ETV Bharat / state

ಬಿಜೆಪಿ ಸೇರಿದವನ ಕೊಲ್ಲುವ ಪ್ರಯತ್ನದಲ್ಲಿ ತಮ್ಮದೇ ಪಕ್ಷದವನ ಕೊಲೆ... ​ಎಸ್​ಡಿಪಿಐ ಕಾರ್ಯಕರ್ತರ ಬಂಧನ - ಕೊಲೆ

ರಾಜಕೀಯ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದು, ಎಸ್​ಡಿಪಿಐ ಜಿಲ್ಲಾಧ್ಯಕ್ಷ ಸೇರಿದಂತೆ ತಾಲೂಕು ಅಧ್ಯಕ್ಷರನ್ನು ಸಹ ಬಂಧಿಸಿದ್ದಾರೆ.‌

ಎಸ್​ಡಿಪಿಐ ಕಾರ್ಯಕರ್ತರ ಬಂಧನ
author img

By

Published : May 16, 2019, 4:40 AM IST

ಶಿರಸಿ: ಕರಾವಳಿ ಭಾಗದ ಮಂಗಳೂರು, ಉಡುಪಿ ಭಾಗದಲ್ಲಿದ್ದ ಧರ್ಮ ದ್ವೇಷದ ರಾಜಕಾರಣ ಉತ್ತರ ಕನ್ನಡ ಜಿಲ್ಲೆಗೂ ಆವರಿಸಿದ್ದು, ಅಲ್ಪಸಂಖ್ಯಾತನೊಬ್ಬ ಬಿಜೆಪಿ ಪಕ್ಷ ಸೇರಿದ್ದಕ್ಕೆ ಆತನನ್ನು ಕೊಲೆ ಮಾಡುವ ಪ್ರಯತ್ನದಲ್ಲಿ ತಮ್ಮದೇ ಪಕ್ಷದವರನ್ನು ಕೊಲೆ ಮಾಡಿ ಈಗ ಜೈಲು ಕಂಬಿ ಎಣಿಸುತ್ತಿರುವ ಘಟನೆ ನಡೆದಿದೆ.

ಏಪ್ರಿಲ್ 23 ರಂದು ಮತದಾನ ನಡೆದ ರಾತ್ರಿ ವೇಳೆ ಶಿರಸಿಯ ಕಸ್ತೂರಬಾ ನಗರದ ಬಯಲಿನಲ್ಲಿ ಒಂದೇ ಕೋಮಿನ ಎರಡು ಗುಂಪಿನವರು ಹೊಡೆದಾಡಿಕೊಂಡಿದ್ರು. ಈ ವೇಳೆ ಬಿಜೆಪಿ ಅಲ್ಪಸಂಖ್ಯಾತ ತಾಲೂಕು ಉಪಾಧ್ಯಕ್ಷ ಅನೀಸ್ ತಹಶಿಲ್ದಾರ್ ಎಂಬುವವನಿಗೆ ಹೊಟ್ಟೆಗೆ ಚಾಕು ಇರಿದರೇ, ಇದೇ ಸ್ಥಳದಲ್ಲಿದ್ದ ಎಸ್​ಡಿಪಿಐ ಸದಸ್ಯ ಅಸ್ಲಂ ತಮ್ಮವರದ್ದೇ ಇರಿತದಲ್ಲಿ ಸಾವನ್ನಪ್ಪಿದ್ದ.

