಲಿಯಾಗಿದೆ‌.

ಆಸ್ಪತ್ರೆಯ ಪಕ್ಕದಲ್ಲೇ ಇರುವ ಆಕ್ಸಿಜನ್ ಪೂರೈಕಾ ಘಟಕದಲ್ಲಿ ಶುಕ್ರವಾರ ರಾತ್ರಿಯಿಂದಲೇ ಆಕ್ಸಿಜನ್ ಸೋರಿಕೆಯಾಗಿದೆ.‌ ಶನಿವಾರ ನಸುಕಿನ ಜಾವದಿಂದ ನಿರೀಕ್ಷಿತ ಪ್ರಮಾಣದಲ್ಲಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಾಗದಿದ್ದಾಗ, ಸೋರಿಕೆ ವಿಚಾರ ಬೆಳಕಿಗೆ ಬಂದಿತ್ತು.

ತಕ್ಷಣ ತಾಂತ್ರಿಕ ಸಿಬ್ಬಂದಿಯನ್ನು ಕರೆಯಿಸಿ ಪರಿಶೀಲನೆ ನಡೆಸುವ ಮೂಲಕ‌ ಸದ್ಯಕ್ಕೆ ಸೋರಿಕೆ‌ ನಿಲ್ಲಿಸಲಾಗಿದೆ. ಆದರೆ, ಹೆಚ್ಚಿನ ಪರಿಶೀಲನೆಗಾಗಿ ಹುಬ್ಬಳ್ಳಿಯಿಂದ ತಜ್ಞರ ತಂಡ ಆಗಮಿಸಲಿದೆ.

ಹಲವು ಸಿಲಿಂಡರ್‌ಗಳಷ್ಟು ಆಕ್ಸಿಜನ್‌ ಖಾಲಿಯಾಗಿದ್ದರಿಂದ ರೋಗಿಗಳ ಸ್ಥಳಾಂತರ ನಡೆದಿದ್ದು, ಮುಂಡಗೋಡಕ್ಕೆ 5, ಸಿದ್ಧಾಪುರ 6, ಯಲ್ಲಾಪುರಕ್ಕೆ 1 ಸೋಂಕಿತರ ಸ್ಥಳಾಂತರ ಮಾಡಲಾಗಿದೆ. 3 ಮಂದಿ ಡಿಸ್ಚಾರ್ಜ್ ಮಾಡಲಾಗಿದ್ದು, ಮುಂಜಾಗ್ರತೆಯ ನಿಟ್ಟಿನಲ್ಲಿ ಸೋಂಕಿತರನ್ನು ಸ್ಥಳಾಂತರ ಮಾಡಲಾಗಿದೆ.

ಪ್ರಸ್ತುತ ಆಸ್ಪತ್ರೆಯಲ್ಲಿ 20 ಜಂಬೋ ಸಿಲಿಂಡರ್ ಮಾತ್ರ ಬಾಕಿಯಿದ್ದು, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಜಾನನ ಭಟ್ ನಿರ್ಲಕ್ಷ್ಯದಿಂದಲೇ ಸೋರಿಕೆ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ.

ಇನ್ನು, ಸೋರಿಕೆ ಮಾಹಿತಿ ತಿಳಿಯುತ್ತಿದ್ದಂತೇ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ಡಿಎಸ್ಪಿ ರವಿ ನಾಯ್ಕ್, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.