ಶಿರಸಿ: ಮನೆಯಿಂದ ಯಲ್ಲಾಪುರಕ್ಕೆ ಹೋಗಿ ಬರುತ್ತೇನೆ ಎಂದು ಹೊರಟ ತಾಯಿ, ಮಗಳು ಹಾಗೂ 11 ತಿಂಗಳ ಮೊಮ್ಮಗ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗಣೇಶ ಫಾಲ್ಸ್ನಲ್ಲಿ ಪತ್ತೆಯಾಗಿದ್ದಾರೆ.
ಮನೆಯಿಂದ ಹೊರಗೆ ಹೋದ ಮೂವರು ಹಿತ್ಲಲ್ಲಿ ಗ್ರಾ.ಪಂ. ವ್ಯಾಪ್ತಿಯ ಶಾಲ್ಮಲ ನದಿಯ ಗಣೇಶ ಫಾಲ್ಸ್ನಲ್ಲಿ ಶವವಾಗಿ ಪತ್ತೆಯಾದ ಕಾರಣ ಮೃತ ರಾಜೇಶ್ವರಿ ಪತಿ ಕೊಲೆ ಶಂಕೆ ವ್ಯಕ್ತಪಡಿಸಿದ್ದು, ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದಾರೆ.
ಆದರೆ ಇದೇ ವೇಳೆ ಜೀವನದಲ್ಲಿ ಜಿಗುಪ್ಸೆ ಹೊಂದಿ ನೀರಿಗೆ ಹಾರಿರಬಹುದು ಎಂದೂ ಸಹ ದೂರಿನಲ್ಲಿ ತಿಳಿಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.