ETV Bharat / state

ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ - ನವರಾತ್ರಿ ಪ್ರಯುಕ್ತ ಅನ್ನಸಂತರ್ಪಣೆ

ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ.

ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ
author img

By

Published : Oct 8, 2019, 7:58 PM IST

ಭಟ್ಕಳ : ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲಾಗಿದೆ.

ಕೇವಲ ಊರಿನ ಭಕ್ತರು ಮಾತ್ರವಲ್ಲದೇ ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ಶ್ರೀ ದೇವರಲ್ಲಿ ಹರಿಕೆ ಕಾಣಿಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಇಲ್ಲಿ 15 ದಿನಗಳ ಕಾಲ ನವರಾತ್ರಿ ಆಚರಣೆಯೂ ನಡೆಯುವುದು ವಿಶೇಷವಾಗಿದೆ. ನವರಾತ್ರಿಯ ಒಂಬತ್ತು ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೆಯ ದಿನವಾದ ವಿಜಯ ದಶಮಿಯಂದು ದೇವಸ್ಥಾನದಲ್ಲಿ ಪ್ರಾರಂಭಿಕ ಪೂಜಾ ವಿಧಿವಿಧಾನಗಳ ನಂತರ ನವಚಂಡಿಕಾ ಯಾಗ ನಡೆಯಿತು. ನಂತರ ನಡೆದ ಅನ್ನದಾಸೋಹದಲ್ಲಿ ಸುಮಾರು 3 ರಿಂದ 4 ಸಾವಿರ ಭಕ್ತರು ಪಾಲ್ಗೊಂಡರು.

ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ

ನವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ನವ ಚಂಡಿಕಾ ಹವನ, ಅನ್ನಸಂತರ್ಪಣೆ ಉದಯಾಸ್ತಮಾನ ಸೇವೆ ಸೇರಿ ಹಲವು ಸೇವೆಗಳು ಭಕ್ತರಿಂದ ನಡೆಯುತ್ತಾ ಬಂದಿದೆ. ದಿನನಿತ್ಯ ಭಜನೆ, ಲಲಿತಸಹಸ್ರನಾಮ, ಪಾರಾಯಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ದಿನಾಂಕ 13ರಂದು ಭಟ್ಕಳ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ದೇವಸ್ಥಾನ ಚಾರಿಟಬಲ್ ಟ್ರಸ್ಟ್​ನಿಂದ ನಡೆಯಲಿದೆ.

Intro:ಭಟ್ಕಳ :ತಾಲೂಕು ಐತಿಹಾಸಿಕ ದೇವಾಲಯಗಳ ಬೀಡಾಗಿದೆ, ಅಂತಹ ದೇವಸ್ಥಾನಗಳಲ್ಲಿ ಇಲ್ಲಿನ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಒಂದಾಗಿದ್ದು, ಶ್ರೀ ಕ್ಷೇತ್ರ ಅಳ್ವೇಕೋಡಿಯಲ್ಲಿ ನವರಾತ್ರಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.Body:ಭಟ್ಕಳ :ತಾಲೂಕು ಐತಿಹಾಸಿಕ ದೇವಾಲಯಗಳ ಬೀಡಾಗಿದೆ, ಅಂತಹ ದೇವಸ್ಥಾನಗಳಲ್ಲಿ ಇಲ್ಲಿನ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಒಂದಾಗಿದ್ದು, ಶ್ರೀ ಕ್ಷೇತ್ರ ಅಳ್ವೇಕೋಡಿಯಲ್ಲಿ ನವರಾತ್ರಿ ಉತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ.

ರಾಜಾಶ್ರಯಕ್ಕೊಳಪಟ್ಟ ದೇವಸ್ಥಾನಗಳಲ್ಲಿ ಇಂದಿಗೂ ಜನರ ಶದ್ಧಾ ಭಕ್ತಿ ಕೇಂದ್ರವಾಗಿ ಪ್ರಸಿದ್ಧಿ ಪಡೆದ ದೇವಸ್ಥಾನವಾಗಿ ಉಳಿದ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿ ವರ್ಷವೂ ಕೂಡಾ ನವರಾತ್ರಿಉತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕೇವಲ ಊರಿನ ಭಕ್ತರು ಮಾತ್ರವಲ್ಲದೇ ಜಿಲ್ಲೆ, ಹೊರ ಜಿಲ್ಲೆಗಳಿಂದಲೂ ಭಕ್ತರು ಆಗಮಿಸಿ ಶ್ರೀ ದೇವರಲ್ಲಿ ಹರಿಕೆ ಕಾಣಿಗೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಇಲ್ಲಿ 15 ದಿನಗಳ ಕಾಲ ನವರಾತ್ರಿ ಆಚರಣೆಯೂ ನಡೆಯುವುದು ವಿಶೇಷವಾಗಿದೆ.

