ETV Bharat / state

ಮಹತ್ವದ ಹೆಜ್ಜೆ ಇಟ್ಟ ಭಟ್ಕಳ ಮಹಿಳಾ ಪೊಲೀಸರು : ರಾತ್ರಿ ವೇಳೆ ಗಸ್ತು ಪ್ರಾರಂಭ

ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೊದಲ ಬಾರಿಗೆ ರಾತ್ರಿ ವೇಳೆ ಮಹಿಳಾ ಪೊಲೀಸರ ಗಸ್ತು ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇಡೀ ರಾತ್ರಿ ಗಸ್ತು ತಿರುಗಿ, ವಾಹನಗಳ ಪರಿಶೀಲನೆ ಮಾಡಿದ ಮಹಿಳಾ ಪೊಲೀಸರು ಹೊಸ ಅನುಭವ ಪಡೆದರು..

ರಾತ್ರಿ ವೇಳೆ ಗಸ್ತು ಪ್ರಾರಂಭಿಸಿದ ಭಟ್ಕಳ ಮಹಿಳಾ ಪೊಲೀಸರು

author img

By

Published : Jun 3, 2022, 10:47 AM IST

ಭಟ್ಕಳ : ಯಾವುದೇ ಕ್ಷೇತ್ರವಿರಲಿ ಗಂಡಸರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ಮಹಿಳೆಯರು ಸಾಧಿಸಿ ತೋರಿಸುತ್ತಿದ್ದಾರೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಮಹಿಳೆಯರ ಗತ್ತು ಗೈರತ್ತು ಕಡಿಮೆ ಏನಿಲ್ಲ. ಇದೀಗ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮೊದಲ ಬಾರಿಗೆ ರಾತ್ರಿ ವೇಳೆ ಮಹಿಳಾ ಪೊಲೀಸರ ಗಸ್ತು ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಪಿಎಸ್‌ಐ ಸುಮಾ ಬಿ. ನೇತೃತ್ವದಲ್ಲಿ ರಾತ್ರಿ ರಸ್ತೆಗೆ ಇಳಿದ ಮಹಿಳಾ ಪೊಲೀಸ್ ಸಿಬ್ಬಂದಿ ಆಯಕಟ್ಟಿನ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ನಡೆಸಿದರು. ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಸಂಶಯಾಸ್ಪದ ವ್ಯಕ್ತಿಗಳ ವಿಚಾರಣೆ ನಡೆಸಿದರು. ಯಾವುದೇ ಅಳುಕು ಇಲ್ಲದೆ ತಂಡ ಕಟ್ಟಿಕೊಂಡು ಭಟ್ಕಳ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದರು.

ರಾತ್ರಿ ವೇಳೆ ಗಸ್ತು ಪ್ರಾರಂಭಿಸಿದ ಭಟ್ಕಳ ಮಹಿಳಾ ಪೊಲೀಸರು..

ನಸುಕಿನ ಜಾವ 5 ಗಂಟೆಯವರೆಗೂ ನಿದ್ದೆ ಬಿಟ್ಟು ಗಸ್ತು ನಡೆಸುವ ಮೂಲಕ ಹೊಸ ಅನುಭವ ಪಡೆದರು. ಮೊದಲ ದಿನ ಕಡಿಮೆ ಸಂಖ್ಯೆಯಲ್ಲಿ ಮಹಿಳಾ ಪೊಲೀಸರು ಕರ್ತವ್ಯಕ್ಕೆ ಹಾಜರಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಹಿಳಾ ಪೊಲೀಸರನ್ನು ರಾತ್ರಿ ಗಸ್ತಿಗೆ ನಿಯೋಜಿಸುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಾತ್ರಿ ವೇಳೆ ಮಹಿಳಾ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸುವುದಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದರೂ, ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನೂ ಅನುಷ್ಠಾನಗೊಂಡಿರಲಿಲ್ಲ. ಇದೀಗ ಭಟ್ಕಳದಲ್ಲಿ ಸಿಕ್ಕ ಯಶಸ್ಸು ಜಿಲ್ಲೆಯ ಉಳಿದ ತಾಲೂಕುಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ.

ಭಟ್ಕಳ ಮಹಿಳಾ ಪೊಲೀಸರ ಗಸ್ತು ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಸಿಪಿಐ ದಿವಾಕರ, ಮಹಿಳಾ ಸಬಲೀಕರಣದ ಭಾಗವಾಗಿ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದು, ಮಹಿಳಾ ಪೊಲೀಸರು ಸಂತೋಷದಿಂದಲೇ ಗಸ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

ದನ್ನೂ ಓದಿ: ಮಹಿಳಾ ಪೊಲೀಸರಿಂದ ಒಂದು ದಿನ ರಾತ್ರಿ ಗಸ್ತು.. ಮೈಸೂರಿನಲ್ಲಿ ವಿನೂತನ ಪ್ರಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.