ಎಸ್​ಡಿಪಿಐ ಕಾರ್ಯಕರ್ತರ ಬಂಧನ

ಇನ್ನು ಪ್ರಕರಣದ ಬೆನ್ನು ಹತ್ತಿದ ಶಿರಸಿಯ ಡಿವೈಎಸ್ಪಿ ಭಾಸ್ಕರ್ ನೇತೃತ್ವದ ತಂಡ, ರಾಜಕೀಯ ದ್ವೇಷದಿಂದ ಕೊಲೆ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಿದ್ದು, ಎಸ್​ಡಿಪಿಐ ಜಿಲ್ಲಾಧ್ಯಕ್ಷ ಸೇರಿದಂತೆ ತಾಲೂಕು ಅಧ್ಯಕ್ಷರನ್ನು ಸಹ ಬಂಧಿಸಿದ್ದಾರೆ.‌ ಎಸ್​ಡಿಪಿಐ ಜಿಲ್ಲಾ ಕಾರ್ಯದರ್ಶಿ ಮಹ್ಮದ್ ಷರೀಪ್ ಶೇಖ್, ತಾಲೂಕು ಅಧ್ಯಕ್ಷ ಅಸ್ಲಮ್ ಹುಸೇನ್ ಶೇಖ್, ಭಟ್ಕಳ ಮೂಲದ ಜಿಲ್ಲಾಧ್ಯಕ್ಷ ಮಹ್ಮದ್ ತೌಫಿಕ್, ಅಬ್ದುಲ್ ಕರೀಮ್ ಸೇರಿದಂತೆ ಒಟ್ಟು 11 ಜನ ಎಸ್​ಡಿಪಿಐ ಸದಸ್ಯರನ್ನು ಬಂಧಿಸುವ ಜೊತೆಗೆ ಕಚೇರಿಗೆ ದಾಳಿ ನಡೆಸಿ ಮಹತ್ವದ ದಾಖಲೆ ಸಹ ವಶಕ್ಕೆ ಪಡೆಯಲಾಗಿದೆ.

ಎಸ್​ಪಿ ಅನೀಸ್ ವಿನಾಯಕ್ ಪಾಟೀಲ್ ಮಾತನಾಡಿ, ಶಿರಸಿಯಲ್ಲಿ ಅನೀಸ್ ಬಿಜೆಪಿ ಕಾರ್ಯಕರ್ತನಾಗಿ ಕೆಲಸಮಾಡುತಿದ್ದ. ನಂತರ ಶಿರಸಿ ತಾಲೂಕಿನ ಅಲ್ಪಸಂಖ್ಯಾತ ಘಟಕದ ತಾಲೂಕು ಉಪಾಧ್ಯಕ್ಷನಾಗಿ ಹುದ್ದೆಗೇರಿದ್ದ. ಇನ್ನು ಜಿಲ್ಲೆಯಲ್ಲಿ ಎಸ್​ಡಿಪಿಐ ಭಟ್ಕಳದಲ್ಲಿ ಮೊದಲು ಪ್ರಾರಂಭವಾಗಿ ಕಳೆದ ವರ್ಷ ಪರೇಶ್ ಮೇಸ್ತಾ ಘಟನೆ ನಂತರ ಇಡೀ ಜಿಲ್ಲೆಯಲ್ಲಿ ತನ್ನ ಘಟಕವನ್ನು ಪ್ರಾರಂಭಿಸಿತ್ತು. ಬಿಜೆಪಿ ತೊರೆದು ತಮ್ಮೊಂದಿಗೆ ಕೈಜೊಡಿಸುವಂತೆ ಎಸ್​ಡಿಪಿಐ ಜಿಲ್ಲಾಧ್ಯಕ್ಷ ಮಹ್ಮದ್ ತೌಫಿಕ್, ಕಾರ್ಯದರ್ಶಿ ಮಹ್ಮದ್ ಷರೀಪ್ ಶೇಖ್ ಈತನ ಮನೊಲಿಸಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ.

