ETV Bharat / state

ಜಿಡಿಪಿ ಎಂದರೆ ಏನೂ ಅಂತಾನೇ ತಿಳಿಯದೇ ಕಾಂಗ್ರೆಸ್ ಭಾಷಣ ಮಾಡುತ್ತಿದೆ: ಸಂಸದ ಹೆಗಡೆ ಟೀಕೆ - Shirsi

ಜಿಡಿಪಿ ಡಿಪ್ ಆಗಿದೆ. ಹಾಗಾಗಿದೆ, ಹೀಗಾಗಿದೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ, ಜಿಡಿಪಿ ಅನ್ನೋದು ಏನು ಅಂತ ಅವರಿಗೆ ಗೊತ್ತಿಲ್ಲ. ಜಿಡಿಪಿ ಬಗ್ಗೆ ಪರಿಕಲ್ಪನೆ ಇಲ್ಲದಿರುವ ಕಾಂಗ್ರೆಸ್ ಅದ್ರ ಬಗ್ಗೆ ಭಾಷಣ ಮಾಡುತ್ತೆ ಎಂದು ಸಂಸದ ಅನಂತ ಕುಮಾರ್​ ಹೆಗಡೆ ಟೀಕಿಸಿದ್ದಾರೆ.

MP Ananta Kumar Hegde
ಸಂಸದ ಅನಂತ ಕುಮಾರ್​ ಹೆಗಡೆ
author img

By

Published : Dec 5, 2020, 7:53 PM IST

ಶಿರಸಿ: ಜಿಡಿಪಿ ಅನ್ನೋದು ಅಮುಲ್ ಬೇಬಿ ರಾಹುಲ್ ಗಾಂಧಿಗೆ ಅರ್ಥವಾಗಲ್ಲ. ಅದಕ್ಕಾಗಿ ಅವನು ಒದರಾಡುತ್ತಿರುತ್ತಾನೆ ಎಂದು ಸಂಸದ ಅನಂತ ಕುಮಾರ್​ ಹೆಗಡೆ ಟೀಕಿಸಿದರು.

ಜಿಡಿಪಿ ಬಗ್ಗೆ ಪರಿಕಲ್ಪನೆ ಇಲ್ಲದಿರುವ ಕಾಂಗ್ರೆಸ್ ಅದ್ರ ಬಗ್ಗೆ ಭಾಷಣ ಮಾಡುತ್ತೆ: ಸಂಸದ ಅನಂತ ಕುಮಾರ್​ ಹೆಗಡೆ

ಸಿದ್ದಾಪುರದಲ್ಲಿ ನಡೆದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಲ್ಲಿ ಜಿಡಿಪಿ ಡಿಪ್ ಆಗಿದೆ. ಹಾಗಾಗಿದೆ, ಹೀಗಾಗಿದೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ಜಿಡಿಪಿ ಅನ್ನೋದು ಏನು ಅಂತ ಅವರಿಗೆ ಗೊತ್ತಿಲ್ಲ. ಜಿಡಿಪಿ ಬಗ್ಗೆ ಪರಿಕಲ್ಪನೆ ಇಲ್ಲದಿರುವ ಕಾಂಗ್ರೆಸ್ ಅದರ ಬಗ್ಗೆ ಭಾಷಣ ಮಾಡುತ್ತದೆ ಎಂದರು.

ಸಿದ್ದರಾಮಯ್ಯನವರು ಸಹ ಬಿಜೆಪಿಗೆ ಬರಲು ಲೈನ್​ನಲ್ಲಿದ್ದಾರೆ.. ಅನಂತಕುಮಾರ್ ಹೆಗಡೆ

ಸಾಮಾನ್ಯವಾಗಿ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಮುಖಂಡರು ಸೇರ್ಪಡೆಯಾಗುವಾಗ ಏನೋ ವ್ಯವಹಾರ ನಡೆದಿರಬೇಕು ಅನ್ನೋ ಜಿಜ್ಞಾಸೆಗಳಿರುತ್ತವೆ. ಎಲ್ಲವನ್ನೂ ಒಂದೇ ಕನ್ನಡಿಯಲ್ಲಿ ನೋಡೋ ಅಭ್ಯಾಸ ಯಾವಾಗಲೂ ಇರಬಾರದು. ನನಗೆ ಆ ಜಾಗ ಕೊಟ್ರೆ ಬರ್ತೀನಿ, ಈ ಸೀಟ್ ಕೊಟ್ರೆ ಬರ್ತೀನಿ ಅನ್ನೋ ಈ ಕಾಲದಲ್ಲಿ ಏನೂ ಅಪೇಕ್ಷೆ ಇಲ್ಲದೇ ಬರುವವರನ್ನು ಹೃದಯಪೂರ್ವಕವಾಗಿ ಸ್ವಾಗತಿಸಬೇಕು. ಇಷ್ಟು ವರ್ಷ ಈ ದೇಶದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಆದಾಗ ಬಿಜೆಪಿ ಇರ್ಲಿಲ್ಲ. ಇದನ್ನ ಕೂಡ ನಾವು ಒಪ್ಪಿಕೊಳ್ಳಬೇಕು. ಆದರೆ ಬಿಜೆಪಿ ಹೇಗೆ ಬೆಳೆಯಿತು? ಕೆಲವರಿಗೆ ದುಡ್ಡು ಮತ್ತು ಜಾತಿ ಬಿಟ್ರೆ ಬೇರೆ ರಾಜಕೀಯ ಪರಿಭಾಷೆ ಗೊತ್ತಿಲ್ಲ. ಇದರ ಯಾವುದೇ ಹಿಡಿತಕ್ಕೆ ಸಿಗದೆ ಬಿಜೆಪಿ ಬೆಳೆದು ಬಂದಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.