ನವರಾತ್ರಿಯೆಂದರೆ ಒಂಬತ್ತು ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನವಾದ ವಿಜಯ ದಶಮಿಯಂದು ದೇವಸ್ಥಾನದಲ್ಲಿ ಪ್ರಾರಂಭಿಕ ಪೂಜಾ ವಿಧಿವಿದಾನಗಳ ನಂತರ ನವಚಂಡಿಕಾ ಯಾಗ ನಡೆಯಿತು, ಬಂದಂತಹ ಭಕ್ತಾದಿಗಳಿಗೆಲ್ಲರಿಗೂ ಮಹಾ ಅನ್ನ ಸಂತರ್ಪಣೆ ನಡೆಯಿತು, ಸರಿ ಸುಮಾರು 3ರಿಂದ4 ಸಾವಿರಕ್ಕೂ ಮೀಗಿಲಾದ ಜನರು ಶ್ರೀ ದೇವರ ಆಶೀರ್ವಾದ ಪಡೆದು ಅನ್ನದಾಸೋಹದಲ್ಲಿ ಪಾಲ್ಗೊಂಡರು.

ನಂತರ ಮಾತನಾಡಿದ ಮಾರಿಜಾತ್ರಾ ಸಮೀತಿ ಅಧ್ಯಕ್ಷರಾದ ರಾಮ ಮೊಗೇರ ಮಾತನಾಡಿ ಪ್ರತೀ ವರ್ಷವೂ ನವರಾತ್ರಿ ಉತ್ಸವವನ್ನು ಅತೀ ವಿಜ್ರಂಬಣೆಯಿಂದ ಆಚರಿಸುತ್ತಾ ಬಂದಿದ್ದೇವೆ, ಈ ವರ್ಷವೂ ಆ ಚರಿಸಿದ್ದೇವೆ, ಇಂದು ವಿಜಯದಶಮಿಯ ದಿನ ಚಂಡಿಕಾ ಹವನಗಳನ್ನು ಮಾಡಿದ್ದೇವೆ, ರಾಜ್ಯದ ಹಲವು ಕಡೆಗಳಿಂದ ದೇವಿಯ ಭಕ್ತರು ಪಾಲ್ಗೋಂಡಿದ್ದಾರೆ. ಇದೇ ದಿನಾಂಕ 13ರಂದು ಭಟ್ಕಳ ತಾಲೂಕಿನಲ್ಲಿನ 90% ಪ್ರತಿಶತ ಪಡೆದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ದೇವಸ್ಥಾನ ಚಾರಿಟೇಬಲ್ ಟ್ರಸ್ಟನಿಂದ ನಡೆಯಲಿಕ್ಕೆದೆ ಎಂದರು.

ಬೈಟ್ : ರಾಮ ಮೊಗೇರ ಅಧ್ಯಕ್ಷರು, ಮಾರಿಜಾತ್ರಾ ಸಮೀತಿ ಅಳ್ವೇಕೊಡಿ ಸಣಭಾವಿ <

ನಂತರ ಅಳ್ವೇಕೊಡಿ ದೇವಸ್ಥಾನದ ಧರ್ಮದರ್ಶಿಗಳಾದ ನಾರಾಯಣ ದಹಿಮನೆ ಮಾತನಾಡಿ ಕಳೆದ ಹತ್ತು ದಿನಗಳಿಂದ ದೇವಸ್ಥಾನದಲ್ಲಿ ನವರಾತ್ರಿ ಉತ್ಸ. ನಡೆಯುತ್ತಾ ಬಂದಿದೆ, ನವ ಚಂಡಿಕಾ ಹವನ, ಅನ್ನಸಂತರ್ಪಣೆ ಉದಯಾಸ್ತಮಾನ ಸೇವೆ ಹಿಗೇ ಹಲವು ಸೇವೆಗಳು ಭಕ್ತರಿಂದ ನಡೆಯುತ್ತಾ ಬಂದಿದೆ. ದಿನನಿತ್ಯ ಭಜನೆ, ಲಲಿತಸಹಸ್ರನಾಮ, ಪಾರಾಯಣ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ.
ದೇವಿಯ ಸಾನಿಧ್ಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯುತ್ತದೆ ಎಂದರು.

ಬೈಟ್: ನಾರಾಯಣ ದಹಿಮನೆ ಅಳ್ವೇಕೊಡಿ ದೇವಸ್ಥಾನದ ಧರ್ಮದರ್ಶಿಗಳು

ದಿನಾಂಕ 13ರಂದು ಸಂಜೆ, ಶ್ರೀ ದುರ್ಗಾಪರಮೇಶ್ವರಿ ಸಭಾಂಗಣದಲ್ಲಿ ಗೋಕರ್ಣ ಪರ್ತಗಾಳಿ ಸ್ವಾಮೀಜಿಗಳಿಂದ ತಾಲೂಕಿನಲ್ಲಿನ ಎಸ್ ಎಸ್ ಎಲ್ ಸಿ ಯಲ್ಲಿ ಪ್ರತಿಶತ 90ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತರಿಗೆ ಸ್ವಾಮೀಜಿಗಳಿಂದ ಸನ್ಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.