ಇದರಿಂದಾಗಿ ಇವರ ನಡುವೆ ರಾಜಕೀಯ ದ್ವೇಷ ಪ್ರಾರಂಭವಾಗಿ ಬಿಜೆಪಿ ಸೇರಿದ್ದಾನೆ ಎನ್ನುವ ಕಾರಣಕ್ಕೆ ಈತನನ್ನು ಮುಗಿಸುವ ಪ್ರಯತ್ನಕ್ಕೆ ಶಿರಸಿಯ ಎಸ್​ಡಿಪಿಐ ಕಚೇರಿಯಲ್ಲಿ ಸ್ಕೆಚ್ ಹಾಕಲಾಗಿತ್ತು. ನಂತರ ಚುನಾವಣೆ ಸಮಯದಲ್ಲಿ ಹಲವು ಬಾರಿ ಕೊಲೆಗೆ ಪ್ರಯತ್ನ ಮಾಡಲಾಗಿತ್ತಾದರೂ ಆತ ಒಂಟಿಯಾಗಿ ಸಿಕ್ಕಿರಲಿಲ್ಲ. ಇನ್ನು ಈತ ಒಂಟಿಯಾಗಿ ಶಿರಸಿಯ ಕಸ್ತೂರ ಬಾ ನಗರದಲ್ಲಿ ಸಿಕ್ಕಾಗ ಈತನ ಮೇಲೆ ಕಾರು ಹರಿಸಲಾಯ್ತು. ಆದರೆ ಅದರಲ್ಲಿ ಅನೀಸ್​ ಬಚಾವ್ ಆದಾಗ ಅಲ್ಲಿಯೇ ತಮ್ಮ ಗುಂಪಿನವರಿಂದ ಲಾಂಗ್, ಚಾಕು ಹಾಗೂ ರಾಡ್ ಹಿಡಿದು ಹತ್ಯೆಯ ಪ್ರಯತ್ನ ನಡೆಸಿದ್ದರು ಎನ್ನಲಾಗಿದ್ದು, ಈ ಗಲಭೆಯಲ್ಲಿ ಎಸ್​ಡಿಪಿಐ ಕಾರ್ಯಕರ್ತ ಅಸ್ಲಂಗೆ ಚಾಕು ತಗುಲಿ ಸಾವನ್ನಪ್ಪಿದ್ದನು.

Intro:ಶಿರಸಿ :
ಕರಾವಳಿ ಭಾಗದ ಮಂಗಳೂರು,ಉಡುಪಿ ಭಾಗದಲ್ಲಿದ್ದ ಧರ್ಮ ದ್ವೇಷದ ರಾಜಕಾರಣ ಉತ್ತರ ಕನ್ನಡ ಜಿಲ್ಲೆಗೂ ಆವರಿಸಿದ್ದು ಅಲ್ಪಸಂಖ್ಯಾತನೊಬ್ಬ ಬಿಜೆಪಿ ಪಕ್ಷ ಸೇರಿದ್ದಕ್ಕೆ ಕೊಲೆ ಮಾಡುವ ಪ್ರಯತ್ನದಲ್ಲಿ ತಮ್ಮವರನ್ನೇ ಕೊಲೆ ಮಾಡಿ ಈಗ ಜೈಲು ಕಂಬಿ ಎಣಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. Body:ಏಪ್ರಿಲ್ 23 ರಂದು ಮತದಾನ ನಡೆದ ರಾತ್ರಿ ವೇಳೆ ಶಿರಸಿಯ ಕಸ್ತೂರಬಾ ನಗರದ ಬಯಲಿನಲ್ಲಿ ಒಂದೇ ಕೋಮಿನ ಎರಡು ಗುಂಪಿನವರು ಹೊಡೆದಾಡಿಕೊಂಡಿದ್ರು ಈ ವೇಳೆ ಬಿಜೆಪಿ ಅಲ್ಪಸಂಖ್ಯಾತ ತಾಲೂಕುಉಪಾಧ್ಯಕ್ಷ ಅನೀಸ್ ತಹಶಿಲ್ದಾರ್ ಎಂಬುವವನಿಗೆ ಹೊಟ್ಟೆಗೆ ಚಾಕು ಇರಿದರೇ ಇದೇ ಸ್ಥಳದಲ್ಲಿದ್ದ ಎಸ್.ಡಿ.ಪಿ.ಐ ಸದಸ್ಯ ಅಸ್ಲಂ ತಮ್ಮವರದ್ದೇ ಇರಿತದಲ್ಲಿ ಸಾವನ್ನಪ್ಪಿದ್ದ.ಇನ್ನು ಪ್ರಕರಣದ ಬೆನ್ನು ಹತ್ತಿದ ಶಿರಸಿಯ ಡಿ.ವೈಎಸ್ಪಿ ಭಾಸ್ಕರ್ ನೇತ್ರತ್ವದ ತಂಡ ಪ್ರಕರಣ ಭೇದಿಸಿದ್ದು ಇದೊಂದು ರಾಜಕೀಯ ದ್ವೇಶದಿಂದ ಕೊಲೆ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಿದ್ದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಸೇರಿದಂತೆ ತಾಲೂಕು ಅಧ್ಯಕ್ಷರನ್ನು ಸಹ ಬಂಧಿಸಿದ್ದಾರೆ.‌ ಎಸ್.ಡಿ.ಪಿ.ಐ ಜಿಲ್ಲಾ ಕಾರ್ಯದರ್ಶಿ ಮಹ್ಮದ್ ಷರೀಪ್ ಶೇಖ್,ತಾಲೂಕು ಅಧ್ಯಕ್ಷ ಅಸ್ಲಮ್ ಹುಸೇನ್ ಶೇಖ್,ಭಟ್ಕಳ ಮೂಲದ ಜಿಲ್ಲಾಧ್ಯಕ್ಷ ಮಹ್ಮದ್ ತೌಫಿಕ್ ,ಅಬ್ದುಲ್ ಕರೀಮ್, ಸೇರಿದಂತೆ ಒಟ್ಟು 11 ಜನ ಎಸ್.ಡಿ.ಪಿ.ಐ ಸದಸ್ಯರನ್ನು ಬಂದಿಸುವ ಜೊತೆಗೆ ಕಚೇರಿಗೆ ದಾಳಿ ನಡೆಸಿ ಮಹತ್ವದ ದಾಖಲೆ ಸಹ ವಶಕ್ಕೆ ಪಡೆಯಲಾಗಿದೆ.
ಬೈಟ್ : (೧)
ವಿನಾಯಕ್ ಪಾಟೀಲ್, ಎಸ್.ಪಿ.ಉತ್ತರ ಕನ್ನಡ ಜಿಲ್ಲೆ.

ಅನೀಸ್ ಶಿರಸಿಯಲ್ಲಿ ಬಿಜೆಪಿ ಕಾರ್ಯಕರ್ತನಾಗಿ ಕೆಲಸಮಾಡುತಿದ್ದ ನಂತರ ಶಿರಸಿ ತಾಲೂಕಿನ ಅಲ್ಪಸಂಖ್ಯಾತ ಘಟಕದ ತಾಲೂಕು ಉಪಾಧ್ಯಕ್ಷನಾಗಿ ಹುದ್ದೆಗೇರಿದ್ದ.ಇನ್ನು ಜಿಲ್ಲೆಯಲ್ಲಿ ಎಸ್.ಡಿ.ಪಿ.ಐ ಭಟ್ಕಳದಲ್ಲಿ ಮೊದಲು ಪ್ರಾರಂಭವಾಗಿ ಕಳೆದ ವರ್ಷ ಪರೇಶ್ ಮೇಸ್ತಾ ಘಟನೆ ನಂತರ ಇಡೀ ಜಿಲ್ಲೆಯಲ್ಲಿ ತನ್ನ ಘಟಕವನ್ನು ಪ್ರರಂಭಿಸಿತ್ತು.ಇನ್ನು ಬಿಜೆಪಿ ತೊರೆದು ತಮ್ಮೊಂದಿಗೆ ಕೈಜೊಡಿಸುವಂತೆ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಮಹ್ಮದ್ ತೌಫಿಕ್,ಕಾರ್ಯದರ್ಶಿ ಮಹ್ಮದ್ ಷರೀಪ್ ಶೇಖ್ ಈತನ ಮನೊಲಿಸಲು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದರಿಂದಾಗಿ ಇವರ ನಡುವೆ ರಾಜಕೀಯ ದ್ವೇಶ ಪ್ರಾರಂಭವಾಗಿ ಬಿಜೆಪಿ ಸೇರಿದ್ದಾನೆ ಎನ್ನುವ ಕಾರಣಕ್ಕೆ ಈತನನ್ನು ಮುಗಿಸುವ ಪ್ರಯತ್ನಕ್ಕೆ ಶಿರಸಿಯ ಎಸ್.ಡಿ.ಪಿ.ಐ ಕಚೇರಿಯಲ್ಲಿ ಸ್ಕೆಚ್ ಹಾಕಲಾಯಿತು.ನಂತರ ಚುನಾವಣೆ ಸಮಯದಲ್ಲಿ ಹಲವು ಬಾರಿ ಕೊಲೆಗೆ ಪ್ರಯತ್ನ ಮಾಡಲಾಯಿತಾದರೂ ಆತ ಒಂಟಿಯಾಗಿ ಸಿಕ್ಕಿರಲಿಲ್ಲ.ಇನ್ನು ಈತ ಒಂಟಿಯಾಗಿ ಶಿರಸಿಯ ಕಸ್ತೂರಬಾ ನಗರದಲ್ಲಿ ಸಿಕ್ಕಾಗ ಈತನಮೇಲೆ ಕಾರು ಹರಸಲಾಯ್ತು ಆದರೇ ಅದರಲ್ಲಿ ಆತ ಬಚಾವ್ ಆದಾಗ ಅಲ್ಲಿಯೇ ತಮ್ಮ ಗುಂಪಿನವರಿಂದ ಲಾಂಗ್ ,ಚಾಕು ಹಾಗೂ ರಾಡ್ ಹಿಡಿದು ಹತ್ಯೆಯ ಪ್ರಯತ್ನದಲ್ಲಿ ಹತ್ಯೆ ಮಾಡಲು ಬಂದಿದ್ದ ಅಸ್ಲಂ ಗೆ ಚಾಕು ಇರಿದು ಆತ ಕೊಲೆಯಾಗಿದ್ದ.ಈಗ ಆರೋಪಿಗಳೆಲ್ಲರೂ ಬಂಧನವಾಗಿದ್ದು ಆರೋಪಿಗಳನ್ನೆಲ್ಲಾ ಬಂಧಿಸುವಲ್ಲಿ ಪೊಲೀಸರು ಯಶಸ್ಸುಕಂಡಿದ್ದಾರೆ.

ಬೈಟ್ : (೨)
ಅನಂತಕುಮಾರ್ ಹೆಗಡೆ.ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ.
Conclusion:
ಶಾಂತವಾಗಿದ್ದ ಉತ್ತರ ಕನ್ನಡ ಜಿಲ್ಲೆ ಪರೇಶ್ ಮೇಸ್ತಾ ಪ್ರಕರಣದ ನಂತರ ಹಿಂದು ಮುಸ್ಲಿಂ ರನ್ನು ಎರಡು ಭಾಗವಾಗಿ ಮಾಡಿದೆ.ಇದರ ಉಪಯೋಗವನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಂಡ್ರೆ ಜಿಲ್ಲೆಯಲ್ಲಿ ಅಸ್ತಿತ್ವವೇ ಇಲ್ಲದ ಎಸ್.ಡಿ.ಪಿ.ಐ ತನ್ನ ಬೇರನ್ನು ಬಿಡಲು ಬಳಸಿಕೊಂಡಿದೆ.ಈ ಮೂಲಕ ಜಿಲ್ಲೆಯಲ್ಲಿ ಎರಡು ಧರ್ಮಗಳನ್ನು ಒಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಜೊತೆ ಕೋಮು ಭಾವನೆಯೊಂದಿಗೆ ಗಲಭೆ ಸೃಷ್ಟಿಸುವ ಪ್ರಯತ್ನದಲ್ಲಿ ಸಾಗಿವೆ.
.......
ಸಂದೇಶ ಭಟ್ ಶಿರಸಿ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.